Friday, October 18, 2024

ವಿದ್ಯಾರ್ಥಿಗಳಿಗೆ ಗುರಿ ಸಾಧಿಸುವ ಛಲ ಬೇಕು- ಎಸ್. ಜನಾರ್ದನ ಮರವಂತೆ

ಮರವಂತೆ : ವಿದ್ಯಾರ್ಥಿಗಳು ತಮ್ಮ ಕಲಿಕೆಯಲ್ಲಿ ತಲಪಬೇಕಾದ ಗುರಿ ನಿಗದಿ ಮಾಡಿಕೊಳ್ಳಬೇಕು. ಆ ಗುರಿಯನ್ನು ಸಾಧಿಸುವ ಛಲದೊಂದಿಗೆ ಸಾಧನೆ ನಡೆಸಬೇಕು ಎಂದು ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಮರವಂತೆ ಹೇಳಿದರು.

ನವೀನಚಂದ್ರ ಮರವಂತೆ ಸ್ಮಾರಕ ದತ್ತಿನಿಧಿಯು ಊರಿನ ಕನ್ನಡ ಖಾರ್ವಿ ಸಮುದಾಯದ ವಿದ್ಯಾರ್ಥಿಗಳಿಗೆ ಶಿಷ್ಯವೇತನ ವಿತರಿಸಲು ಇಲ್ಲಿನ ಸಾಧನಾ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಶಿಷ್ಯವೇತನ ವಿತರಿಸಿ ಮಾತನಾಡಿದರು.

ಸ್ವಾಗತಿಸಿದ ದತ್ತಿನಿಧಿಯ ಸಂಸ್ಥಾಪಕ ಎಂ. ಶಂಕರ ಖಾರ್ವಿ ತಮ್ಮ ವಿದ್ಯಾರ್ಥಿ ಜೀವನದಲ್ಲಿ ಎದುರಿಸಿದ ಸಂಕಷ್ಟಗಳನ್ನು ನೆನಪಿಸಿಕೊಂಡರು. ಆ ಹಿನ್ನೆಲೆಯಲ್ಲಿ ಅಕಾಲಿಕವಾಗಿ ಅಗಲಿದ ತಮ್ಮ ಪುತ್ರ ನವೀನಚಂದ್ರರ ಹೆಸರಿನಲ್ಲಿ ವಿವಿಧ ಹಂತಗಳಲ್ಲಿ ಕಲಿಯುತ್ತಿರುವ ಸಮುದಾಯದ ವಿದ್ಯಾರ್ಥಿಗಳಿಗೆ ಕಳೆದ ಆರು ವರ್ಷಗಳಿಂದ ಶಿಷ್ಯವೇತನ ನೀಡುತ್ತ ಬರಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ೧೮ ವಿದ್ಯಾರ್ಥಿಗಳಿಗೆ ಒಟ್ಟು ರೂ ೧.೫ ಲಕ್ಷ ಮೊತ್ತದ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಸಮುದಾಯದ ಹಿರಿಯರಾದ ಪಿ. ಸಂಜೀವ ಖಾರ್ವಿ ವಂದಿಸಿದರು. ಮನೋಹರ ಖಾರ್ವಿ ಸಹಕರಿಸಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!