Sunday, October 13, 2024

ಬಾರಕೂರು ರೋಟರಿಗೆ 13 ಜಿಲ್ಲಾ ಪ್ರಶಸ್ತಿಗಳು

ಬಾರಕೂರು: ರೋಟರಿ ಕ್ಲಬ್ ಬಾರಕೂರು ಸಂಸ್ಥೆಯು ಉಡುಪಿ, ಚಿಕ್ಕಮಗಳೂರು, ಶಿವವೊಗ್ಗ ಹಾಗೂ ಹಾಸನ ಜಿಲ್ಲೆಯನ್ನು ಒಳಗೊಂಡಂತಹ ರೋಟರಿ ಜಿಲ್ಲೆ 3182ರಲ್ಲಿ ರೋಟರಿ ವರ್ಷ 2023-24ರ ಅವಧಿಯಲ್ಲಿ ಅತ್ತುತ್ತಮ ಸಮಾಜಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಕ್ಕಾಗಿ ಮೀಡಿಯಂ ಕ್ಲಬ್ ವಿಭಾಗದಲ್ಲಿ 13 ಜಿಲ್ಲಾ ಪ್ರಶಸ್ತಿಗಳನ್ನು ಹಾಗೂ ರೋಟರಿ ಅಂತಾರಾಷ್ಟ್ರೀಯ ಅಧ್ಯಕ್ಷರ ಸೈಟೇಶನ್ ಅವಾರ್ಡ್ ನ್ನೂ ಪಡೆದುಕೊಂಡಿದೆ.

ಮೌಲ್ಯವರ್ಧಿತ ಶಿಕ್ಷಣ, ಮೂಲಭೂತ ಶಿಕ್ಷಣ ಹಾಗೂ ಸಾಕ್ಷರತೆ, ಮಣ್ಣಿನ ಫಲವತ್ತತೆ ಮತ್ತು ಸಂರಕ್ಷಣೆ, ತ್ಯಾಜ್ಯ ವಸ್ತುಗಳ ನಿರ್ವಹಣೆ, ನೀರು ಮತ್ತು ನೈರ್ಮಲ್ಯ, ಸ್ವಚ್ಛತೆ, ರಸ್ತೆ ಸುರಕ್ಷತೆ, ರೋಗ ತಡೆಗಟ್ಟುವಿಕೆ ಮತ್ತು ಚಿಕಿತ್ಸೆ, ವೃತ್ತಿಪರ ಶಿಕ್ಷಣ ಹಾಗೂ ಕೌಶಲ್ಯ ಅಭಿವೃದ್ಧಿ, ಪರಿಸರ ಸಂರಕ್ಷಣೆ, ಅಂತಾರಾಷ್ಟ್ರೀಯ ತಿಳುವಳಿಕೆ, ಯುವಜನ ಸೇವೆ ಹಾಗೂ ಇನ್ನಿತರ ಸೇವಾ ಕಾರ್ಯಗಳಿಗಾಗಿ 13 ಜಿಲ್ಲಾ ಪ್ರಶಸ್ತಿಗಳು ಲಭಿಸಿವೆ.

2023-24ನೇ ಸಾಲಿನ ಅಧ್ಯಕ್ಷ ರೊ: ಸೀತಾರಾಮ್ ಎಸ್. ಹಾಗೂ ಕಾರ್ಯದರ್ಶಿ ರೊ: ಕೆ.ಬಾಬು ನಾಯ್ಕ ಹಾಗೂ ನಿಕಟಪೂರ್ವ ಸಹಾಯಕ ಗವರ್ನರ್ ರೊ: ಆನಂದ ಶೆಟ್ಟಿ, ಸ್ಥಾಪಕ ಕಾರ್ಯದರ್ಶಿ ರೊ: ಬಿ.ಸುಧಾಕರ ರಾವ್ ಮತ್ತು ಹಿರಿಯ-ಕಿರಿಯ ಸದಸ್ಯರ ಸಹಾಯ-ಸಹಕಾರ ಹಾಗೂ ಪರಿಶ್ರಮ- ಸಾಧನೆಗೆ ಸಿಕ್ಕಿದ 13 ಜಿಲ್ಲಾ ಪ್ರಶಸ್ತಿಗಳನ್ನು ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ಜಿಲ್ಲಾ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ರೋಟರಿ ಜಿಲ್ಲೆ 3182ರ ನಿಕಟಪೂರ್ವ ಜಿಲ್ಲಾ ಗವರ್ನರ್ ರೊ: ಬಿ.ಸಿ.ಗೀತಾರವರು ಬಾರಕೂರು ರೋಟರಿಯ ನಿಕಟಪೂರ್ವ ಅಧ್ಯಕ್ಷ ರೊ: ಸೀತಾರಾಮ ಎಸ್. ಇವರಿಗೆ ಪ್ರದಾನ ಮಾಡಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!