spot_img
Wednesday, January 22, 2025
spot_img

ಕಸ್ತೂರಿ ರಂಗನ್ ವರದಿ ಆತಂಕಕ್ಕೆ ಬಿಜೆಪಿಯ ಜನಪ್ರತಿನಿಧಿಗಳೆ ಕಾರಣ : ವಿಕಾಸ್‌ ಹೆಗ್ಡೆ ಆಕ್ರೋಶ

ಜನಪ್ರತಿನಿಧಿ (ಉಡುಪಿ/ಕುಂದಾಪುರ ) : ಕಸ್ತೂರಿ ರಂಗನ್ ವರದಿ ಆತಂಕಕ್ಕೆ ಬಿಜೆಪಿಯ ಜನಪ್ರತಿನಿಧಿಗಳೆ ಕಾರಣ. ಕಳೆದ ಹಲವು ವರ್ಷಗಳಿಂದ ಕರಾವಳಿಯಲ್ಲಿ ಬಿಜೆಪಿ ಸಂಸದರು ಹಾಗೂ ಶಾಸಕರುಗಳಿಗೆ ಹೆಚ್ಚಾಗಿ ಆಯ್ಕೆಯಾಗುತ್ತಿದ್ದಾರೆ. ಇವತ್ತಿನ ಕಸ್ತೂರಿ ರಂಗನ್ ವರದಿಯಲ್ಲಿನ ಜನವಿರೋಧಿ ಅಂಶಗಳಿಗೆ ಬಿಜೆಪಿ ಜನಪ್ರತಿನಿದಿನಗಳ ಅಸಮರ್ಥತೆ ಹಾಗೂ ನಿಶ್ಕ್ರಿಯತೆಯೇ ಕಾರಣ ಎಂದು ಜಿಲ್ಲಾ ಕಾಂಗ್ರೆಸ್‌ ವಕ್ತಾರ ಕೆ. ವಿಕಾಸ್ ಹೆಗ್ಡೆ ಆಕ್ರೋಶ ಹೊರ ಹಾಕಿದ್ದಾರೆ.

ಕಳೆದ ಹತ್ತು ವರ್ಷಗಳಿಂದ ಕಸ್ತೂರಿ ರಂಗನ್ ವರದಿ ಜಾರಿಯ ಕುರಿತು ಕೇಂದ್ರ ಸರ್ಕಾರದಿಂದ ಆರು ಭಾರಿ ಅಧಿಸೂಚನೆ ಜಾರಿಯಾಗಿದೆ ಆದರೆ ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ವರದಿ ಕುರಿತು ನಡೆಸಿದ ಸಭೆಯಲ್ಲಿ ಕೇರಳದ ಸಂಸದರು ಸಕ್ರಿಯವಾಗಿ ಭಾಗವಹಿಸಿ ಅದರ ಅಸಮರ್ಪಕ ಹಾಗೂ ಜನವಿರೋಧಿ, ರೈತ ವಿರೋಧಿ ಅಂಶಗಳ ಬಗ್ಗೆ ಮನವರಿಕೆ ಮಾಡಿ ಇವತ್ತು ಗಣನೀಯ ವಿನಾಯಿತಿ ಪಡೆದಿದ್ದಾರೆ ಆದರೆ ನಮ್ಮ ಸಂಸದರುಗಳು ಕಸ್ತೂರಿ ರಂಗನ್ ವರದಿಯಲ್ಲಿನ ಅಸಮರ್ಪಕ ವಿಚಾರಗಳ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯಲು ವಿಫಲರಾಗಿರುವುದೇ ಇವತ್ತಿನ ಕಸ್ತೂರಿ ರಂಗನ್ ವರದಿ ಕುರಿತ ಆತಂಕಗಳಿಗೆ ಕಾರಣ ಎಂದು ಅವರು ಆರೋಪಿಸಿದ್ದಾರೆ.

ಮಾತನಾಡಬೇಕಾದ ಸಭೆಯಲ್ಲಿ ಮಾತನಾಡದ ಬಿಜೆಪಿ ಜನಪ್ರತಿನಿದಿನಗಳು ಈಗ ಕಸ್ತೂರಿ ರಂಗನ್ ವರದಿ ವಿರೋಧಿ ಸಭೆಯಲ್ಲಿ ಹೋಗಿ ಭಾಷಣ ಮಾಡುವುದು ಕೇವಲ ಜನರನ್ನು ದಾರಿ ತಪ್ಪಿಸುವ ನಿಲುವಾಗಿದೆ. ಇನ್ನಾದರೂ ಬಿಜೆಪಿ ಜನಪ್ರತಿನಿಧಿನಗಳು ಭಾವನಾತ್ಮಕ ವಿಚಾರಗಳಿಂದ ರಾಜಕಾರಣ ಮಾಡುವುದನ್ನು ಬಿಟ್ಟು ಜನಪರ ವಿಚಾರಗಳ ಬಗ್ಗೆ ಗಮನ ಹರಿಸಲಿ ಎಂದವರು ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!