Friday, October 18, 2024

ಹಿರಿಯ ಭಜನಾಪಟು ನಿಡೂಟಿ ಶೀನಪ್ಪ ಶೆಟ್ಟಿ ನಿಧನ

ಕುಂದಾಪುರ: ಪ್ರಸಿದ್ಧ ಭಜನಾಪಟು ಕುಂದಾಪುರ ತಾಲೂಕು ಹೊಸೂರು ಸಮೀಪದ ನಿಡೂಟಿ ಶೀನಪ್ಪ ಶೆಟ್ಟಿ (76ವ) ಅಲ್ಪಕಾಲದ ಅಸೌಖ್ಯದಿಂದ ಅ.13ರಂದು ನಿಧನರಾದರು.

ದಿ.ಮಾದಯ್ಯ ಶೆಟ್ಟಿ ಮತ್ತು ದಿ. ಚಂದಮ್ಮ ಶೆಟ್ಟಿಯವರ ಒಂಭತ್ತು ಮಕ್ಕಳಲ್ಲಿ ಜ್ಯೇಷ್ಠ ಪುತ್ರರಾಗಿ ಆಗಸ್ಟ್ 8-1948ರಂದು ಜನಿಸಿದ ಇವರು 1963ರಲ್ಲಿ ಮೇಲ್ ಹೊಸೂರು ನಿಡೂಟಿಗೆ ಬಂದು ಕೃಷಿ ಕಾರ್ಯದಲ್ಲಿ ನಿರತರಾದರು. ಮೇ.25-1972ರಲ್ಲಿ ಶಾಂತ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಶ್ರೀರಾಮ ಭಜನೆಯಲ್ಲಿ ಪರಿಣತಿ ಪಡೆದ ಇವರು ಕೆರಾಡಿ ಗೊಳಿಮನೆ ದಿ.ಗೋವಿಂದ ಕೊಠಾರಿ, ಅಪ್ಪು ಕೊಠಾರಿ ಅವರಿಂದ ಹೆಚ್ಚಿನ ಭಜನೆ ಕುಣಿತ ಕಲಿತರು.ಸುಮಾರು 500ಕ್ಕೂ ಹೆಚ್ಚು ದಾಸರ ಪದಗಳು ಇವರಿಗೆ ಕಂಠಸ್ಥಾಯಿಯಾಗಿದೆ. ಸಾವಿರಾರು ಭಜನಾ ಕಾರ್ಯಕ್ರಮಗಳಲ್ಲಿ ಇವರು ಭಾಗವಹಿಸಿದ್ದಾರೆ. ಉಡುಪಿ, ಮಂಗಳೂರು, ಶಿವಮೊಗ್ಗ ಜಿಲ್ಲೆ ಮಾತ್ರವಲ್ಲದೆ ಬೇರೆ ಬೇರೆ ಕಡೆ ಆಹ್ವಾನಿತರಾಗಿ ಭಜನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಸಾವಿರಾರು ಶಿಷ್ಯವೃಂದವರು ಇವರು ಹೊಂದಿದ್ದಾರೆ. ಪರಂಪರೆಯ ಕುಣಿತ ಭಜನೆ ಇವರಲ್ಲಿ ಕಾಣಬಹುದಿತ್ತು. ಅದ್ಬುತ ಕಂಠಸಿರಿ ಹೊಂದಿದ್ದ ಇವರು ತುಂಬಾ ಹಳೆಯ ಸಂಕೀರ್ತನೆ, ರಾಮ ಭಜನೆ, ದಾಸರ ಕೀರ್ತನೆಗಳನ್ನು ಅತ್ಯಂತ ಧ್ವನಿಪೂರ್ಣತೆಯಲ್ಲಿ ಪ್ರಸ್ತುತ ಪಡಿಸುತ್ತಿದ್ದರು.

ಇವರ ಧಾರ್ಮಿಕ ಸೇವೆಗೆ ಉನ್ನತ ಮಟ್ಟದ ಸನ್ಮಾನ, ಗೌರವಗಳು ಸಲ್ಲಬೇಕಾಗಿತ್ತು. ಆದರೂ ಸ್ಥಳೀಯ ಸಂಘ ಸಂಸ್ಥೆಗಳು ಅವರನ್ನು ಗುರುತಿಸಿ ಸನ್ಮಾನಿಸಿದ್ದವು. ಮುಖ್ಯವಾಗಿ ಯಕ್ಷಪ್ರೇಮಿ ಜಯರಾಮ ಶೆಟ್ಟಿ ಹೊಸೂರು ನೇತೃತ್ವದಲ್ಲಿ ವಿಶೇಷವಾಗಿ ಸನ್ಮಾನಿಸಲಾಗಿತ್ತು.

ಸಹಕಾರಿ ಕ್ಷೇತ್ರದಲ್ಲೂ ಗುರುತಿಸಿಕೊಂಡ ಇವರು ವಂಡ್ಸೆ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಮೃತರು ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಅಂತಿಮ ದರ್ಶನ:
ಬೈಂದೂರು ಕ್ಷೇತ್ರದ ಶಾಸಕರಾದ ಗುರುರಾಜ ಗಂಟಿಹೊಳೆ, ಮಾಜಿ ಶಾಸಕರಾದ ಬಿ.ಎಂ.ಸುಕುಮಾರ ಶೆಟ್ಟಿ, ಕೆ.ಗೋಪಾಲ ಪೂಜಾರಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಬಾಬು ಶೆಟ್ಟಿ, ವಂಡ್ಸೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಎನ್.ಮಂಜಯ್ಯ ಶೆಟ್ಟಿ ಸಬ್ಲಾಡಿ, ಕೊಲ್ಲೂರು ದೇವಳದ ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯರಾದ ವಂಡಬಳ್ಳಿ ಜಯರಾಮ ಶೆಟ್ಟಿ, ಡಾ.ಅತುಲ್ ಕುಮಾರ್ ಶೆಟ್ಟಿ, ಜಿ.ಪಂ.ಮಾಜಿ ಸದಸ್ಯರಾದ ಮಂಜಯ್ಯ ಶೆಟ್ಟಿ ಹರ್ಕೂರು, ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ನಾರಾಯಣ ಹೆಗ್ಡೆ ತಗ್ಗರ್ಸೆ, ವಿವಿಧ ಭಜನಾ ಮಂಡಳಿಗಳ ಮುಖ್ಯಸ್ಥರು, ಧಾರ್ಮಿಕ ಮುಖಂಡರು, ಸಹಕಾರಿ ಸದಸ್ಯರು ಮೃತರ ಅಂತಿಮ ದರ್ಶನ ಪಡೆದು, ಸಂತಾಪ ಸೂಚಿಸಿದರು.

ಸಂತಾಪ:
ನಿಡೂಟಿ ಶೀನಪ್ಪ ಶೆಟ್ಟಿ ನಿಧನಕ್ಕೆ ವಂಡ್ಸೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಎನ್.ಮಂಜಯ್ಯ ಶೆಟ್ಟಿ ಸಬ್ಲಾಡಿ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!