Thursday, November 14, 2024

ಕದಿರು ಉತ್ಸವಕ್ಕೆ ಕದಿರು ನೀಡುತ್ತಿರುವ ಕೋಳ್ಕೇರಿ ಮನೆತನ

ಜನಪ್ರತಿನಿಧಿ : ವಷ೯ಂಪ್ರತಿಯಂತೆ ಬಸ್ರೂರು ಮಹತೋಬಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪಂಚ ಗ್ರಾಮದ ಅಧಿ ದೇವ. ಅಲ್ಲಿ ಕದಿರು ಉತ್ಸವ ಅಥವಾ ಹೊಸ್ತಿನ ದಿನಾಂಕ ನಿಶ್ಚಯವಾಗುತ್ತದೆ.

ವಷ೯ಂ ಪ್ರತಿಯಂತೆ ಕದಿರು ಉತ್ಸವ ಅವರವರ ಮನೆಯಲ್ಲಿ ಗದ್ದೆಯಿಂದ ತಂದ ಕದಿರನ್ನು ಮನೆಯ ಎದುರು ನಿಲ್ಲಿಸಿ ಕಟ್ಟು ಮಾಡಿದರೆ ಬಸ್ರೂರು ಕದಿರು ಹಬ್ಬ (ಹೊಸ್ತು) ಬಹಳ ವೈಭವದಿಂದ ಸಾವ೯ಜನಿಕವಾಗಿ ಮೆರವಣಿಗೆ ಹಾಗೂ ಧಾಮಿ೯ಕ ಆಚರಣೆ ನಡೆಯುತ್ತದೆ.

ಬಸ್ರೂರಿನಲ್ಲಿ ಸಾವ೯ಜನಿಕವಾಗಿ ನಡೆಯಲ್ಪಡುವ ಕದಿರು ಉತ್ಸವ ಕೊಡಗಿನ ಹುತ್ತರಿ ಪೂಜೆಯಂತೆ ಬಹಳ ವಿಶೇಷತೆಯಿಂದ ಕೂಡಿದೆ. ಸುಮಾರು ನಾಲ್ಕು ನೂರಕ್ಕೂ ಅಧಿಕ ವಷ೯ದಿಂದ ಸಾವ೯ಜನಿಕ ವಾಗಿ ಆಚರಿಸಿಕೊಂಡು ಬಂದಿರುವ ಕದಿರು ಪೂಜೆ ಅಥವಾ ಹೊಸ್ತು ಸಮಾಜಕ್ಕೆ ಉತ್ತಮ ಸಂದೇಶ ನೀಡುವುದರಲ್ಲಿ ಎರಡು ಮಾತಿಲ್ಲಾ.

ದಿನಾಂಕ ವನ್ನು ಊರಿನ ಹಿರಿಯರು ಹಾಗೂ ದೇವಸ್ಥಾನದ ಆಡಳಿತ ಧಮ೯ದಶಿ೯ಯವರಾದ ಶ್ರೀ ಬಿ ಅಪ್ಪಣ್ಣ ಹೆಗ್ಡೆಯವರ ನೇತೃತ್ವದಲ್ಲಿ ದೇವಸ್ಥಾನ ದಲ್ಲಿ ನಿಶ್ಚಯಿಸಿ ನಂತರ ಸಾವ೯ಜನಿಕರಿಗೆ ತಿಳಿಸುವಂತೆ ಮಾಹಿತಿ ನೀಡಲಾಗುತ್ತದೆ.

ಕೊಳ್ಕೇರಿ ಮನೆ
ಬಸ್ರೂರಿನ ಇತಿಹಾಸದ ಮನೆತನದಲ್ಲಿ ಒಂದಾದ ಕೊಳ್ಕೇರಿ ಮನೆತನ ಬಸ್ರೂರಿನ ಯಾವುದೇ ಧಾಮಿ೯ಕ ಶುಭ ಕಾಯ೯ಕ್ರಮದಲ್ಲಿ ತನ್ನ ಸೇವೆಯನ್ನು ನೀಡುತ್ತಾ ಬಂದಿರುವ ಕುಟುಂಬ ಅದರಂತೆ ಬಸ್ರೂರಿನ ಹೊಸ್ತು ಅಥವಾ ಕದಿರು ಪೂಜೆ ಯ ಮುನ್ನ ತಾನು ಬೆಳೆದಿರುವ ಕದಿರನ್ನು ಸಮಾಜಕ್ಕೆ ದಾನ ಮಾಡಿ ಊರಿನ ಸಮಸ್ತರಿಗೆ ದಾನ ನೀಡುವುದು ತಲೆ ತಲಾಂತರದ ಸಂಪ್ರದಾಯ. ಕೊಳ್ಕೇರಿಯ ಕದಿರು ಗದ್ದೆಯಲ್ಲಿ ಹೊಸ್ತಿನ ಮುಂಚಿನ ದಿನ ದೇವರ ಪ್ರಸಾದವನ್ನು ಹಾಕಿ ಕದಿರು ಕಟ್ಟುಮಾಡಿ ಬಸ್ ನಿಲ್ದಾಣದ ಸನಿಹವಿರುವ ಕದಿರು ಕಟ್ಟೆಯಲ್ಲಿ ಸಾವ೯ಜನಿಕ ವಾಗಿ ಕದಿರು ನೀಡುವುದು ಇಲ್ಲಿಯ ಸಂಪ್ರದಾಯವಾಗಿತ್ತು.

ಹೊಸ್ತಿನ ಬೆಳಿಗ್ಗೆ ಬೇಗ ಪಂಚ ಗ್ರಾಮದ ಅಧಿ ದೇವರಾಗಿರುವ ಮಹಾಲಿಂಗೇಶ್ವರ ಸನ್ನಿಧಿ ಅಲ್ಲಿ ಮಹಾ ಪೂಜೆಯಾದ ನಂತರ ಜಾಗಂಟೆ ಶಬ್ಧ ಕೇಳಿದಾಗ ಸಾಲಾಗಿ ಬಸ್ಟಾಂಡಿನಲ್ಲಿರುವ ಕದಿರು ಕಟ್ಟೆಯ ಕಡೆ ತೆರಳುತ್ತಾರೆ .ಅಲ್ಲಿ ಸಾವ೯ಜನಿಕವಾಗಿ ಕೊಳ್ಕೇರಿ ಮನೆತನ ದಾನ ನೀಡಿರುವ ಕದಿರನ್ನು ಸಾಮರಸ್ಯದಿಂದ ಎಲ್ಲರಿಗೂ ದಾನ ಪಡೆಯುತ್ತಾರೆ. ಕದಿರು ಪಡೆದ ನಂತರ ಮತ್ತೆ ಜಾಗಂಟೆ ಶಬ್ಧ ಕೇಳಿದಾಗ ಸಾಲಾಗಿ ದೇವರ ದರುಷನ ಪಡೆದು ಮತ್ತೆ ಮನೆ ಕಡೆ ತೆರಳಿ ಹಬ್ಬ ವನ್ನು ಆಚರಣೆ ಮಾಡಲಾಗುತ್ತೆ.

ಕೊಳ್ಕೇರಿ ಮನೆತನ ಸಾವ೯ಜನಿಕ ವಾಗಿ ಕದಿರು ದಾನ ನೀಡಿರುವ ಕಾರಣದಿಂದ ಮಹಾದೇವನ ಸನ್ನಿಧಿಯಲ್ಲಿ ವಿಶೇಷ ಹರಿವಾಣ ನೈವೇದ್ಯ ಸೇವೆ ನೀಡಲಾಗುತ್ತದೆ. ಆ ಪ್ರಸಾದವನ್ನು ಕೊಳ್ಕೇರಿ ಮನೆತನಕ್ಕೆ ನೀಡಲಾಗುತ್ತದೆ.

ಆ ದಿನ ಸಂಭ್ರಮದಿಂದ ಮನೆ ಮನೆಯಲ್ಲಿ ಹೊಸ್ತು ಆಚರಣೆ ಮಾಡಲಾಗುತ್ತದೆ. ಹಾಗೇ ಸಾವ೯ಜನಿಕ ಬಾಂಧವ್ಯ ಬೆಸೆಯುವಂತೆ ಮೆರವಣಿಗೆ ಯ ಮೂಲಕ ಕದಿರು ತರುವಂತದ್ದು ಅಪರೂಪವಾದದ್ದು ಹಾಗೂ ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತದ್ದಾಗಿದೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!