Sunday, November 3, 2024

ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ | ಶಾರದೆ ಪ್ರತಿಷ್ಠಾಪನೆ : ಮಂಗಳೂರು ದಸರಾ ಮಹೋತ್ಸವಕ್ಕೆ ಚಾಲನೆ

ಜನಪ್ರತಿನಿಧಿ (ಮಂಗಳೂರು) : ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಶಾರದಾ ಮೂರ್ತಿಯ ಪ್ರತಿಷ್ಠಾಪನೆಯೊಂದಿಗೆ ‘ಮಂಗಳೂರು ದಸರಾ’ ಮಹೋತ್ಸವಕ್ಕೆ ಇಂದು(ಗುರುವಾರ) ಚಾಲನೆ ನೀಡಲಾಯಿತು.

ಮಂಗಳೂರು ದಸರಾದ ವಿಶೇಷ ಆಕರ್ಷಣೆಯಾದ  ಶ್ರೀ ಶಾರದಾ ಮಾತೆಯ ವಿಗ್ರಹವನ್ನು ಮಂಗಳವಾದ್ಯಗಳೊಂದಿಗೆ ದೇವಸ್ಥಾನದ ಪ್ರಾಂಗಣದಲ್ಲಿ  ಪ್ರದಕ್ಷಿಣೆ ಬಂದು, ದರ್ಬಾರ್ ಸಭಾಂಗಣಕ್ಕೆ ತ‌ಂದು ಪ್ರತಿಷ್ಠಾಪಿಸಲಾಯಿತು‌.

ಇದೇ ಸಭಾಂಗಣದಲ್ಲಿ  ಮಹಾಗಣಪತಿ, ಸಿದ್ಧಿಧಾತ್ರಿ, ಮಹಾಗೌರಿ, ಮಹಾಕಾಳಿ, ಕಾತ್ಯಾಯಿನಿ, ಸ್ಕಂದಮಾತಾ, ಚಂದ್ರಘಂಟಾ, ಬ್ರಹ್ಮಚಾರಿಣಿ, ಶೈಲಪುತ್ರಿ, ಆದಿಶಕ್ತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸಲಾಯಿತು.

ಈ  ಸಂದರ್ಭದಲ್ಲಿ ಶಾರದಾ ಹುಲಿವೇಷಧಾರಿಗಳ ತಂಡದವರು ಹುಲಿ ಕುಣಿತ ಸೇವೆ ಸಲ್ಲಿಸಿದರು. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ರೂವಾರಿ ಬಿ.ಜನಾರ್ದನ ಪೂಜಾರಿ ಅವರು ದಸರಾ ಮಹೋತ್ಸವವನ್ನು ಉದ್ಘಾಟಿಸಿದರು.

ನವರಾತ್ರಿ ಪ್ರಯುಕ್ತ ಶಾರದಾ ಮಾತೆಗೆ ಅಕ್ಟೋಬರ್ 13ರವರೆಗೆ ನಿತ್ಯವೂ ವಿಶೇಷ ಪೂಜೆ ಹಾಗೂ ವಿಶೇಷ ಅಲಂಕಾರ ಸೇವೆಗಳು ನಡೆಯಲಿವೆ.

ನವರಾತ್ರಿ ಹಾಗೂ ದಸರಾ ಮಹೋತ್ಸವದ ಅಂಗವಾಗಿ ನಗರವು ಕಳೆ ಗಟ್ಟಿದೆ. ಕುದ್ರೋಳಿ ಕ್ಷೇತ್ರದಲ್ಲಿ ವಿಶೇಷ ಅಲಂಕಾರ ಮಾಡಲಾಗಿದೆ. ದಸರಾ ಮೆರವಣಿಗೆ ಸಾಗುವ ನಗರದ ಬೀದಿಗಳಲ್ಲಿ ಮಾಡಲಾದ ವಿದ್ಯುತ್ ದೀಪಾಲಂಕಾರ ಮಂಗಳೂರು ದಸರಾ ಸಂಭ್ರಮಕ್ಕೆ ವಿಶೇಷ ಕಳೆ ತಂದಿದೆ. ಹುಲಿವೇಷ ಕುಣಿತದ ತಾಸೆ ಸದ್ದು ಬೀದಿ ಬೀದಿಗಳಲ್ಲಿ ಕಿವಿಗಪ್ಪಳಿಸುತ್ತಿದೆ‌‌.

ಅಕ್ಟೋಬರ್ 13 ರಂದು ಸಂಜೆ ದಸರಾ ಶೋಭಾಯಾತ್ರೆ ನಡೆಯಲಿದೆ. ಅಕ್ಟೋಬರ್ 14ರಂದು ಮುಂಜಾನೆ  ಶ್ರೀ ಕುದ್ರೋಳಿ ಕ್ಷೇತ್ರದ ಪುಷ್ಕರಣಿಯಲ್ಲಿ ಶಾರದಾ ಮೂರ್ತಿಯ ವಿಸರ್ಜನೆಯೊಂದಿಗೆ ಮಂಗಳೂರು ದಸರಾ ಸಂಪನ್ನಗೊಳ್ಳಲಿದೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!