spot_img
Tuesday, March 31, 2026
spot_img

ಪರಿಷತ್ ಉಪ ಚುನಾವಣೆ: ಕಾವೇರಿದ ಚುನಾವಣ ಕಣ |ಬಿಜೆಪಿ-ಕಾಂಗ್ರೆಸ್ ನಡುವೆ ನೇರ ಹಣಾಹಣಿ

ಕುಂದಾಪುರ (ಜನಪ್ರತಿನಿಧಿ ವಿಶೇಷ) ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯನ್ನೊಳಗೊಂಡ ದಕ್ಷಿಣ ಕನ್ನಡ ಸ್ಥಳೀಯಾಡಳಿತ ಪ್ರಾಧಿಕಾರ ಚುನಾವಣೆಗೆ ಎರಡು ಪಕ್ಷಗಳು ಸಜ್ಜಾಗಿವೆ. ಕೋಟ ಶ್ರೀನಿವಾಸ ಪೂಜಾರಿಯವರಿಂದ ತೆರವಾದ ಸ್ಥಾನಕ್ಕೆ ಈ ಉಪ ಚುನಾವಣೆ ನೆಡೆಯಲಿದ್ದು ಎರಡು ಪಕ್ಷದವರ ಪ್ರಚಾರ ಜೋರಾಗಿ ನೆಡೆಯುತ್ತಿದೆ.

ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ ಒಂದೊಂದು ಸ್ಥಾನವನ್ನು ಹೊಂದಿದೆ. ಎರಡೂ ಪಕ್ಷಗಳಿಗೆ ಪ್ರತಿಷ್ಟೆಯಾಗಿರುವ ಈ ಚುನಾವಣೆಯಲ್ಲಿ ಇದೀಗ ಬಿಗು ಹೋರಾಟ ಆರಂಭಗೊಂಡಿದೆ. ಬಿಜೆಪಿಗೆ ಸ್ಥಾನ ಉಳಿಸಿಕೊಳ್ಳಬೇಕಾದ, ಕಾಂಗ್ರೆಸಿಗೆ ಕ್ಷೇತ್ರ ಕಸಿದುಕೊಳ್ಳಬೇಕಾದ ಹಠ. ಸೋಲು ಗೆಲುವಿನ ಲೆಕ್ಕಚ್ಚಾರ ಮಾತ್ರ ಸ್ಥಳೀಯಾಡಳಿತ ಸಂಸ್ಥೆಯ ಮತದಾರರದ್ದು.

ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆ, ಮಹಾ ನಗರ ಪಾಲಿಕೆ, ಲೋಕಸಭಾ ಸದಸ್ಯರು, ವಿಧಾನಸಭಾ ಸದಸ್ಯರಿಗೆ ಮತದಾನ ಮಾಡುವ ಅವಕಾಶವಿದೆ. ಆದರೆ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಗಳಿಗೆ ಚುನಾವಣೆ ನಡೆಸದಿರುವುದರಿಂದ ಅಲ್ಲಿ ಮತದಾರರಿಲ್ಲ.

ಕಾಂಗ್ರೆಸ್ ಬಿಜೆಪಿ ಎರಡೂ ಸಮಬಲದ ಹೋರಾಟ ನಡೆಸಿದರೆ ಇದರ ಮಧ್ಯದಲ್ಲಿ ಎಸ್.ಡಿ.ಪಿ.ಐ ಮತ್ತು ಪಕ್ಷೇತರರು ಕಣದಲ್ಲಿದ್ದಾರೆ. ಆದರೆ ಇದು ಬಿಜೆಪಿ ಸ್ಥಾನವಾಗಿರುವುದರಿಂದ, ಅವರೇ ಗೆದ್ದ ಕ್ಷೇತ್ರವಾಗಿರುವುದರಿಂದ ಕಾಂಗ್ರೆಸ್ ಬಿಜೆಪಿಯೊಳಗೆ ಸ್ಪರ್ಧೆ ನೇರವಾಗಿ ನಡೆಯಲಿದೆ.
ಸುಮಾರು ಆರು ಸಾವಿರದಷ್ಟು ಮತದಾರರಿರುವ ಈ ಕ್ಷೇತ್ರದಲ್ಲಿ ಗ್ರಾಮ ಪಂಚಾಯತ್ ಸದಸ್ಯರೇ ಹೆಚ್ಚು ಇದ್ದಾರೆ. ಇಲ್ಲಿ ಕಾಂಗ್ರೆಸ್‌ನ ಮಂಜುನಾಥ ಭಂಡಾರಿ ಮತ್ತು ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿಯವರು ಪ್ರಾಬಲ್ಯವನ್ನು ಹೊಂದಿದ್ದಾರೆ. ಈ ಚುನಾವಣೆ ಇಬ್ಬರಿಗೂ ಪ್ರತಿಷ್ಟೆಯಾಗಿದೆ. ಆಡಳಿತರೂಢ ಕಾಂಗ್ರೆಸ್ ತಾನು ಗೆದ್ದ ಕ್ಷೇತ್ರವಲ್ಲದಿದ್ದರೂ ಬಿಜೆಪಿಯಿಂದ ಕಸಿದುಕೊಳ್ಳಬೇಕೆಂಬ ಹಠಕ್ಕೆ ಬಿದ್ದಿದೆ. ಶತಾಯಗತಾಯ ಪ್ರಯತ್ನ ಮಾಡಿ ಗೆಲ್ಲಬೇಕೆಂಬ ಪಣತೊಟ್ಟಿದೆ. ಆದರೆ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿಯವರು ನಿರಾಯಾಸವಾಗಿ ಗೆಲ್ಲ ಬಹುದೆಂಬ ಯೋಚನೆಯಲ್ಲಿದ್ದಾರೆ. ಆದರೆ ಇದು ಚುನಾವಣೆ. ಯಾವ ಪರಿಣಾಮವನ್ನು ಕೂಡ ಬೀರ ಬಹುದು. ಅದಕ್ಕಾಗಿಯೇ ಎರಡೂ ಪಕ್ಷದವರು ಬಿಗು ಹೋರಾಟಕ್ಕೆ ಸಿದ್ದವಾಗಿದ್ದಾರೆ. ಈಗಾಗಲೇ ಬಿಜೆಪಿಯ ಬಹುತೇಕ ನಾಯಕರು ಬಂದು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಮತಗಳ ಸಂಖ್ಯೆ ಕಡಿಮೆ ಇರುವುದರಿಂದ ಎಚ್ಚರಿಕೆ ವಹಿಸಬೇಕಾದ ಅಗತ್ಯತೆ ಎರಡೂ ಪಕ್ಷದವರಿಗೆ ಇದೆ.

 

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!