Sunday, October 13, 2024

ಕುಂದಾಪುರ ಪುರಸಭಾ ರಸ್ತೆಯ ಹಂಪುಗಳನ್ನು ಸರಿಪಡಿಸುವಂತೆ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಆಗ್ರಹ

ಕುಂದಾಪುರ, ಸೆ.30: ಪುರಸಭಾ ವ್ಯಾಪ್ತಿಯ ಮುಖ್ಯರಸ್ತೆಯಲ್ಲಿ ಅರೆಬರೆ ಹಂಪುಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಕುರಿತು ಸೋಮವಾರ ಕುಂದಾಪುರದ ಸರ್ಕಾರಿ ಆಸ್ಪತ್ರೆ ಸಮೀಪ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಕೂಡಲೇ ಸರಿಪಡಿಸುವಂತೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನಮಠ, ಪುರಸಭಾ ಮುಖ್ಯರಸ್ತೆಯಲ್ಲಿದ್ದ ಹಂಪುಗಳನ್ನು ರಥ ಚಲಿಸುವ ಸಲುವಾಗಿ ತಗೆದು ಆರು ತಿಂಗಳು ಕಳೆದರೂ ಸರಿ ಪಡಿಸುವ ಕೆಲಸ ಪುರಸಭೆ ಮಾಡಿಲ್ಲ. ಅರೆಬರೆ ಹಂಪುಗಳಿಂದ ವಾಹನ ಸವಾರರು, ಸಾರ್ವಜನಿಕರಿಗೆ ತುಂಬಾ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಪತ್ರಿಕಾ ಮಾಧ್ಯಮಗಳಲ್ಲಿ ಆಡಳಿತವನ್ನು ಎಚ್ಚರಿಸುವ ಕೆಲಸವಾದರೂ ಕೂಡಾ ಪುರಸಭೆ ಎಚ್ಚೆತ್ತುಕೊಂಡು ಹಂಪುಗಳನ್ನು ಪುನಃ ಹಾಕುವ ಕೆಲಸ ಮಾಡಿಲ್ಲ. ಸಾರ್ವಜನಿಕ ಹಿತ ದೃಷ್ಟಿಯಿಂದ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮೂಲಕ ಪುರಸಭೆಗೆ ಲಿಖಿತ ಮನವಿ ಸಲ್ಲಿಸುತ್ತಿದ್ದೇವೆ ಎಂದರು.

ಸ್ಥಳಕ್ಕೆ ಆಗಮಿಸಿದ ಪುರಸಭೆಯ ಮುಖ್ಯಾಧಿಕಾರಿ ಆನಂದ ವಿ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಪತ್ರಕರ್ತರು ಹಾಗೂ ಇತರ ಸಂಘಟನೆಗಳ ಪ್ರಮುಖರು ಅಧಿಕಾರಿಗಳ ಸಮ್ಮುಖದಲ್ಲಿ ಆಕ್ರೋಶ ವ್ಯಕ್ತ ಪಡಿಸಿದರು. ಹಂಪು ತಗೆಯುವ ಸಂದರ್ಭ ಯಾವ ಸಭೆ ಮಾಡಿ ನಿರ್ಣಯ ಕೈಗೊಂಡಿದ್ದಿರಿ. ಈಗ ಹಂಪು ಹಾಕಿಸಲು ಸಭೆ ನಡೆಸಿ ನಿರ್ಣಯ ಮಾಡಬೇಕು ಎನ್ನುವುದು ಒಪ್ಪುವ ವಿಷಯವಲ್ಲ. ಕನಿಷ್ಠ ಹಂಪು ಸರಿಪಡಿಸಲು ಇಷ್ಟು ಸಮಯ ಬೇಕಾ? ತಕ್ಷಣ ಹಂಪು ಹಾಕಿ, ಅಥವಾ ಎಲ್ಲಾ ಹಂಪುಗಳನ್ನು ತೆಗೆದು ಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಗಣೇಶ ಬೀಜಾಡಿ, ಕೋಶಾಧಿಕಾರಿ ಲೋಕೇಶ ಆಚಾರ್ಯ ತೆಕ್ಕಟ್ಟೆ, ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು, ಸದಸ್ಯರು, ಇಂಟೆಕ್ ಸಂಘಟನೆಯ ಅಧ್ಯಕ್ಷ ಲಕ್ಷ್ಮಣ ಶೆಟ್ಟಿ, ಸಿ‌ಐಟಿಯು ರಿಕ್ಷಾ ಸಂಘಟನೆಯ ರಮೇಶ ದೇವಾಡಿಗ, ಬಿ,ಎಂ,ಎಸ್ ರಾಜ್ಯ ಕಾರ್ಯಕಾರಿಣಿ ಸದಸ್ಯ ಸುರೇಶ ಮೊಗವೀರ, ಪುರಸಭಾ ಸದಸ್ಯರಾದ ಚಂದ್ರಶೇಖರ್ ಖಾರ್ವಿ, ಗಿರೀಶ ದೇವಾಡಿಗ, ಜೆಸಿ‌ಐನ ಹುಸೇನ್ ಹೈಕಾಡಿ, ಕುಂದಾಪುರ ತಾಲೂಕು ಛಾಯಾಗ್ರಾಹಕರ ಸಂಘದ ಸದಸ್ಯರು ಉಪಸ್ಥಿತರಿದ್ದರು.

ಪತ್ರಕರ್ತ ರಾಘವೇಂದ್ರ ಪೈ ಗಂಗೊಳ್ಳಿ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!