spot_img
Wednesday, January 22, 2025
spot_img

ತಿರುಪತಿ – ಉಡುಪಿ ಕುಂದಾಪುರ ನಡುವೆ ನೇರ ರೈಲು ಸೇವೆ

ಕುಂದಾಪುರ: ತಿರುಪತಿ ಮತ್ತು ಉಡುಪಿ ಕುಂದಾಪುರ ನಡುವೆ ನೇರ ರೈಲು ಸೇವೆ ಬೇಕು ಎನ್ಬುವ ದಶಕಗಳ ಕನಸು ಉಡುಪಿ ಸಂಸದರ ಅವಿರತ ಪ್ರಯತ್ನದಿಂದ ನನಸಾಗಿದ್ದು, ಹೈದರಾಬಾದ್ ಮಹಾನಗರಿಯ ಜತೆಯೂ ಈ ಮೂಲಕ ರೈಲು ಸೇವೆ ಆರಂಭವಾಗಿದೆ.

ಹೈದರಾಬಾದಿನ ಕಾಚಿಗುಡದಿಂದ ಹೊರಟು ತಿರುಪತಿಯ ರೇಣಿಗುಂಟ ನಿಲ್ದಾಣದ ಮೂಲಕ ಮಂಗಳೂರಿಗೆ ಬರುತಿದ್ದ ಕಾಚಿಗುಡ ಮಂಗಳೂರು ವಾರಕ್ಕೆರಡು ದಿನದ ರೈಲನ್ನು ಉಡುಪಿ ಕುಂದಾಪುರದ ಮೂಲಕ ಮುರುಡೇಶ್ವರಕ್ಕೆ ವಿಸ್ತರಣೆ ಮಾಡುವ ಸಂಸದರ ಕೋರಿಕೆಯನ್ನು ಮನ್ನಿಸಿ ಭಾರತೀಯ ರೈಲ್ವೆ ವಿಸ್ತರಣೆಗೆ ಆದೇಶ ಮಾಡಿದೆ.

ಬುದುವಾರ ಮತ್ತು ಶನಿವಾರ ಸಂಜೆ ಐದಕ್ಕೆ ಕುಂದಾಪುರ ಉಡುಪಿ ಮಾರ್ಗದ ಮೂಲಕ ಹೊರಡುವ ರೈಲು ಮರುದಿನ ಬೆಳಿಗ್ಗೆ ಹನ್ನೊಂದು ಗಂಟೆಗೆ ತಿರುಪತಿ ಬಳಿಯ ರೇಣಿಗುಂಟ ನಿಲ್ದಾಣದ ಮೂಲಕ ಹೈದರಾಬಾದಿನ ಕಾಚಿಗುಡ ತಲುಪಲಿದೆ.

ಕಳೆದ ಒಂದು ದಶಕದಿಂದ ಕುಂದಾಪುರ ರೈಲು ಸಮಿತಿಯು ಈ ಬಗ್ಗೆ ನಿರಂತರ ಪ್ರಯತ್ನಿಸುತಿದ್ದ ಹಿನ್ನೆಲೆಯಲ್ಲಿ ಸಂಸದನಾಗಿ ಆಯ್ಕೆಯಾದ ಮೊದಲ ನೂರು ದಿನದ ಕಾರ್ಯಕ್ರಮಗಳ ಪಟ್ಟಿಯಲ್ಲಿ ಈ ಮಹತ್ವಾಕಾಂಕ್ಷೆಯ ರೈಲು ಸೇವೆಯ ಗುರಿಯನ್ನು ಹೊಂದಿರುವುದಾಗಿ ಸಂಸದರು ತಿಳಿಸಿದ್ದರು.
ಅದರಂತೆ ಮುರುಡೇಶ್ವರದ ಮೂಲಕ ಕುಂದಾಪುರ ಉಡುಪಿ ಸುರತ್ಕಲ್ ಮೂಲ್ಕಿ ನಗರಗಳು ಕೊಯಂಬತ್ತೂರು , ತಿರುಪತಿ, ಮಂತ್ರಾಲಯ ಸಮಿಪದ ದೊನೆ ಜಂಕ್ಷನ್ ಸೇರಿದಂತೆ ಹೈದರಾಬಾದ್ ವರೆಗೆ ರೈಲು ಸಂಪರ್ಕ ಪಡೆದಿವೆ .

ವಿಜಯ ದಶಮಿಯ ಶುಭ ಸಂದರ್ಭದಲ್ಲಿ ಕರಾವಳಿಗೆ ಘೊಷಣೆಯಾಗು ಬೇಕು ಎನ್ನುವ ಕಾರಣಕ್ಕೆ ಸಂಸದರು ಸತತವಾಗಿ ದೆಹಲಿಯ ಅದಿಕಾರಿಗಳ ಜತೆ ಸಭೆಯ ಮೇಲೆ ಸಭೆ ನಡೆಸಿದ ಪರಿಣಾಮ ವಿಜಯದಶಮಿಯ ಪಾವನ ಸಂದರ್ಭದಲ್ಲಿ ಈ ರೈಲಿನ ವಿಸ್ತರಣೆಗೆ ಆದೇಶವು ಕರಾವಳಿಗೆ ಬಂದಿದೆ.

ಕರಾವಳಿಯ ಪ್ರತೀ ಮನೆಯಿಂದಲೂ ತಿರುಪತಿ ತೆರಳುವ ಅಸಂಖ್ಯಾತ ಭಕ್ತವರ್ಗವಿದ್ದು, ರೈಲಿನ ಅಲಭ್ಯತೆಯ ಕಾರಣದಿಂದ ಬಸ್ ಅಥವಾ ಬೆಂಗಳೂರು ತಲುಪಿ ಅಲ್ಲಿಂದ ಪ್ರಯಾಣ ಮಾಡ ಬೇಕಾದ ಪರಿಸ್ತಿತಿಯಲ್ಲಿದ್ದರು.

ಸ್ವಾತಂತ್ರ್ಯದ ೭೬ ವರ್ಷಗಳ ಬಳಿಕ ದಕ್ಷಿಣದ ಎಲ್ಲಾ ರಾಜ್ಯಗಳ ಜತೆ ಕೊಂಕಣ ರೈಲ್ವೆ ಮೂಲಕ ರೈಲು ಸಂಪರ್ಕ ಲಭೀಸಿದ್ದು, ಪುಣ್ಯಕ್ಷೇತ್ರ ತಿರುಪತಿಯನ್ನು ಉಡುಪಿ ಶ್ರೀಕೃಷ್ಣ ,ಕೊಲ್ಲೂರು ಮೂಕಾಂಬಿಕಾ ದೇಗುಲದ ಮೂಲಕ ಮುರುಡೇಶ್ವರದವರೆಗೆ ವಿವಿಧ ಪುಣ್ಯಸ್ಥಳಗಳಿಗೆ ರೈಲು ಸಿಕ್ಕಂತಾಗಿದೆ ಎಂದು ಸಂಸದ ಶ್ರೀನಿವಾಸ್ ಪೂಜಾರಿ ಹರ್ಷ ವ್ಯಕ್ತ ಪಡಿಸಿದ್ದಾರೆ.

ಅತ್ಯಂತ ಕ್ಷಿಪ್ರವಾಗಿ ಮನವಿಗೆ ಸ್ಪಂದಿಸಿದ ಭಾರತೀಯ ರೈಲ್ವೆಯ ಹಲವು ಅದಿಕಾರಿಗಳಿಗೆ , ರಾಜ್ಯ ಸಚಿವ ಸೋಮಣ್ಣನವರಿಗೆ ಹಾಗು ಕೇಂದ್ರ ಸಚಿವ ಅಶ್ವಿನ್ ವೈಷ್ಣವ್ ಅವರಿಗೆ ಉಡುಪಿ ಸಂಸದ ಶ್ರೀನಿವಾಸ್ ಪೂಜಾರಿ ಹ್ರತ್ಪೂರ್ವಕ ವಂದನೆಗಳನ್ನು ತಿಳಿಸಿದ್ದಾರೆ.

ನಮ್ಮ ಹಲವು ದಶಕಗಳ ಪ್ರಯತ್ನ ಈಡೇರಿದೆ-ಗಣೇಶ ಪುತ್ರನ್
ತಿರುಪತಿ ಮತ್ತು ಕರಾವಳಿ ನಡುವೆ ರೈಲು ಬೇಕು ಎಂಬುದು ನಮ್ಮ ಹಲವು ದಶಕಗಳ ಪ್ರಯತ್ನವಾಗಿತ್ತು. ಆದರೆ ಸಂಸದ ಕೋಟ ಶ್ರಿನಿವಾಸ್ ಪೂಜಾರಿಯವರು ನಮ್ಮ ಬೇಡಿಕೆಯನ್ನು ಸಂಸದನಾದ ನೂರು ದಿನದಲ್ಲಿ ಈಡೇರಿಸುವ ಭರವಸೆ ನೀಡಿದ್ದರು ಮತ್ತು ಅದರಂತೆಯೇ ಇಂದು ತಿರುಪತಿಯ ಜತೆಗೇ ಉದ್ಯಮ ನಗರೀ ಹೈದರಾಬಾದ್ ಕೂಡ ಕರಾವಳಿಯ ಜತೆಗೆ ಬೆಸೆದಿದೆ. ವಾರಕ್ಕೊಂದು ದಿನ ಘೊಷಣೆಯಾಗ ಬೇಕಿದ್ದ ಹೊಸ ರೈಲಿನ ಬದಲು ವಾರಕ್ಕೆರಡು ದಿನದ ಕಾಚಿಗುಡ ರೈಲಿನ ವಿಸ್ತರಣೆ ಕೂಡ ಸಂಸದರ ಸಮರ್ಪಕ ನಡೆಯಾಗಿದ್ದು,ರೈಲು ಸೇವೆಗಳಲ್ಲಿ ಕ್ರಾಂತಿಕಾರ ಬದಲಾವಣೆಗೆ ಹೊರಟಿರುವ ಉಡುಪಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿಯವರನ್ನು ಕರಾವಳಿಯ ರೈಲು ಪ್ರಯಾಣಿಕರ ಪರವಾಗಿ ಅಭಿನಂದಿಸುತ್ತೇನೆ ಎಂದು ಕುಂದಾಪುರ ರೈಲು ಸಮಿತಿಯ ಅಧ್ಯಕ್ಷ ಗಣೇಶ ಪುತ್ರನ್ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!