spot_img
Wednesday, April 1, 2026
spot_img

ʼಸೆಮಿಕಂಡಕ್ಟರ್‌ʼ ರಾಜ್ಯಕ್ಕೆ ಅನ್ಯಾಯ : ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ರಾಜ್ಯ ಕಾಂಗ್ರೆಸ್‌ !

ಜನಪ್ರತಿನಿಧಿ (ಬೆಂಗಳೂರು) : ಪಕ್ಷಪಾತಿ ಪ್ರಧಾನಿ ಕರ್ನಾಟಕಕ್ಕೆ ಮಾಡುತ್ತಿರುವ ಅನ್ಯಾಯದ ಸರಣಿ ಮುಂದುವರೆದಿದೆ. ಸೆಮಿಕಂಡಕ್ಟರ್ ವಲಯ ಸ್ಥಾಪಿಸಲು ಕರ್ನಾಟಕ ಸರ್ಕಾರ ಪ್ರಸ್ತಾವನೆ ಸಲ್ಲಿಸಿತ್ತು, ಆದರೆ ಗುಜರಾತಿಗೆ ನಾಲ್ಕು ಸೆಮಿಕಂಡಕ್ಟರ್ ವಲಯಗಳನ್ನು ಮಂಜೂರು ಮಾಡಲಾಗಿದೆ.ಯಾವುದೇ ಮೂಲಸೌಕರ್ಯವಿಲ್ಲದ ಗುಜರಾತಿಗೆ ಮನ್ನಣೆ ನೀಡಿ ಮೂಲಸೌಕರ್ಯದ ಅರ್ಹತೆ ಹೊಂದಿದ್ದ ಕರ್ನಾಟಕಕ್ಕೆ ಅನ್ಯಾಯ ಮಾಡಲಾಗಿದೆ ಎಂದು ರಾಜ್ಯ ಕಾಂಗ್ರೆಸ್‌ ಕೇಂದ್ರ ಬಿಜೆಪಿ ಸರ್ಕಾರವನ್ನು ಟೀಕಿಸಿದೆ.

ಸೆಮಿಕಂಡಕ್ಟರ್‌ ವಲಯ ಸ್ಥಾಪನೆಗೆ ಬೇಕಾದ ಎಲ್ಲಾ ಮೂಲಸೌಕರ್ಯ ಕರ್ನಾಟಕದಲ್ಲಿದೆ. ಆದರೇ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಗುಜರಾತ್‌ ನಲ್ಲಿ ಹೂಡಿಕೆ ಮಾಡುವಂತೆ ಉದ್ಯಮಿಗಳಿಗೆ ಒತ್ತಡ ಹೇರುತ್ತಿದೆ. ಈ ಮೂಲಕ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಆರೋಪ ಮಾಡಿದ್ದರು.

ಈ ಬಗ್ಗೆ ತನ್ನ ಅಧಿಕೃತ ಎಕ್ಸ ಖಾತೆಯ ಮೂಲಕ ಕೇಂದ್ರ ಸರ್ಕಾರವನ್ನು ಟೀಕಿಸಿದ ರಾಜ್ಯ ಕಾಂಗ್ರೆಸ್‌, ಗುಜರಾತಿನಲ್ಲಿ ಹೂಡಿಕೆ ಮಾಡುವಂತೆ ಹೂಡಿಕೆದಾರರಿಗೆ ಒತ್ತಡ ಹೇರುವ ಪ್ರಧಾನಿಗೆ ಕರ್ನಾಟಕದ ಮೇಲೆ ಇಷ್ಟೊಂದು ಅಸಹನೆ ಏಕೆ? ಮೋದಿಯವರು ಗುಜರಾತಿಗೆ ಮಾತ್ರ ಪ್ರಧಾನಿಯೇ? ಕರ್ನಾಟಕ ರಾಜ್ಯ ಬಿಜೆಪಿ ಸಂಸದರು ಕೇಂದ್ರ ಸರ್ಕಾರದ ಅನ್ಯಾಯಗಳ ಬಗ್ಗೆ ಬಾಯಿಗೆ ಪ್ಲಾಸ್ಟರ್ ಅಂಟಿಸಿಕೊಂಡು ಕುಳಿತಿರುವುದೇಕೆ? ಕರ್ನಾಟಕದ ಬಿಜೆಪಿ ನಾಯಕರ ಬದ್ಧತೆ ಕರ್ನಾಟಕಕ್ಕೋ, ಕರ್ನಾಟಕದ ಏಳಿಗೆ ಸಹಿಸದ ಪ್ರಧಾನಿಯ ಬಗ್ಗೆಯೋ? ಎಂದು ಖಾರವಾಗಿ ಪ್ರಶ್ನೆಗಳ ಸುರಿಮಳೆಗೈದಿದೆ.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!