Friday, October 18, 2024

ಮಾಜಿ ಸಿಎಂ ಗೌರವಾರ್ಥ ಗುಜರಾತ್‌ ಸರ್ಕಾರದಿಂದ ಪ್ರತಿ ವರ್ಷ ʼವಿಕಾಸ ಸಪ್ತಾಹʼ

ಜನಪ್ರತಿನಿಧಿ (ಗಾಂಧಿನಗರ) : ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ ೧೪ನೇ ಮುಖ್ಯಮಂತ್ರಿಯಾಗಿ ೨೦೦೧ರ ಅಕ್ಟೋಬರ್‌ ೭ರಂದು ಪ್ರಮಾಣವಚನ ಸ್ವೀಕರಸಿದ್ದರು. ಅದರ ಸ್ಮರಣಾರ್ಥ ಪ್ರತಿ ವರ್ಷ ಅಕ್ಟೋಬರ್‌ ೭ ರಿಂದ ʼವಿಕಾಸ ಸಪ್ತಾಹʼ ಆಯೋಜಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಸಸಚಿವ ಋಷಿಕೇಶ್‌ ಪಟೇಲ್‌ ತಿಳಿಸಿದ್ದಾರೆ.

ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಅಕ್ಟೋಬರ್‌ ೭ ರಿಂದ ೧೫ರವರೆಗೆ ವಿಕಾಸ ಸಪ್ತಾಹ ಆಯೋಜಿಸುವ ಸಂಬಂಧಿಸಿದಂತೆ ಚರ್ಚಿಸಲಾಗಿದೆ ಎಂದು ಮಾಹಿತಿ ನೀಡಿರುವುದಾಗಿ ರಾಷ್ಟ್ರೀಯ ಸುದ್ದಿಸಂಸ್ಥೆಗಳಲ್ಲಿ ವರದಿಯಾಗಿದೆ.

೨೦೦೫ರ ಏಪ್ರಿಲ್‌ ೧ಕ್ಕೂ ಮೊದಲು ಸ್ಥಿರ ವೇತನದ ಆಧಾರದಲ್ಲಿ ನೇಮಕಗೊಂಡಿರುವ ಸುಮಾರು ೬೦,೦೦೦ಕ್ಕೂ ಅಧಿಕ ನೌಕರರಿಗೆ ಹಳೆ ಪಿಂಚಣಿ ವ್ಯವಸ್ಥೆ (ಒಪಿಎಸ್)‌ ಹಾಗೂ ಇತರೆ ಸೌಲಭ್ಯಗಳನ್ನು ಕಲ್ಪಿಸುವ ಕುರಿತಾಗು ಸಭೆ ನಿರ್ಧರಿಸಿದೆ ಎಂದಿದ್ದಾರೆ.

ವಿಕಾಸ ಸಪ್ತಾಹದ ಸಂದರ್ಭದಲ್ಲಿ ಸ್ಥಳೀಯ ಕಲಾವಿದರು ಸಾಂಸ್ಕೃತಿಕ ಪ್ರದರ್ಶನ ನೀಡಲಿದ್ದಾರೆ. ಕಳೆದ ೨೩ ವರ್ಷಗಳಲ್ಲಿ ಆಗಿರುವ ಅಭಿವೃದ್ಧಿ ಸಾಧನೆಗಳ ಪ್ರತೀಕವಾಗಿ, ಏಕತಾ ಪ್ರತಿಮೆ, ಸೂರತ್‌ ಡೈಮಂಡ್‌ ಮಾರುಕಟ್ಟೆ ಸೇರಿದಂತೆ ರಾಜ್ಯದ ೨೩ ಸ್ಥಳಗಳಲ್ಲಿ ವಿಕಾಸ ನಡಿಗೆ ಆಯೋಜಿಸಲಾಗುತ್ತಿದೆ ಎಂದೂ ಅವರು ತಿಳಿಸಿದ್ದಾರೆ.

ಮೋದಿ ಅವರ ಉತ್ತಮ ಆಡಳಿತದ ಯಶಸ್ಸು. ಬಹು ಆಯಾಮದ ಅಭಿವೃದ್ಧಿ ಪಯಣವನ್ನು ಸಂಭ್ರಮಿಸಲು ಹಾಗೂ ಜಗತ್ತಿಗೆ ಸಾರಲು ರಾಜ್ಯದಲ್ಲಿ ಪ್ರತಿ ವರ್ಷ ವಿಕಾಸ ಸಪ್ತಾಯ ಆಚರಿಸಲಾಗುವುದು ಎಂದವರು ಹೇಳಿದ್ದಾರೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!