spot_img
Saturday, July 19, 2025
spot_img

ಮಾನಸಜ್ಯೋತಿ ವಿಕಲಾಂಗ ವಸತಿ ಶಾಲೆಯಲ್ಲಿ ತಮ್ಮ ಡೈಮಂಡ್ ಜ್ಯುಬಿಲಿ ಆಚರಿಸಿಕೊಂಡು ಮಾದಿರಯಾದ ನೆದರ್ಲ್ಯಾಂಡ್ ನ ಬಿರ್ಗಿಟೀ

ಜನಪ್ರತಿನಿಧಿ (ಕುಂದಾಪುರ) : ಕುಂದಾಪುರ ಕೋಣಿ ಮಾನಸಜ್ಯೋತಿ ವಿಕಲಾಂಗ ವಸತಿ ಶಾಲೆಯಲ್ಲಿ ದೂರದ ನೆದರ್ಲ್ಯಾಂಡ್ ನವರಾದ ಶ್ರೀಮತಿ ಬಿರ್ಗಿಟೀ ಅವರು ತನ್ನ ೭೫ನೇ ಜನ್ಮದಿನವನ್ನು ಶಾಲಾ ಮಕ್ಕಳೊಂದಿಗೆ ಸಂಭ್ರಮದಿಂದ ಆಚರಿಸಿಕೊಂಡು ಮಾದರಿಯಾದರು. ಬಿರ್ಗಿಟೀ ಅವರ ಮಗಳು ಮಿಸ್ ಮಾರ್ಟ್ಜೆ, ಕನ್ನಡ ಕಲಿತು  ಕಳೆದ ೧೭ ವರ್ಷದಿಂದ ಈ ಶಾಲಾ ಮಕ್ಕಳ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ.

ನಿವ್ರತ್ತ ಪ್ರಿನ್ಸಿಪಾಲರಾದ ಕೋಟದ ಸೀತಾರಾಮ ಮಧ್ಯಸ್ಥರು  ಅವರೂ ಕೂಡಾ ತಮ್ಮ ೭೫ನೇ ಹುಟ್ಟುಹಬ್ಬವನ್ನಾಚರಿಸಿಕೊಂಡರು. ಇಬ್ಬರೂ ಕೂಡ ತಮ್ಮ ಡೈಮಂಡ್ ಜ್ಯುಬಿಲಿ ಜನ್ಮ ದಿನಾಚರಣೆಯನ್ನು ಜಂಟಿಯಾಗಿ ಆಚರಿಸಿಕೊಂಡು ಮಾದರಿಯಾದರು.

ಈ ಸಂದರ್ಭದಲ್ಲಿ ಶಾಲಾವತಿಯಿಂದ ಇಬ್ಬರನ್ನೂ ಗೌರವಿಸಲಾಯಿತು. ಶಾಲೆಯ ಅಧ್ಯಕ್ಷರಾದ ಡಾ. ಬಿ. ವಿ. ಉಡುಪ, ಖಜಾಂಚಿ  ಶ್ರೀನಿವಾಸ ಉಡುಪ , ಶ್ರೀಮತಿ ಗೀತಾ ಎಸ್. ಮಧ್ಯಸ್ಥ, ಶಾಲಾ ಉಸ್ತುವಾರಿ ಶೋಭಾ ಮಧ್ಯಸ್ಥ, ಮಾರ್ಟ್ಜೆ, ಚೇತನಾ ಹಾಗೂ ಶಾಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,400SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!