Tuesday, October 22, 2024

ಮುಡಾ : ಎರಡನೇ ದಿನವೂ ಮುಂದುವಿರದ ಇಡಿ ತನಿಖೆ

ಜನಪ್ರತಿನಿಧಿ (ಮೈಸೂರು) : ಮುಡಾ ಅಕ್ರಮ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಡಾ ಕಚೇರಿ ಮೇಲೆ ಇಡಿ ಅಧಿಕಾರಿಗಳು ಇಂದು (ಶನಿವಾರ) ದಾಳಿ ಮುಂದುವರೆಸಿದ್ದಾರೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ 5 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ. 50:50 ಅನುಪಾತದಡಿ ಮುಖ್ಯಮತ್ರಿ ಸಿದ್ದರಾಯ್ಯನವರ ಪತ್ನಿ ಪಾರ್ವತಿ ಹೆಸರಿಗೂ ನಿವೇಶನ ಮಂಜೂರಾಗಿದ್ದು, ಈ ಪ್ರಕರಣದಲ್ಲಿ ಸಿದ್ದರಾಮಯ್ಯ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆಂದು ಆರೋಪಿಸಿ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರು ಇಡಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಶುಕ್ರವಾರ ಇಡಿ ಅಧಿಕಾರಿಗಳು ನಡೆಸಿದ್ದು, ಇಂದೂ ಕೂಡ ಪರಿಶೀಲನೆ ಮುಂದುವರೆಸಿದ್ದಾರೆ.

ಅಧಿಕಾರಿಗಳ ತಂಡ ಇಂದು ಬೆಳಿಗ್ಗೆ 10.50ರ ಸುಮಾರಿಗೆ ಮೈಸೂಲಿನ ಜೆಎಲ್’ಬಿ ರಸ್ತೆಯಲ್ಲಿರುವ ಮುಡಾ ಕಚೇರಿಗೆ ಭೇಟಿ ನೀಡಿದ್ದು, ಪಾರ್ವತಿ ಸಿದ್ದರಾಮಯ್ಯ ಅವರಿಗೆ ನಿವೇಶನ ಹಂಚಿಕೆ ಮಾಡಿದ ಬಗ್ಗೆ ಮೂಲ ದಾಖಲಾತಿ ಕೊಡಿ ಎಂದು ಇಡಿ ಅಧಿಕಾರಿಗಳು ಮುಡಾ ಆಯುಕ್ತರ ಬಳಿ ಕೇಳಿದ್ದಾರೆ. ಅಲ್ಲದೆ, ಪಾರ್ವತಿ ಸಿದ್ದರಾಮಯ್ಯ ಅವರು ಬದಲಿ ನಿವೇಶನ ಕೋರಿ ಬರೆದ ಪತ್ರದಲ್ಲಿ ಕೆಲ ಪದಗಳನ್ನು ವೈಟ್ನರ್ ಹಾಕಿ ಅಳಿಸಿದ್ದು ಯಾರು? ಯಾವ ಪದಗಳನ್ನು ಅಳಿಸಲಾಗಿದೆ ಎಂದೂ ಇಡಿ ಅಧಿಕಾರಿಗಳು ಮಾಹಿತಿ ಕೋರಿದ್ದಾರೆ ಈ ಬಗ್ಗೆ ಅಧಿಕಾರಿಗಳು ದಾಖಲೆಗಳ ಹುಡುಕಾಟ ಆರಂಭಿಸಿದ್ದಾರೆಂದು ತಿಳಿದುಬಂದಿದೆ.

ಇಡಿ ದಿಢೀರ್ ದಾಳಿಗೆ ಬೆಚ್ಚಿಬಿದ್ದಿರುವ ಅಧಿಕಾರಿಗಳು, ಮುಡಾಗೆ ಇತ್ತೀಚೆಗಷ್ಟೇ ವರ್ಗಾವಣೆಗೊಂಡಿರುವುದಾಗಿ ತಿಳಿಸಿದ್ದಾರೆಂದು ಮೂಲಗಳು ತಿಳಿಸಿವೆ.

ಇನ್ನು ಹಗರಣಕ್ಕೆ ಸಂಬಂಧಿಸಿದಂತೆ ಭೂ ಮಾಲೀಕ ದೇವರಾಜ್‌ ಮನೆಯಲ್ಲಿ ತಡರಾತ್ರಿವರೆಗೂ ಇಡಿ ಶೋಧ ನಡೆಸಿದೆ. ಮಧ್ಯರಾತ್ರಿ 12 ಗಂಟೆ ವರೆಗೂ ಇಡಿ ವಿಚಾರಣೆ ನಡೆಸಿದ್ದು, ಪ್ರಮುಖ ದಾಖಲೆಗಳ ಪರಿಶೀಲನೆ ಮಾಡಿದ್ದಾರೆಂದು ತಿಳಿದುಬಂದಿದೆ.

ದೇವರಾಜ್ ಕುಟುಂಬಕ್ಕೆ ಮೈಸೂರಿನ ಜಾಮೀನು ಬಂದಿದ್ದು ಹೇಗೆ? ಅದರ ಮೂಲ ಯಾವುದು? ಅದನ್ನ ಯಾವಾಗ ಮಾರಾಟ ಮಾಡಿದ್ದು? ಹೀಗೆ ನಾನಾ ವಿಚಾರಗಳ ಬಗ್ಗೆ ಹಾಗೂ ದಾಖಲೆಗಳ‌ ಬಗ್ಗೆ ಇ.ಡಿ ಅಧಿಕಾರಿಗಳು ಸುದೀರ್ಘ ವಿಚಾರಣೆ ನಡೆಸಿದ್ದಾರೆಂದು ವರದಿಗಳು ತಿಳಿಸಿವೆ.

ಸಿಎಂ ವಿರುದ್ಧದ ಮುಡಾ ಹಗರಣ ಆರೋಪ ಪ್ರಕರಣದಲ್ಲಿ ಸೈಟ್‌ನ ಮೂಲ ಮಾಲೀಕ ದೇವರಾಜ್‌. ಲೋಕಾಯುಕ್ತ ದಾಖಲಿಸಿಕೊಂಡಿರುವ ದೂರಿನಲ್ಲಿ ಎ4 ಆರೋಪಿಯಾಗಿದ್ದಾರೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ವಿಚಾರದಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿದೆ. 50-50 ಅನುಪಾತದಡಿ ಸರಿಯಾಗಿ ಹಂಚಿಕೆ ಮಾಡದೆ ಬೇಕಾಬಿಟ್ಟಿ ಹಂಚಿಕೆ ಮಾಡಲಾಗಿದ್ದು ಅಂದಾಜು 5 ಸಾವಿರ ಕೋಟಿಯಷ್ಟು ಭಾರೀ ಅಕ್ರಮ ನಡೆದಿದೆ ಎಂದು ಹೇಳಲಾಗುತ್ತಿದೆ.

ಈ ವಿಚಾರವಾಗಿ ನಗರಾಭಿವೃದ್ಧಿ ಇಲಾಖೆಗೆಗೆ ಕಳೆದ ಒಂದು ವರ್ಷದಿಂದ 15 ಪತ್ರಗಳನ್ನು ಬರೆದಿದ್ದ ಮೈಸೂರು ಜಿಲ್ಲಾಧಿಕಾರಿ ಕೆ ವಿ ರಾಜೇಂದ್ರ ಅವರು 50- 50 ಅನುಪಾತವನ್ನು ರದ್ದು ಪಡಿಸಿ ಸೂಕ್ತ ಕ್ರ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದರು. ಜೊತೆಗೆ ತನಿಖಾ ಸಮಿತಿ ರಚಿಸಿ ಮುಡಾ ಆಯಕ್ತರ ವಿಚಾರಣೆ ಮಾಡುವ ಅಗತ್ಯವಿದೆ ಎಂದು ಪತ್ರದಲ್ಲಿ ತಿಳಿಸಿದ್ದರು. ಆದರೆ ಸರ್ಕಾರ ಮಾತ್ರ ಯಾವುದೇ ಕ್ರಮ ಕೈಗೊಂಡಿರಲಿಲ್ಲ.

ಯಾವುದೇ ಒಂದು ಬಡಾವಣೆ ನಿರ್ಮಾಣ ಮಾಡುವಾಗ ನಗರಾಭಿವೃದ್ಧಿ ಪ್ರಾಧಿಕಾರಿಗಳು ರೈತರನ್ನು ಒಪ್ಪಿಸಿ ಭೂಸ್ವಾಧೀನ ಮಾಡಬೇಕಾಗುತ್ತದೆ. ಹೀಗೆ ಮಾಡುವ ಸಂದರ್ಭದಲ್ಲಿ ರೈತರಿಗೆ ಪರಿಹಾರ ರೂಪದಲ್ಲಿ ಭೂಮಿಯ ಮೌಲ್ಯದಷ್ಟೇ ಹಣವನ್ನು ಅಥವಾ ಲೇಔಟ್ ಮಾಡುವಾಗ ಶೇ 50ರಷ್ಟು ನಿವೇಶನಗಳನ್ನು ನೀಡಬೇಕೆಂಬ ಒಪ್ಪಂದವಾಗುತ್ತದೆ. ಇವೆರಡೂ ಅಲ್ಲದಿದ್ದರೆ ವಶಪಡಿಸಿಕೊಂಡ ಭೂಮಿಯ ಮೌಲ್ಯದಷ್ಟೇ ಭೂಮಿಯನ್ನು ಇನ್ನೊಂದು ಕಡೆ ಗುರುತು ಮಾಡಿ ನೀಡುವುದು ಪ್ರಾಧಿಕಾರದ ಹೊಣೆಗಾರಿಕೆಯಾಗಿರುತ್ತದೆ.ಆದರೆ ಮೈಸೂರಿನಲ್ಲಿ ನಿರ್ಮಿಸಲ್ಪಟ್ಟ ಬಡಾವಣೆಗಳಲ್ಲಿ ಆ ರೀತಿ ಯಾವುದೇ ಮಾನದಂಡವನ್ನು ಅನುಸರಿಸಲಾಗಿಲ್ಲ ಎಂಬುದು ಈಗ ಕೇಳಿ ಬಂದಿರುವ ಆರೋಪವಾಗಿದೆ.

ಹಲವಾರು ಪ್ರಕಣದಲ್ಲಿ ಭೂ ಮಾಲೀಕರಿಗೆ ಪರಿಹಾರ ನೀಡಿಲ್ಲ. ಶೇಕಡಾ 50ರಷ್ಟು ನಿವೇಶನಗಳನ್ನೂ ನೀಡಿಲ್ಲ, ಬೇರೆಡೆ ಭೂಮಿಯನ್ನೂ ನಿಗದಿಪಡಿಸಿಲ್ಲ. ಅದಕ್ಕೆ ಬದಲಾಗಿ ಅರ್ಜಿಗಳಲ್ಲಿನ ಹಿರಿತನ ಪರಿಗಣಿಸದೆ ಅಕ್ರಮವಾಗಿ ಸೈಟ್ ಗಳನ್ನು ನೀಡಲಾಗಿದೆ ಎಂಬುದು ಕೇಳಿ ಬಂದಿರುವ ಆರೋಪವಾಗಿದೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!