Sunday, October 13, 2024

ಸ್ವಚ್ಫತೆಯು ದೇವರ ಸೇವೆ-ಅಬ್ದುಲ್ ರಹೀಮ್ ಹುಸೇನ್ ಶೇಖ್

ಕೋಟೇಶ್ವರ: ಆಂತರಿಕ, ಭೌತಿಕ ಮತ್ತು ಪರಿಸರ ಸ್ವಚ್ಫತೆಯು ನಾವು ಭೂಮಿ ತಾಯಿಗೆ ನೀಡುವ ಕೊಡುಗೆ ಮತ್ತು ಕರ್ತವ್ಯವಾಗಿದೆ. ನಾವು ಬದುಕುವ ಪರಿಸರವು ಮಾನವ ನಿರ್ಮಿತವಲ್ಲ. ಇದು ಪ್ರಕೃತಿ ನಿರ್ಮಿತ. ಇಲ್ಲಿ ಬದುಕುವ ಕೋಟ್ಯಾಂತರ ಜೀವಿಗಳಲ್ಲಿ ಮನುಷ್ಯನಿಗೆ ಮಾತ್ರ ಇದನ್ನು ರಕ್ಷಿಸುವ ಮತ್ತು ಉನ್ನತೀಕರಿಸುವ ಜವಾಬ್ಧಾರಿ ಇದೆ. ಉಳಿದ ಯಾವ ಜೀವಿಗಳು ಪರಿಸರವನ್ನು ನಾಶ ಮಾಡುವುದಿಲ್ಲ ಆದರೆ ಇತ್ತೀಚಿನ ವರ್ಷಗಳಲ್ಲಿ ಮಾನವ ನಿರ್ಮಿತವಾದ ವ್ಯವಸ್ಥೆಗಳಿಂದ ಪರಿಸರಕ್ಕೆ ಅಪಾರವಾದ ಹಾನಿ ಉಂಟಾಗುತ್ತಿದೆ. ಆದ್ದರಿಂದ ನಾವೆಲ್ಲರೂ ನಮ್ಮ ಹಂತದಲ್ಲಿ ಪರಿಸರವನ್ನು ಉಳಿಸುವ ಕರ್ತವ್ಯವನ್ನು ಸ್ವಚ್ಫತೆಯ ಮೂಲಕ ನೆರವೇರಿಸಬೇಕಾಗಿದೆ. ಇದು ನಾವು ದೇವರ ಅನುಗ್ರಹವನ್ನು ಪಡೆಯಲು ಇರುವ ಏಕೈಕ ಮಾರ್ಗವಾಗಿದೆ ಎಂದು ಕುಂದಾಪುರದ ಗೌರವಾನ್ವಿತ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಅಬ್ದುಲ್ ರಹೀಮ್ ಹುಸೇನ್ ಶೇಖ್ ಹೇಳಿದರು.
ಅವರು ಕೋಟೇಶ್ವರದ ಶ್ರೀ ಕಾಳಾವರ ವರದರಾಜ ಎಂ ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಇಲ್ಲಿ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಅಭಿಯೋಗ ಇಲಾಖೆ ಇವರ ಸಹಯೋಗದಲ್ಲಿ ನಡೆದ ಸ್ವಚ್ಫತಾಹಿ ಸೇವಾ ಅಭಿಯಾನ೨೦೨೪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜು ಎನ್ ಮಾತನಾಡುತ್ತಾ ಭಾರತದಲ್ಲಿ ಸ್ವಚ್ಫತಾಹಿ ಸೇವಾ ಅಭಿಯಾನದ ರೂಪುರೇಷೆಯನ್ನು ವಿವರಿಸುತ್ತಾ ದೇಶದಾದ್ಯಂತ ನಡೆಯುತ್ತಿರುವ ವಿವಿಧ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಶ್ರಮದಾನ, ಜನರ ಭಾಗವಹಿಸುವಿಕೆ ಮತ್ತು ನೈರ್ಮಲ್ಯ ಕಾರ್ಮಿಕರ ಸುರಕ್ಷೆ ಕುರಿತು ವಿವರಿಸಿದರು.
ಪುರಸಭೆಯ ಮುಖ್ಯ ಅಧಿಕಾರಿ ಆನಂದ ಜಿ. ಮತ್ತು ವಕೀಲರ ಸಂಘದ ಅಧ್ಯಕ್ಷ ಶ್ರೀ ಹೆಚ್. ಪ್ರಮೋದ್ ಹಂದೆ ಮಾತನಾಡಿ ಜೀವನದಲ್ಲಿ ಸ್ವಚ್ಫತೆಯ ಮಹತ್ವ ಮತ್ತು ವಿವಿಧ ಆಯಾಮಗಳನ್ನು ವಿವರಿಸಿದರು.
ಪ್ರಧಾನ ಸಿವಿಲ್ ಮತ್ತು ಜಿ.ಎಂ.ಎಫ್.ಸಿ ನ್ಯಾಯಾಧೀಶರಾದ ಶ್ರೀಮತಿ ಮಂಜುಳಾ ಬಿ, ಕುಂದಾಪುರ ಸಹಾಯಕ ಆಯುಕ್ತರಾದ ಶ್ರೀ ಮಹೇಶ್ಚಂದ್ರ, ಸರಕಾರಿ ಅಭಿಯೋಜಕರಾದ ಉದಯ ಕುಮಾರ್ ಬಿ.ಎ, ವಕೀಲರ ಸಂಘದ ಕಾರ್ಯದರ್ಶಿ ಪ್ರಕಾಶ್ಚಂದ್ರ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಜೇಂದ್ರ ಎಸ್ ನಾಯಕ ವೈಯಕ್ತಿಕ ಮತ್ತು ಸಾರ್ವಜನಿಕ ಸ್ವಚ್ಫತೆ ಕುರಿತು ವಿವರಿಸಿದರು.
ವಿದ್ಯಾರ್ಥಿ ಕ್ಷೇಮಪಾನಾಧಿಕಾರಿ ರಾಮರಾಯ ಆಚಾರ್ಯ ಅತಿಥಿಗಳನ್ನು ಸ್ವಾಗತಿಸಿದರು. ವಿದ್ಯಾರ್ಥಿನಿ ಕು. ಕಾವ್ಯ ಮತ್ತು ತಂಡ ಪ್ರಾರ್ಥಿಸಿದರು. ವಾಣಿಜ್ಯಶಾಸ್ತ್ರ ಸಹ ಪ್ರಾಧ್ಯಾಪಕ ಡಾ. ವೆಂಕಟರಾಮ್ ಭಟ್ ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!