Saturday, October 12, 2024

ಕೊಲ್ಕತ್ತಾ ಅತ್ಯಾಚಾರ ಪ್ರಕರಣ : ಮತ್ತೆ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾದ ಕಿರಿಯ ವೈದ್ಯರು !

ಜನಪ್ರತಿನಿಧಿ (ಕೋಲ್ಕತ್ತಾ) : ವೈದ್ಯಕೀಯ ಸಂಸ್ಥೆಗಳಲ್ಲಿ ತಮ್ಮ ಸುರಕ್ಷತೆ ಮತ್ತು ಭದ್ರತೆಯನ್ನು ಖಾತ್ರಿಪಡಿಸುವುದು ಒಳಗೊಂಡಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಕಿರಿಯ ವೈದ್ಯರು ಇಂದು ಮತ್ತೆ ಕೆಲಸಕ್ಕೆ ಬಹಿಷ್ಕಾರ ಹಾಕಿ ತಮ್ಮ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ. ನಿನ್ನೆ(ಸೋಮವಾರ) ಸಂಜೆ ಕಿರಿಯ ವೈದ್ಯರ ತಂಡ ರಾಜ್ಯ ಸರ್ಕಾರದ ವಿರುದ್ಧ ದೊಂದೆ ಮೆರವಣಿಗೆ ನಡೆಸಿ ಸಂತ್ರಸ್ತೆ ವೈದ್ಯೆಗೆ ನ್ಯಾಯ ದೊರಕಿಸಿಕೊಡುವಂತೆಯೂ ಆಗ್ರಹಿಸಿದ್ದಾರೆ.

ಸುರಕ್ಷತೆ ಮತ್ತು ಭದ್ರತೆಗಾಗಿ ತಮ್ಮ ಬೇಡಿಕೆಗಳನ್ನು ಈಡೇರುವ ಯಾವುದೇ ಸಕಾರಾತ್ಮಕ ಮಾರ್ಗಗಳು ಸರ್ಕಾರದಿಂದ ನಮಗೆ ಕಾಣುತ್ತಿಲ್ಲ. ಇಂದು ಪ್ರತಿಭಟನೆಯ 52 ನೇ ದಿನವಾಗಿದೆ ನಮ್ಮ ಜೀವಕ್ಕೆ ಇನ್ನೂ ಭದ್ರತೆ ಸಿಕ್ಕಿಲ್ಲ. ನಮಗೆ ಸರ್ಕಾರ ನೀಡಿದ್ದ ಭರವಸೆಗಳನ್ನು ಉಳಿಸಿಕೊಳ್ಳಲು ಯಾವುದೇ ಪ್ರಯತ್ನಗಳು ಆಗುತ್ತಿಲ್ಲ. ಹೀಗಿರುವಾಗ ಕರ್ತವ್ಯ ನಿಲ್ಲಿಸಿ ಮತ್ತೆ ಮುಷ್ಕರ ನಡೆಸುವುದು ಬಿಟ್ಟರೆ ನಮಗೆ ಅನ್ಯಮಾರ್ಗವಿಲ್ಲ ಎಂದು ಕಿರಿಯ ವೈದ್ಯರು ವ್ಯಕ್ತಪಡಿಸಿದ್ದಾರೆ.

ನಮ್ಮ ಬೇಡಿಕೆಗಳ ಈಡೇರಿಕೆಗೆ ಸರ್ಕಾರದಿಂದ ಸ್ಪಷ್ಟ ಸಕಾರಾತ್ಮಕ ಸ್ಪಂದರೆ ಸಿಗದಿದ್ದರೆ ನಮ್ಮ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರಿಯುತ್ತದೆ ಎಂದು ಕಿರಿಯ ವೈದ್ಯರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!