Sunday, October 13, 2024

ಸೆ.29ರಂದು ಬೆಂಗಳೂರು ಹೆಚ್.ಎನ್ ಕಲಾಕ್ಷೇತ್ರದಲ್ಲಿ ‘ಮಲೆನಾಡು ಉತ್ಸವ’

ಬೆಂಗಳೂರು: ಸೆಪ್ಟೆಂಬರ್ 29 ರ ಭಾನುವಾರ ಮಲೆನಾಡು ಉತ್ಸವ ಎಂಬ ಸಾಂಸ್ಕೃತಿಕ ಮೇಳ ಬೆಂಗಳೂರು ಜಯನಗರ 7ನೇ ಹಂತದ ನ್ಯಾಷನಲ್ ಕಾಲೇಜ್ ಆವರಣದಲ್ಲಿ ಇರುವ ಹೆಚ್.ಎನ್ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ.

ಬೆಳಿಗ್ಗೆ 10 ರಿಂದ ರಾತ್ರಿ 10ರ ವರೆಗೂ ಬ್ಯಾಕ್ ಟು ಬ್ಯಾಕ್ ಕಲ್ಚರಲ್ ಇವೆಂಟ್ಸ್ ನಡೆಯಲಿದೆ. ಬೆಳಿಗ್ಗೆ 10 ಕ್ಕೆ ಯಕ್ಷಗಾನ ಗಾನವೈಭವ ರಾಘವೇಂದ್ರ ಮಯ್ಯ, ಸೃಜನ್ ಗಣೇಶ ಹೆಗ್ಡೆ ಮತ್ತು ಭರತ್ ಶೆಟ್ಟಿ ಸಿದ್ಧಕಟ್ಟೆ, ಚಂಡೆ-ಕೋಟ ಶಿವಾನಂದ ಮದ್ದಳೆ ಅಕ್ಷಯ್ ಆಚಾರ್ ಬಿದ್ಕಲ್ ಕಟ್ಟೆ. ಬಳಿಕ ಬೆಂಗಳೂರು ವ್ಯೂಹ ತಂಡದಿಂದ ನವರಸ ರಾಮಾಯಣ ನೃತ್ಯ ರೂಪಕ ನಡೆಯಲಿದೆ.

ಶೃಂಗೇರಿ ರಂಗಮಿತ್ರ ತಂಡದಿಂದ ಮಲೆನಾಡು ಭಾಷೆ ಯ ಹಾಸ್ಯ ನಾಟಕ ‘ಗುಡುಗು ಹೇಳಿದ್ದೇನು?’ (ಮೂಲಕಥೆ : ಪೂರ್ಣಚಂದ್ರ ತೇಜಸ್ವಿ ನಿರ್ವಹಣೆ : ಬಿ ಎಲ್ ರವಿಕುಮಾರ್) ಗುತ್ತಳಿಕೆ ಕೇಶವ ಮತ್ತು ತಂಡದಿಂದ ಗಾನ ಗೌಜಿ ಗಮ್ಮತ್ತು. ಉಡುಪಿ ಜಿಲ್ಲೆ ಹಾಲಾಡಿಯ ಶ್ರೀ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿ ಯಿಂದ ಮಂದ್ರ ಬೆಳಕಿನ ಯಕ್ಷಗಾನ ಅಭಿಮನ್ಯು ಕಾಳಗ ಪ್ರದರ್ಶನಗೊಳ್ಳಲಿದೆ.

ಜೊತೆಗೆ ಮಲೆನಾಡ ಆಹಾರ ಮೇಳ, ಸ್ನೇಹ ಮಿಲನ, ಸಾಧಕ ಗೌರವ, ಸೆಲ್ಫಿ ಸ್ಟ್ಯಾಂಡ್ ಇತ್ಯಾದಿ ವಿಶೇಷತೆಗಳಿರುತ್ತದೆ. ಮಧ್ಯಾಹ್ನ ಮಲೆನಾಡ ಶೈಲಿಯ ಸರಳ ಭೋಜನ ವ್ಯವಸ್ಥೆ ಇದೆ. ಎಲ್ಲಾ ಕಾರ್ಯಕ್ರಮಗಳಿಗೆ ಉಚಿತ ಪ್ರವೇಶವಿದೆ ಮತ್ತು ಎಲ್ಲರಿಗೂ ಮುಕ್ತ ಪ್ರವೇಶವಿದೆ. ಹೆಚ್ಚಿನ ಮಾಹಿತಿಗೆ 9448101708 ಸಂಪರ್ಕಿಸಬಹುದಾಗಿದೆ ಎಂದು ರಮೇಶ್ ಬೇಗಾರ್ ಶೃಂಗೇರಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!