Thursday, November 14, 2024

ಕಾಂತಾವರ ಕನ್ನಡ ಸಂಘದ ದತ್ತಿ ಪ್ರಶಸ್ತಿ ಘೋಷಣೆ

ಜನಪ್ರತಿನಿಧಿ (ಮಂಗಳೂರು ) : ಕಾಂತಾವರ ಕನ್ನಡ ಸಂಘದ ೨೦೨೪ನೇ ಸಾಲಿನ ನಾಲ್ಕು ದತ್ತಿನಿಧಿ ಪ್ರಶಸ್ತಿಗಳನ್ನು ಘೋಷಣೆ ಮಾಡಲಾಗಿದೆ.

ಸರಸ್ವತಿ ಬಲ್ಲಾಳ್‌ ಹಾಗೂ ಡಾ. ಸಿ. ಕೆ ಬಲ್ಲಾಳ್‌ ದಂಪತಿ ಪ್ರತಿಷ್ಠಾನದಿಂದ ನೀಡುವ ʼಕರ್ನಾಟಕ ಏಕೀಕರಣದ ನೇತಾರ ಕೆ.ಬಿ.ಜಿನರಾಜ ಹೆಗ್ಡೆ ಸ್ಮಾರಕ ಸಾಂಸ್ಕೃತಿಕ ಪ್ರಶಸ್ತಿಯನ್ನು ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಹಾಗೂ ತುಳು ಬದುಕು ವಸ್ತು ಸಂಗ್ರಹಾಲಯದ ಸ್ಥಾಪಕರಾದ ಇತಿಹಾಸ ಪ್ರಾಧ್ಯಾಪಕ ತುಕಾರಾಮ ಪೂಜಾರಿ ಅವರಿಗೆ, ಹಿರಿಯ ಭಾಷಾತಜ್ಞ ಯು.ಪಿ. ಉಪಾಧ್ಯಾಯ ಅವರ ಹೆಸರಿನ ʼಮಹೋಪಾಧ್ಯಾಯ ಪ್ರಶಸ್ತಿʼಯನ್ನು ಕರಾವಳಿ ಭಾಗದ ಕನ್ನಡ ಸಾಹಿತ್ಯ ವಲಯದ ಮುಖ್ಯ ಸಂಪನ್ಮೂಲ ವ್ಯಕ್ತಿ ಆಗಿರುವ ಪ್ರೊ. ವರದರಾಜ ಚಂದ್ರಗಿರಿ ಅವರಿಗೆ ನೀಡಲಾಗುವುದು.

ಧಾರವಾಡದ ಹಿರಿಯ ಸಾಹಿತಿ ಜಿ.ಎಂ ಹೆಗಡೆ ಅವರ ಧತ್ತಿನಿಧಿಯ ʼಪ್ರಾಧ್ಯಾಪಕ ಸಂಶೋಧಕ ಪ್ರಶಸ್ತಿʼಯನ್ನು ಕಾಸರಗೋಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾದ್ಯಾಪಕಿ ಯು. ಮಹೇಶ್ವರಿ ಅವರಿಗೆ ಹಾಗೂ ಹಿರಿಯ ರಂಗಕರ್ಮಿ ಶ್ರೀಪತಿ ಮಂಜನಬೈಲ್‌ ಅವರು ಸ್ಥಾಪಿಸಿದ ದತ್ತಿನಿಧಿಯಿಂದ ಕೊಡಲಾಗುವ ʼಮಂಜನಬೈಲ್‌ ರಂಗಸನ್ಮಾನ್‌ ಪ್ರಶಸ್ತಿಯನ್ನು ಕಲಾವಿದ ನಟ, ನಿರ್ದೇಶಕರಾಗಿ ರಂಗಭೂಮಿಯಲ್ಲಿ ಸಕ್ರಿಯರಾಗಿರುವ ಬೆಳಗಾವಿಯ ಅರವಿಂದ ಕುಲಕರ್ಣಿ ಅವರಿಗೆ ನೀಡಿ ಗೌರವಿಸಲಾಗುವುದು.

ಕಾಂತಾವರ ಕನ್ನಡ ಸಂಘದ ಅಧ್ಯಕ್ಷ ನಾ. ಮೊಗಸಾಲೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ತಲಾ ಹತ್ತು ಸಾವಿರ ಗೌರವ ಸಂಭಾವನೆ , ತಾಮ್ರಪತ್ರ ಹಾಗೂ ಸನ್ಮಾನ ಒಳಗೊಂಡಿದೆ. ನವೆಂಬರ್‌ ೧ರಂದು ನಡೆಯುವ ʼಕಾಂತಾವರ ಉತ್ಸವʼದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!