Tuesday, October 22, 2024

ತಂತ್ರಾಡಿ ರಮೇಶ ನಾಯ್ಕರಿಗೆ ಪಿ.ಎಚ್.ಡಿ

ಬ್ರಹ್ಮಾವರ: ಮಂದಾರ್ತಿ ಹತ್ತಿರದ ತಂತ್ರಾಡಿಯ ರಮೇಶ ನಾಯ್ಕರಿಗೆ ಟಾಟಾ ಇನ್‌ಸ್ಟಿಟ್ಯೂಟ್ ಆಪ್ ಸೋಶಿಯಲ್ ಸೈನ್ಸ್, ಮುಂಬೈನಲ್ಲಿ ನಡೆದ 84ನೇ ಘಟಿಕೋತ್ಸವದಲ್ಲಿ ಪಿ.ಎಚ್.ಡಿ. ಪದವಿ ನೀಡಿದೆ.

ಗ್ರಾಮೀಣ ಅಭಿವೃದ್ಧಿ ಕುರಿತಾದ ಬರ ಪೀಡಿತ ಪ್ರದೇಶದಲ್ಲಿ ರೈತರ ಸ್ಥಿತಿ ಸ್ಥಾಪಕತ್ವ ಎಂಬ ಮಹಾಪ್ರಬಂಧಕ್ಕೆ ಈ ಪದವಿ ಲಭಿಸಿದೆ. ಕರ್ನಾಟಕದ ಕಲಬುರ್ಗಿ ಜಿಲ್ಲೆಯಲ್ಲಿ ನಡೆಸಲಾದ ಈ ಅಧ್ಯಯನಕ್ಕೆ ಭಾರತದ ಪ್ರತಿಷ್ಠಿತ ಸಂಸ್ಥೆಯಾದ ಟಾಟಾ ಇನಸ್ಟಿಟ್ಯೂಟ್ ಆಪ್ ಸೋಶಿಯಲ್ ಸೈನ್ಸ್ ತುಳಜಾಪುರ ಕ್ಯಾಂಪಸ್‌ನಲ್ಲಿ ಇದರ ಉಪ ನಿರ್ದೇಶಕರಾದ ಮತ್ತು ಪ್ರಾಧ್ಯಾಪಕರಾದ ಪ್ರೊ.ರಮೇಶ ಜಾರೆ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದರು. ಇವರು ಅಂತರಾಷ್ಟೀಯ ಮಟ್ಟದಲ್ಲಿ ನಮ್ಮ ದೇಶವನ್ನು ಪ್ರತಿನಿಧಿಸಿ ಥೈಲಾಂಡ್, ಸ್ವಿಡನ್‌ನ ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇವರ ಸಮಾಜ ಕಾರ್ಯದ ಸಾಧನೆಯನ್ನು ಗುರುತಿಸಿ ಕೋಲ್ಕತ್ತದಲ್ಲಿ ಸೇವಾ ಯುತ್ ಗೀಲ್ಡ್ ಹಾಗೂ ಭಾರತ ಸರ್ಕಾರದ ಯುವಜನ ಸೇವಾಕ್ರೀಡಾ ಇಲಾಖೆಯಿಂದ ೨೦೧೯ರಲ್ಲಿ ಸ್ವಾಮಿ ವಿವೇಕಾನಂದ ಎಕ್ಸಲೆನ್ಸ್ ಪ್ರಶಸ್ತಿ ಯನ್ನು ಕೋಲ್ಕತ ಅಮ್ಟಿ ವಿಶ್ವವಿದ್ಯಾಲಯದಲ್ಲಿ ಪ್ರಧಾನ ಮಾಡಲಾಯಿತು.

ಪ್ರಸ್ತುತ ತುಳಜಾಪುರ ಕ್ಯಾಂಪಸನಲ್ಲಿ ರಿಸರ್ಚ ಫೆಲೋ ಆಗಿ ಸೇವೆ ಸಲ್ಲಿಸುತ್ತಿದ್ದು, ವಾಟರ್ ಪಾಲಿಸಿ ಸೆಂಟರ್ ಔರಂಗಬಾದ್ ಮಹಾರಾಷ್ಟ್ರದಲ್ಲಿ ವಿಸಿಟಿಂಗ್ ಪೇಲೋ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಕುಡುಬಿ ಸಮಾಜದ ಪ್ರಥಮ ಪಿ.ಎಚ್.ಡಿ. ಪದವಿಧರರಾಗಿದ್ದು, ತಂತ್ರಾಡಿ ಪುಟ್ಟಯ್ಯ ನಾಯ್ಕ ಹಾಗೂ ಶ್ರೀಮತಿ ಗಿರಿಜಾ ದಂಪತಿಗಳ ಪುತ್ರ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!