spot_img
Saturday, February 14, 2026
spot_img

ಖರ್ಗೆಯವರಿಗೆ ಕಾಂಗ್ರೆಸ್-ಭಯೋತ್ಪಾದಕರ ಜೊತೆಗಿನ ಮಧುರ ಬಾಂಧವ್ಯ ಮರೆತು ಹೋಗಿದೆ ! : ಬಿಜೆಪಿ

ಜನಪ್ರತಿನಿಧಿ (ಬೆಂಗಳೂರು) : ಗಾಜಿನ ಮನೆಯಲ್ಲಿ ಕುಳಿತು ಕಲ್ಲು ತೂರುವ ಅಭ್ಯಾಸವಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅವರಿಗೆ, ನೆನಪಿನ ಶಕ್ತಿ ಕಡಿಮೆಯಾಗಿದ್ದರಿಂದ ಕಾಂಗ್ರೆಸ್-ಭಯೋತ್ಪಾದಕರ ಜೊತೆಗಿನ ಮಧುರ ಬಾಂಧವ್ಯ ಮರೆತು ಹೋಗಿದೆ ! ಎಂದು ಕಾಂಗ್ರೆಸ್‌ ವಿರುದ್ಧ ಬಿಜೆಪಿ ಹರಿಹಾಯ್ದಿದೆ.

ಕಾಶ್ಮೀರದಲ್ಲಿ ನರಮೇಧ ನಡೆಸಿದ್ದ ಭಯೋತ್ಪಾದಕ ಯಾಸಿನ್ ಮಲಿಕ್‌ನೊಂದಿಗೆ ಅಂದು ಡಾ.ಮನಮೋಹನ್ ಸಿಂಗ್ ಹಸ್ತಲಾಘವ ಮಾಡಿ, ದೇಶದ ಭದ್ರತೆಯೊಂದಿಗೆ ರಾಜಿ ಮಾಡಿಕೊಂಡಿದ್ದು, ಯಾವ ಪಕ್ಷದವರು ಖರ್ಗೆಯವರೇ? ಎಂದು ಪ್ರಶ್ನಿಸಿದೆ.

ಸಿಖ್ ಹತ್ಯಾಕಾಂಡದ ರೂವಾರಿಯನ್ನು ಮೆರವಣಿಗೆ ಮಾಡಿದ್ದು, ಮುಂಬೈ ದಾಳಿಯ ಉಗ್ರನಿಗೆ ರಾಜಾತಿಥ್ಯ ನೀಡಿದ್ದು, ದೇಶದ್ರೋಹಿ ಎಸ್‌ಡಿಪಿಐ, ಪಿಎಫ್ಐ ಜೊತೆಗಿನ ನೆಂಟಸ್ತಿಕೆ ಬೆಳೆಸಿದ್ದು, ದೇಶವಿರೋಧಿಗಳ ಮೇಲಿನ ಕೇಸ್ ವಾಪಸ್ ಪಡೆದಿದ್ದು ತಮ್ಮದೇ ಪಕ್ಷವಲ್ಲವೇ?  ಅತಿಯಾದ ಓಲೈಕೆ, ಹಿಂದು ವಿರೋಧಿ ನೀತಿಗಳಿಂದಲೇ ಕಾಂಗ್ರೆಸ್ ಅಧ:ಪತನ ತಲುಪಿದ್ದು ಎಂಬ ವರದಿ ನೀಡಿದ್ದು, ತಮ್ಮದೇ ಪಕ್ಷದ ಎ.ಕೆ. ಆ್ಯಂಟನಿ. ಆ ವರದಿ ಓದಿಲ್ಲವೇ? ಬಿಡುವಿದ್ದರೇ ಒಮ್ಮೆ ಓದಿ ಖರ್ಗೆಯವರೇ.!  ಎಂದು ಬಿಜೆಪಿ ಹೇಳಿದೆ.

https://x.com/BJP4Karnataka/status/1845671651419283515?t=Wt_ORbvO7rJrwibXLBCPLg&s=08

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!