Sunday, November 3, 2024

ಬೆಂಗಳೂರಿನ ವಿಜ್ಞಾನ ಗ್ಯಾಲರಿಯಲ್ಲಿ ʼಸೈ 650ʼ ಪ್ರದರ್ಶನದ ಆಕರ್ಷಣೆ

ಜನಪ್ರತಿನಿಧಿ (ಬೆಂಗಳೂರು) : ವಿಜ್ಞಾನದ ಹಲವು ಕುತೂಹಲಕಾರಿ ಸಂಗತಿಗಳು ಬೆಂಗಳೂರಿನ ವಿಜ್ಞಾನ ಗ್ಯಾಲರಿಯಲ್ಲಿ ಅನಾವರಣಗೊಂಡಿದೆ. ಏಷ್ಯಾದ ಅತಿ ದೊಡ್ಡ ಸೈನ್ಸ್‌ ಗ್ಯಾಲರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಗ್ಯಾಲರಿ ವೀಕ್ಷಕರನ್ನು ಸೆಳೆಯುತ್ತಿದೆ.

ಬೆಂಗಳೂರು ವಿಜ್ಞಾನ ಗ್ಯಾಲರಿಯಲ್ಲಿ ʼಸೈ 650ʼ ಹೆಸರಿನಲ್ಲಿ ಪ್ರದರ್ಶನ ನಡೆಯುತ್ತಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ. ವಿದ್ಯಾರ್ಥಿಗಳ ತಂಡ ಆಗಮಿಸಿದರೆ ವಾಕ್‌ ಥ್ರೂ ಮೂಲಕ ಇಡೀ ವಿಜ್ಞಾನ ಗ್ಯಾಲರಿಯ ನಾನಾ ವಿಭಾಗಗಳನ್ನು ತೋರಿಸಲು ಉತ್ಸಾಹಿ ತಂಡ ಇಲ್ಲಿದೆ. 30 ವಿಭಾಗಗಳಲ್ಲಿ ವಿಜ್ಞಾನ ಮಾದರಿಗಳಿವೆ. ಸೋಮವಾರ ಮತ್ತು ಮಂಗಳವಾರ ಹೊರತುಪಡಿಸಿ ಉಳಿದೆಲ್ಲಾ ದಿನಗಳಲ್ಲೂ ಬೆಳಗ್ಗೆ 10 ರಿಂದ ರಾತ್ರಿ 8ರ ವರೆಗೆ ಸೈನ್ಸ್‌ ಗ್ಯಾಲರಿ ತೆರೆದಿರುತ್ತದೆ. ನೀವೂ ಭೇಟಿ ನೀಡಬಹುದು.

ವಿಶೇಷತೆಗಳೇನು ?
*ವಿಜ್ಞಾನ ಗ್ಯಾಲರಿಯು ತಂಪು ಮತ್ತು ನಿಶಬ್ದವಾಗಿದ್ದು, ಒಳ ಹೋದ ಕೂಡಲೇ ವಿಜ್ಞಾನದ ಬಗೆ ಬಗೆಯ ಮಾದರಿಗಳು, ಪ್ರಯೋಗಗಳನ್ನು ಕಾಣಬಹುದು.
*ವಿದ್ಯಾರ್ಥಿಗಳ ತಂಡ ಆಗಮಿಸಿದರೆ ವಾಕ್ ಥೊ ಮೂಲಕ ಇಡೀ ವಿಜ್ಞಾನ ಗ್ಯಾಲರಿಯ ನಾನಾ ವಿಭಾಗಗಳನ್ನು ತೋರಿಸಲು ಉತ್ಸಾಹಿ ತಂಡವಿದೆ.
*ನೆಲಮಹಡಿಯಲ್ಲಿ ಎರಡು ಬಗೆಯ ಡ್ರಮ್ಸ್ ವಾದನಗಳಿವೆ. ಇದನ್ನು ಪ್ರಾಯೋಗಿಕವಾಗಿ ಬಳಸಬಹುದು.
*ಹಳೆಯ ಕಾಲದ ಸಿಮ್ಯುಲೇಟರ್‌ಗಳು ಇತ್ಯಾದಿಗಳ ಪ್ರದರ್ಶನ ಆಕರ್ಷಕವಾಗಿದೆ.
*ಡಿಜಿಟಲ್ ಫಲಕದಲ್ಲಿರುವ ಪಕ್ಷಿಗಳ ಚಿತ್ರದ ಮೇಲೆ ಬಟನ್ ಒತ್ತಿದರೆ ಆ ಪಕ್ಷಿ ಕೂಗುವ ಶಬ್ದ ಎಳೆ ಎಳೆಯಾಗಿ ತೇಲಿ ಬರುತ್ತದೆ.
*ಪುಸ್ತಕ ಓದುವ ಗ್ಯಾಲರಿ ಕೂಡ ಇದೆ.
*ಯುವ ಸಮುದಾಯಕ್ಕೆ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಲು ಅವಕಾಶವಿದೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!