Thursday, November 14, 2024

ಪರಿಷತ್ ಚುನಾವಣೆ ಬಹಿಷ್ಕಾರ: ಇಡೂರು ಕುಂಜ್ಞಾಡಿ ಗ್ರಾಮ ಪಂಚಾಯತ್‌ಗೆ ಭೇಟಿ ನೀಡಿದ ಅಧಿಕಾರಿಗಳು: ನಿರ್ಧಾರದಿಂದ ಹಿಂದೆ ಸರಿಯಲ್ಲ ಪಟ್ಟು ಹಿಡಿದ ಗ್ರಾ.ಪಂ. ಸದಸ್ಯರು

ಕುಂದಾಪುರ: ಅವೈಜ್ಞಾನಿಕ ಕಸ್ತೂರಿ ರಂಗನ್ ವರದಿ ವಿರೋಧಿಸಿ ಇಡೂರು ಕುಂಜ್ಞಾಡಿ ಗ್ರಾಮಪಂಚಾಯತ್ ಸದಸ್ಯರು ಅಕ್ಟೊಬರ್ 21 ರಂದು ನೆಡೆಯಲಿರುವ ವಿಧಾನಪರಿಷತ್ ಚುನಾವಣೆಗೆ ಬಹಿಷ್ಕಾರ ಘೋಷಣೆ ಮಾಡಿದ್ದರು.ಸಹಾಯಕ ಆಯುಕ್ತರಾದ ಮಹೇಶ್ಚಂದ್ರ, ತಹಶೀಲ್ದಾರ್ ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಗ್ರಾಮ ಪಂಚಾಯತ್‌ಗೆ ಆಗಮಿಸಿ ಬಹಿಷ್ಕಾರ ನಿರ್ಧಾರವನ್ನು ಹಿಂಪಡೆಯುವಂತೆ ಮನವೊಲಿಸುವ ಪ್ರಯತ್ನ ನಡೆಯಿತು. ಆದರೆ ಗ್ರಾಮ ಪಂಚಾಯತ್ ಸದಸ್ಯರು ನಾವು ಜನರ ಹಿತಾಸಕ್ತಿಯಿಂದ ಈ ನಿರ್ಧಾರ ಕೈಗೊಂಡಿದ್ದು ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದರು.
ಉಪವಿಭಾಗಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ಜರುಗಿತು. ಈ ಸಭೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸರ್ವ ಸದಸ್ಯರುಗಳು ಕಸ್ತೂರಿ ರಂಗನ್ ವರಧಿ ವಿರೋಧಿಸಿ ಗ್ರಾಮಸ್ಥರ ಪರವಾಗಿ ಮಾತನಾಡಿದರು. ಕಸ್ತೂರಿ ರಂಗನ್ ವರದಿ ಅನ್ವಯವಾದರೆ ಭೂ ಪರಿವರ್ತನೆ ಅಸಾಧ್ಯ, ಗ್ರಾಮದ ಭೌತಿಕ ಸರ್ವೇ ಮತ್ತು ಸಮೀಕ್ಷೆ ಮಾಡಬೇಕು, ಸಂಪೂರ್ಣ ಬಪ್ಪರ್ ಜೋನ್ ವಲಯ ಶೂನ್ಯಕ್ಕೆ ಇಳಿಸಬೇಕು, ಕಂದಾಯ ಗ್ರಾಮ ಮತ್ತು ಅರಣ್ಯ ಗ್ರಾಮಗಳು ಎಂದು ಬೇರ್ಪಡಿಸಬೇಕು, ಸರ್ವೇಯನ್ನು ಖುದ್ದಾಗಿ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಮತ್ತು ಸ್ಥಳಿಯರು ಸೇರಿ ಜಂಟಿ ಸರ್ವೇ ಮಾಡಬೇಕು , ಜಂಟಿ ಸರ್ವೇಗೆ ಸರಕಾರ ದಿನಾಂಕ ನಿಗದಿ ಪಡಿಸಬೇಕು ಎಂದು ಪ್ರಸ್ತಾಪಿಸಿದರು
ಈ ಕುರಿತು ಕಸ್ತೂರಿ ರಂಗನ್ ವರದಿಯಿಂದ ಜನರಿಗೆ ಯಾವುದೇ ತೊಂದರೆ ಇಲ್ಲ. ಸೂಕ್ಷ್ಮ ಪ್ರದೇಶ ಮತ್ತು ಕಸ್ತೂರಿ ರಂಗನ್ ವರದಿ ಪ್ರದೇಶ ಬೇರೆ ಬೇರೆ,ದೊಡ್ಡ ದೊಡ್ಡ ಕೈಗಾರಿಕೆಗಳಿಗೆ ಅವಕಾಶ ಇರುವುದಿಲ್ಲ ಕೃಷಿ ಚಟುವಟಿಕೆ ಹಾಗೂ ಸಣ್ಣ ಕೈಗಾರಿಕೆಗಳಿಗೆ ಯಾವುದೇ ತೊಂದರೆ ಇಲ್ಲ ಎಂದು ಅರಣ್ಯಧಿಕಾರಿಯವರು ಮಾಹಿತಿ ನೀಡಿದರು.
ಉಪವಿಭಾಗಾಧಿಕಾರಿಯವರು ಕಸ್ತೂರಿ ರಂಗನ್ ವರದಿಯ ಕುರಿತು ಸವಿವರವಾದ ಮಾಹಿತಿ ನೀಡಿದರು ಹಾಗೂ ಈಗಾಗಲೇ ಡೀಮ್ ಪಾರೆಸ್ಟ್ ಸರ್ವೇ ಪ್ರಾರಂಭವಾಗಿದೆ ಮಳೆ ಮತ್ತು ನೀತಿಸಂಹಿತೆ ಇರುವ ಕಾರಣ ಸ್ವಲ್ಪ ವಿಳಂಭವಾಗುತ್ತಿದೆ ದೊಡ್ಡ ಗ್ರಾಮಗಳ ಸರ್ವೇಗೆ ತುಂಬಾ ಸಮಯ ಬೇಕಾಗುವುದರಿಂದ ಚುನಾವಣೆ ಮುಗಿದ ಕೂಡಲೇ ತ್ವರಿತವಾಗಿ ಸಮೀಕ್ಷೆ ಆರಂಭಿಸಲಾಗುವುದು ಊಹಾಪೊಗಳಿಗೆ ತಲೆಗೋಡಬೇಡಿ ನಿಮ್ಮೆಲ್ಲ ಅಹವಾಲುಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತೇವೆ ಹಾಗೂ ಸದಸ್ಯರೆಲ್ಲರು ಚುನಾವಣೆ ಬಹಿಷ್ಕಾರ ಹಿಂಪಡೆಯಬೇಕು ಎಂದು ಮನವಿ ಮಾಡಿದರು.
ಅಧಿಕಾರಿಗಳು ನೀಡಿದ ಮಾಹಿತಿ ಗ್ರಾಮ ಪಂಚಾಯತ್ ಸದಸ್ಯರಿಗೆ ತೃಪ್ತಿಕರ ಆಗಿಲ್ಲದೇ ಇರುವುದರಿಂದ ಈ ಸಭೆಯಲ್ಲಿ ಬಹಿಷ್ಕಾರ ಮನವಿಯನ್ನು ಹಿಂದಕ್ಕೆ ಪಡೆಯುವ ಬಗ್ಗೆ ಯಾವುದೇ ನಿರ್ಣಯವನ್ನು ಮಾಡುವುದಿಲ್ಲ ಎಂದರು.
ಈ ಸಭೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!