Thursday, November 14, 2024

ಆಸ್ತಿಕತೆ, ನಾಸ್ತಿಕತೆ ಎಂಬುದು ದಸರಾದಲ್ಲಿ ಅಪ್ರಸ್ತುತ | ಪ್ರತಿಪಕ್ಷಗಳು ಸರ್ಕಾರ ಉರುಳಿಸುವ ಕೆಲಸಕ್ಕೆ ಮುಂದಾಗಬಾರದು : ದಸರಾ ಉದ್ಘಾಟನಾ ಸಮಾರಂಭದಲ್ಲಿ ಹಂಪನಾ ಅಭಿಮತ

ಜನಪ್ರತಿನಿಧಿ (ಮೈಸೂರು) : ಮೈಸೂರು ಅಂದರೆ ದಸರಾ, ದಸರಾ ಅಂದರೆ ಮೈಸೂರು ಎಂದು ನಾಗರಾಜಯ್ಯ ಬಣ್ಣಿಸಿದರು. ದಸರಾ ಎಂಬುದು ಮತ ಧರ್ಮಗಳ ತಾರತಮ್ಯ ಇಲ್ಲದ ಸರ್ವ ಜನಾಂಗದ ಹಬ್ಬ. ಆಸ್ತಿಕತೆ, ನಾಸ್ತಿಕತೆ ಎಂಬುದು ದಸರಾದಲ್ಲಿ ಅಪ್ರಸ್ತುತ. ದಸರಾ ಅರಮನೆ ಹಬ್ಬವಲ್ಲ, ಜನ ಆರಿಸಿದ ಸರ್ಕಾರ ನಡೆಸುವ ಹಬ್ಬ ಎಂದು ನಾಗರಾಜಯ್ಯ ಹೇಳಿದರು.

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಯುವಕರು ಮೋದಿ ಮೋದಿ ಎಂದು ಮುಂದುವರಿಯುತ್ತಿದ್ದಾರೆ. ಹಾಗೆಂದು ಸರ್ಕಾರ ಅಸ್ಥಿರಗೊಳಿಸುವ ಕೆಲಸವನ್ನು ಯಾರೂ ಮಾಡಬಾರದು ಎಂದು ಹೇಳಿದ್ದಲ್ಲದೇ, ಪರಾಜಯಗೊಂಡು ಪಕ್ಷವೂ ಮತ್ತೆ ಅಧಿಕಾರಕ್ಕೆ ಬರಲು 5 ವರ್ಷಗಳ ಬಳಿಕ ಅವಕಾಶವಿದೆ. ಪ್ರತಿಪಕ್ಷಗಳು ಸರ್ಕಾರ ಉರುಳಿಸುವ ಕೆಲಸಕ್ಕೆ ಮುಂದಾಗಬಾರದು ಎಂದು ಸಾಹಿತಿ ಹಂಪ ನಾಗರಾಜಯ್ಯ ಅಭಿಪ್ರಾಯ ಪಟ್ಟಿದ್ದಾರೆ.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಎಷ್ಟೇ ಅಡ್ಡಿ ಆತಂಕಗಳು ಎದುರಾಗುತ್ತಿದ್ದರೂ ಎದೆಗುಂದದೆ ಸೆಡ್ಡು ಹೊಡೆದು ಗಟ್ಟಿಯಾಗಿ ನಿಂತಿದ್ದಾರೆ. ಜೀವನವೇ ದೊಡ್ಡ ಅಖಾಡ, ಧೃತಿಗೆಡದೆ ತೊಡೆತಟ್ಟಿ ನಿಲ್ಲಲೇಬೇಕು. ಸಜ್ಜನಿಕೆ, ಸೌಮ್ಯ ಸ್ವಭಾವ ದೌರ್ಬಲ್ಯವಲ್ಲ ಎನ್ನುವುದರ ಆ ಮೂಲಕ ಹಂಪನಾ ಪರೋಕ್ಷವಾಗಿ ಸಿದ್ದರಾಮಯ್ಯಗೆ ಧೈರ್ಯ ತುಂಬಿದರು. ಜತೆಗೆ, ಸಿಎಂ, ಡಿಸಿಎಂ ಒಂದು ರೀತಿಯಲ್ಲಿ ಗರಡಿ ಮನೆ ಆಳಿನಂತೆ, ಜಟ್ಟಿಗಳೆಂದು ಬಣ್ಣಿಸಿದರು .

ಪತ್ನಿ ನೆನೆದು ನಾಗರಾಜಯ್ಯ ಭಾವುಕ :

ಹಂಪ ನಾಗರಾಜಯ್ಯ ಹೆಂಡತಿ ದಿ. ಕಮಲಾ‌ ಹಂಪನಾ ಅವರಿಗೆ ನಮನ ಸಲ್ಲಿಕೆ ಮಾಡಲಾಯಿತು. ಇದೇ ವೇಳೆ, 88 ವರ್ಷದ ಧೀರ್ಘ ಜೀವನದ ನೆನಪು ಮಾಡಿಕೊಂಡ ಹಂಪನಾ ಸಭೆಯಲ್ಲಿ ಭಾವುಕರಾದರು.

71 ವರ್ಷದ ಸ್ನೇಹದ ಸುಖ ನೀಡಿದೆ. 63 ವರ್ಷ ಮಡದಿಯಾಗಿ ಜೊತೆಯಾಗಿದ್ದೆ. ಆರು ವರ್ಷಗಳ ಕಾಲ ಸಹಪಾಠಿಯಾಗಿದ್ದೆ. ನಿನ್ನ ದಿವ್ಯ ನೆನಪಿಗೆ ಈ ಗೌರವ ಸಮರ್ಪಣೆ ಎಂದು ನಾಗರಾಜಯ್ಯ ಭಾವುಕರಾಗಿ ನೆನೆದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!