Sunday, October 13, 2024

ಮರವಂತೆ ಮಹಿಳಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

ಮರವಂತೆ: ಮಹಿಳಾ ಮೀನುಗಾರರ ವಿವಿಧೋದ್ದೇಶ ಸಹಕಾರಿ ಸಂಘ ನಿ ಮರವಂತೆ ಇದರ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.21 ರಂದು ನಾವುಂದ ಮಹಾಗಣಪತಿ ಮಾಂಗಲ್ಯ ಮಂಟಪದಲ್ಲಿ ಸಂಘದ ಅಧ್ಯಕ್ಷರಾದ ಶ್ರೀಮತಿ ಸವಿತಾ ಖಾರ್ವಿರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಶ್ರೀನಿವಾಸ ಅಡಿಗ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳಾನ್ನಾಡಿ ಸಂಘದ ತ್ವರಿತಗತಿಯ ಬೆಳವಣಿಗೆ ಬಗ್ಗೆ ಸ- ವಿವರವಾಗಿ ವಿವರಿಸಿದರು.

ಸಂಘದ ಅಧ್ಯಕ್ಷೆ ಶ್ರೀಮತಿ ಸವಿತಾ ಖಾರ್ವಿ ಅಧ್ಯಕ್ಷರ ಭಾಷಣ ಮಾಡುತ್ತಾ ಸಂಘದ ತ್ವರಿತ ಬೆಳವಣಿಗೆ, ಲಾಭಾಂಶ, ದೀರ್ಘಾವಧಿ ಗೃಹಸಾಲ ಚಿನ್ನಾಭರಣ ಸಾಲ ಹಾಗೂ ಮುಂದಿನ ಯೋಜನೆಗಳ ಬಗ್ಗೆ ವಿವರಿಸಿದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಮೊಗವೀರ ನಾವುಂದ, ನಿರ್ದೇಶಕರುಗಳಾದ ಶ್ರೀಮತಿ ಶೈಲಾ ಖಾರ್ವಿ ಮರವಂತೆ, ಶ್ರೀಮತಿ ಗಿರಿಜ ಖಾರ್ವಿ ಮರವಂತೆ, ಶ್ರೀಮತಿ ಆಶಾ ಉಳ್ಳೂರು, ಶ್ರೀಮತಿ ಸುಜಾತ ಪೂಜಾರಿ ನಾವುಂದ, ಶ್ರೀಮತಿ ಸೀತಾ ಖಾರ್ವಿ ಮರವಂತೆ, ಶ್ರೀಮತಿ ಮುಕಾಂಬು ಖಾರ್ವಿ ಬಡಾಕೆರೆ, ಶ್ರೀಮತಿ ನಬಿಸಾ ನಾವುಂದ ಉಪಸ್ಥಿತರಿದ್ದರು.

ಛಾಯ ಪ್ರಾರ್ಥನೆ ಮಾಡಿದರು. ಕು.ಚೈತ್ರಾ ಹಿಂದಿನ ಮಹಾಸಭೆ ನಡವಳಿಕೆಯನ್ನು ಓದಿ ಹೇಳಿದರು. ಸಂಘದ ಲೆಕ್ಕಿಗೆ ಶ್ರೀಮತಿ ರೇಖಾ ನಿವ್ವಳ ಲಾಭದ ವಿಂಗಡಣೆ ಮತ್ತು ಮುಂದಿನ ಸಾಲಿನ ಅಂದಾಜು ಆಯ-ವ್ಯಯ ಪಟ್ಟಿ ಬಜೇಟ್ ಮಂಜೂರಾತಿ ಓದಿ ಹೇಳಿದರು. ಹರ್ಷ ವಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!