spot_img
Wednesday, January 22, 2025
spot_img

ಗಾಂಧೀಜಿ 155ನೇ ಜಯಂತಿ : ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕನ್ನಡ, ಇಂಗ್ಲಿಷ್ ನಲ್ಲಿ ಪ್ರತ್ಯೇಕ ಪ್ರಬಂಧ ಸ್ಪರ್ಧೆ !

ಜನಪ್ರತಿನಿಧಿ (ಬೆಂಗಳೂರು) : ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ವತಿಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 155ನೇ ಜಯಂತಿಯ ಅಂಗವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಪ್ರತ್ಯೇಕ ಪ್ರಬಂಧ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.

ʼವಿಜ್ಞಾನ ಮತ್ತು ತಂತ್ರಜ್ಞಾನ ಚಾಲಿತ ಪ್ರಪಂಚದಲ್ಲಿ ಗಾಂಧೀಜಿ ಚಿಂತನೆಗಳ ಪ್ರಸ್ತುತತೆʼ (Relevance of Gandhian Thoughts in the Science and Technology Driven World’)  ವಿಷಯದಲ್ಲಿ ಪ್ರಬಂಧ ಬರೆಯಬಹುದಾಗಿದ್ದು, ವಿಜೇತರಿಗೆ ನಗದು ಬಹುಮಾನ ಇರಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ, ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದೆಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಜಿಲ್ಲಾ ಮಟ್ಟದ ಸ್ಪರ್ಧೆ ಅಕ್ಟೋಬರ್ 22 2024, ಪ್ರತಿ ಜಿಲ್ಲೆಯ  3 ಪ್ರಬಂಧಗಳಿಗೆ ಅಕ್ಟೋಬರ್ 30 2024ರಂದು ಬಹುಮಾನ ವಿತರಣೆ, ನವೆಂಬರ್ 6 2024 ರಂದು ರಾಜ್ಯ ಮಟ್ಟದ ಸ್ಪರ್ಧೆ,‌ ವಿಜೇತರಿಗೆ ನವೆಂಬರ್ 14 ಮಕ್ಕಳ ದಿನಾಚರಣೆಯಂದು ಬಹುಮಾನ ವಿತರಣೆ ನಡೆಯಲಿದೆ ಎಂದು ಹೇಳಿದೆ.

ಸ್ಪರ್ಧೆಯ ನಿಯಮಗಳು:
* ಪ್ರಬ೦ಧವು ಸ೦ಪೂರ್ಣವಾಗಿ ಸ್ವ-ರಚಿತವಾಗಿರಬೇಕು.
* ಸ್ಪರ್ಧೆ ಏರ್ಪಡಿಸುವ ಸ್ಥಳದಲ್ಲಿಯೇ ಕೈಬರಹದಲ್ಲಿ ಪ್ರಬ೦ಧವನ್ನು ಬರೆಯಬೇಕು.
* ಆಕರವಾಗಿ ಬಳಸಿದ ಗ್ರಂಥಗಳ ವಿವರಗಳನ್ನು ಪ್ರಬ೦ಧದ ಕೊನೆಯಲ್ಲಿ ನಮೂದಿಸಬೇಕು.
* ಪ್ರಬ೦ಧ ಬರೆಯುವ ಸ್ಥಳದಲ್ಲಿ ಮೊಬೈಲ್, ಆಕರ ಗ್ರಂಥಗಳು, ಕಂಪ್ಯೂಟರ್ ಬಳಕೆಗೆ ಅವಕಾಶವಿಲ್ಲ.
* 1,000 ಪದಗಳ ಮಿತಿಯೊಳಗೆ ಪ್ರಬಂಧವನ್ನು ರಚಿಸುವುದು.
* ಪ್ರಬ೦ಧಕಾರರ ಹೆಸರು, ತರಗತಿ, ಶಾಲೆ, ವಯಸ್ಸು ಮತ್ತು ವಿಳಾಸ ನಮೂದಿಸಬೇಕು.
* ಪ್ರಬಂಧವು ಈ ಮೊದಲು ಎಲ್ಲಿಯೂ ಪ್ರಕಟವಾಗಿರಬಾರದು.
* ಆಯ್ದ ಪ್ರಬ೦ಧಗಳ ಪ್ರಕಟಣೆಯ ಹಕ್ಕನ್ನು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಹೊಂದಿರುತ್ತದೆ.

ಬಹುಮಾನಗಳ ವಿವರ :
ರಾಜ್ಯ ಮಟ್ಟದ ಸ್ಪರ್ಧೆ
ಪ್ರಥಮ – 25,000 ರೂ.
ದ್ವಿತೀಯ – 15,000 ರೂ.
ತೃತೀಯ – 10,000 ರೂ.

ಜಿಲ್ಲಾ ಮಟ್ಟದ ಸ್ಪರ್ಧೆ
ಪ್ರಥಮ – 3000 ರೂ.
ದ್ವಿತೀಯ – 2000 ರೂ.
ತೃತೀಯ – 1000 ರೂ.

ತಾಲೂಕು ಮಟ್ಟ : ಮೊದಲ ಮೂರು ಅತ್ಯುತ್ತಮ ಪ್ರಬಂಧಗಳಿಗೆ ಪುಸ್ತಕ ಬಹುಮಾನ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 91 8029721550

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!