Friday, October 18, 2024

ಮುಡಾ ಹಗರಣದ A1 ಭ್ರಷ್ಟ ಸಿದ್ದರಾಮಯ್ಯರನ್ನು ಜೈಲಿಗೆ ಕಳುಹಿಸುವುದು ನಿಶ್ಚಿತ : ಬಿಜೆಪಿ ಶಪತ

ಜನಪ್ರತಿನಿಧಿ (ಬೆಂಗಳೂರು) : “ಕಳ್ಳ ಕಳ್ಳನೇ ಹೊರತು ತಪ್ಪು ಒಪ್ಪಿಕೊಂಡರೇ ಸಾಚಾ ಆಗುವುದಿಲ್ಲ” ಬಿಜೆಪಿ ಬಿಡುವುದೂ ಇಲ್ಲ! ಎಂದು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯ ಬಿಜೆಪಿ ಮತ್ತೆ ಹರಿಹಾಯ್ದಿದೆ.

A1 ಭ್ರಷ್ಟ ಸಿದ್ದರಾಮಯ್ಯ ಅವರ ಮುಡಾ ಬ್ರಹ್ಮಾಂಡ ಭ್ರಷ್ಟಾಚಾರ ಹಾಗೂ ವಾಲ್ಮೀಕಿ ನಿಗಮ ಹಗರಣದ ವಿರುದ್ಧ ಬಿಜೆಪಿ-ಜೆಡಿಎಸ್‌ ಮಿತ್ರ ಪಕ್ಷಗಳು ನಡೆಸಿದ ಮೈಸೂರು ಚಲೋ ಪಾದಯಾತ್ರೆ ಇಂದು ಸಾರ್ಥಕವಾಗಿದೆ ಎಂದು ಬಿಜೆಪಿ ಹೇಳಿದೆ.

ಮೈಸೂರು ಚಲೋ ಪಾದಯಾತ್ರೆ ಯಶಸ್ವಿಗೊಂಡ ನಂತರ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದರು. ಹೈಕೋರ್ಟ್‌ ಭ್ರಷ್ಟ ಸಿದ್ದರಾಮಯ್ಯ ಅರ್ಜಿ ತಿರಸ್ಕರಿಸಿ, ತನಿಖೆ ನಡೆಯಬೇಕೆಂದು ಆದೇಶ ನೀಡಿತು. ಭ್ರಷ್ಟ ಸಿದ್ದರಾಮಯ್ಯನವರು ತಮ್ಮ ಭ್ರಷ್ಟಾಚಾರ ಸಾಬೀತು ಆಗುತ್ತಿದ್ದಂತೆ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುವಾಗ ತಮ್ಮ ಹಳೆಯ ಛಾಳಿಯನ್ನು ಮುಂದುವರಿಸಿದ್ದಾರೆ ಎಂದು ಆಕ್ರೋಶ ಹೊರ ಹಾಕಿದೆ.

ಲಂಚದ ರೂಪದಲ್ಲಿ ವಜ್ರಖಚಿತ ಹ್ಯೂಬ್ಲೋಟ್ ವಾಚ್‌ ಪಡೆದುಕೊಂಡಿದ್ದಾಗ ಇನ್ನೇನು ರಾಜೀನಾಮೆ ಕೊಡಲೇಬೇಕು ಎಂಬ ಸ್ಥಿತಿ ಬಂದಾಗ ಕೋಟಿ ಬೆಲೆಯ ವಾಚ್‌ ಅನ್ನು ಸದನದಲ್ಲಿ ಒಪ್ಪಿಸಿ ತಪ್ಪೊಪ್ಪಿಕೊಂಡು ಬಚಾವ್‌ ಆಗಿದ್ದರು. ಆದರೆ, ಈ ಬಾರಿ 14 ಸೈಟು ವಾಪಸ್‌ ಕೊಟ್ಟ ತಕ್ಷಣ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಸದನದಲ್ಲಿ ಮುಡಾ ಭ್ರಷ್ಟಾಚಾರಕ್ಕೆ ಸಂಬಂಧಿಸಿ ಬಿಜೆಪಿ ಎತ್ತಿದ ಪ್ರಶ್ನೆಗಳಿಗೆ ಉತ್ತರಿಸದೆ ರಣಹೇಡಿಯಂತೆ ಓಡಿ ಹೋದಾಗಲೇ ಹಗರಣ ನಡೆದಿರುವುದು ಸಾಬೀತಾಗಿತ್ತು. ಆಗಲೇ ಬಿಜೆಪಿಯೂ ಹೋರಾಟಕ್ಕೆ ಧುಮುಕಿತ್ತು ಎಂದಿದೆ.

ವಾಲ್ಮೀಕಿ ನಿಗಮ ಹಗರಣದಲ್ಲಿ ಭ್ರಷ್ಟ ಮಾಜಿ ಸಚಿವ ಬಿ ನಾಗೆಂದ್ರರನ್ನ ಬಿಜೆಪಿಯೂ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದಂತೆ, ಮುಡಾ ಹಗರಣದ A1 ಭ್ರಷ್ಟ ಸಿದ್ದರಾಮಯ್ಯ ಅವರನ್ನು ಕಳುಹಿಸುವುದು ನಿಶ್ಚಿತ ಎಂದು ಬಿಜೆಪಿ ಶಪತ ಮಾಡಿದೆ.

ಅದಕ್ಕೂ ಮೊದಲು ಲಜ್ಜೆಗೆಟ್ಟು ಕುರ್ಚಿ ಮೇಲೆ ಕೂರುವುದು ಬಿಟ್ಟು ರಾಜೀನಾಮೆ ಕೊಟ್ಟು ಸಿದ್ದರಾಮನ ಹುಂಡಿಗೆ ಪಲಾಯನ ಮಾಡಿದರೆ ಒಳಿತು ಎಂದಿದೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!