Friday, October 18, 2024

ಕುಂದಾಪುರ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಅರ್ಥಪೂರ್ಣವಾಗಿ ನಡೆದ ದಸರಾ ಉತ್ಸವ

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸುಣ್ಣಾರಿಯಲ್ಲಿರುವ ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆಗಳ ಜೊತೆಗೆ ನಾಡಹಬ್ಬಗಳ ಆಚರಣೆಯನ್ನು ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಯೊಂದಿಗೆ ಪ್ರತಿವರ್ಷವೂ ಆಚರಿಸುತ್ತಿದ್ದು ನಾಡಹಬ್ಬವಾದ ದಸರಾ ಉತ್ಸವ ಹಾಗೂ ನವದುರ್ಗಾ ಪೂಜೆ ಇದರ ಆಚರಣೆಯನ್ನು ಅದ್ದೂರಿಯಾಗಿ, ಒಂಭತ್ತು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳ ಕಾರ್‍ಯಕ್ರಮಗಳೊಂದಿಗೆ ಆಚರಿಸಲಾಯಿತು.

ಅ.3ರಂದು ಎಂ.ಎಂ ಹೆಗ್ಡೆ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್ (ರಿ.)ನ ಅಧ್ಯಕ್ಷರಾದ ಎಂ. ಮಹೇಶ್ ಹೆಗ್ಡೆಯವರ ನೇತೃತ್ವದಲ್ಲಿ ಅದ್ದೂರಿಯಾಗಿ ಒಂಭತ್ತು ದಿನಗಳ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ನಾಡಹಬ್ಬವಾದ ದಸರಾ ಉತ್ಸವದ ಮಹತ್ವ, ನವದುರ್ಗಾ ಆಚರಣೆಯ ಮಹತ್ವ ಹಾಗೂ ಸನಾತನ ಹಿಂದೂಧರ್ಮದ ಮಹತ್ವದಲ್ಲಿ ಆಯುಧ ಪೂಜೆಯ ಮಹತ್ವವನ್ನು ಶ್ರೀರಾಮನ ಕಥೆ ಹಾಗೂ ಪಾಂಡವರ ಅಜ್ಞಾತವಾಸದ ಕಥೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಹೇಳಿ ಶುಭ ಹಾರೈಸಿದರು.

ಸಂಸ್ಥೆಯ ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿಯವರು ನಾಡ ಹಬ್ಬದ ವೈಶಿಷ್ಠ್ಯತೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿ ಪ್ರತಿ ದಿನವೂ ಆಯಾಯ ದಿನಗಳ ಮಹತ್ವ ಹಾಗೂ ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಸುಂದರ ಕಾರ್ಯಕ್ರವನ್ನು ನಡೆಸಿಕೊಡುವಂತೆ ಎಲ್ಲಾ ವಿದ್ಯಾರ್ಥಿಗಳಿಗೆ ಸಂದೇಶವನ್ನು ನೀಡಿದರು.

ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕಿಯಾದ ಸರೋಜಿನಿ ಆಚಾರ್ಯರವರು ನಾಡ ಹಬ್ಬದ ವೈಶಿಷ್ಠ್ಯತೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.

ಪ್ರತಿ ದಿನವೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಆ ದಿನದ ದುರ್ಗೆಯ ಮಹತ್ವವನ್ನು ಆ ದಿನದ ಉಡುಗೆ-ತೊಡುಗೆಗಳೊಂದಿಗೆ ವಿಭಿನ್ನ ರೀತಿಯಲ್ಲಿ ನವದುರ್ಗಾ ಆಚರಣೆಯನ್ನು ಸಂಗೀತ, ನೃತ್ಯ, ನೃತ್ಯರೂಪಕ, ಪ್ರಹಸನ, ನಾಟಕ, ಯಕ್ಷಗಾನ ಈ ರೀತಿಯ ವೈವಿಧ್ಯತೆಗಳಿಂದ ಕಾರ್ಯಕ್ರಮವನ್ನು ಚಂದಗಾಣಿಸಿದರು. ಪ್ರತಿ ದಿನವೂ ಈ ಕಾರ್ಯಕ್ರಮಕ್ಕೆ ಸಂಸ್ಥೆಯ ಅಧ್ಯಕ್ಷರು, ಪ್ರಾಂಶುಪಾಲರು, ಮುಖ್ಯಶಿಕ್ಷಕಿ, ಉಪನ್ಯಾಸಕ ವೃಂದದವರು, ಶಿಕ್ಷಕರು ಹಾಗೂ ಶಿಕ್ಷಕೇತರ ವೃಂದದವರು ಆ ದಿನದ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು.

ಅ.11ರಂದು ನವರಾತ್ರಿಯ ಮಹಾನವಮಿಯನ್ನು ಅದ್ದೂರಿಯಾಗಿ ಆಯೋಜಿಸಲಾಯಿತು. ಸತತ ಒಂಭತ್ತು ದಿನಗಳ ಕಾಲ ನಡೆದ ಪ್ರತಿ ತರಗತಿಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಭಾಷಾ ಉಪನ್ಯಾಸಕ ತೀರ್ಪುಗಾರರು ಆಯಾಯ ಕಾರ್ಯಕ್ರಮವನ್ನು ವೀಕ್ಷಿಸಿ ಅದರಲ್ಲಿ ಸುಂದರವಾಗಿ ಮೂಡಿಬಂದ ಕಾರ್ಯಕ್ರಮವನ್ನು ಗುರುತಿಸಿ ಸಂಸ್ಥೆಯ ಅಧ್ಯಕ್ಷರ ಹಾಗೂ ಪ್ರಾಂಶುಪಾಲರ ಸಮ್ಮುಖದಲ್ಲಿ ವಿಶೇಷ ಬಹುಮಾನವನ್ನು ವಿತರಿಸಲಾಯಿತು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!