Tuesday, October 22, 2024

ಬಸ್ರೂರು ವ್ಯ.ಸೇ.ಸ.ಸಂಘದ ವಾರ್ಷಿಕ ಮಹಾಸಭೆ| 17% ಡಿವಿಡೆಂಡ್ ಘೋಷಣೆ: 1.49 ಲಕ್ಷ ಲಾಭ

ಬಸ್ರೂರು: ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘವು ಪ್ರಗತಿ ಪಥದತ್ತ ಸದಾ ಮುನ್ನಡೆಯನ್ನು ಕಂಡುಕೊಂಡಿದ್ದು, ಇದಕ್ಕೆಲ್ಲ ಸದಸ್ಯರ ಸಹಕಾರವೇ ಕಾರಣ. ಸಂಘವು ರೈತ ಕೃಷಿಕರಿಗೆ ಆಧ್ಯತೆಯನ್ನು ನೀಡುತ್ತಿದ್ದು, ಶೂನ್ಯ ಬಡ್ಡಿದರದಲ್ಲಿ ಸಿಗುವ ಸಾಲವನ್ನು ರೈತರು ಸಮರ್ಪಕವಾಗಿ ಉಪಯೋಗಿಸಿಕೊಳ್ಳಬೇಕು. ಈ ಬಾರಿ ಸಂಘವು 1.49 ಲಕ್ಷ ಲಾಭವನ್ನು ಗಳಿಸಿದ್ದು, ಸದಸ್ಯರಿಗೆ 17% ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಉಪಾಧ್ಯಕ್ಷರಾದ ವಿಕಾಸ ಹೆಗ್ಡೆ ಹೇಳಿದರು. ಅವರು ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಸಂಘದಲ್ಲಿ ಎಲ್ಲಾ ವರ್ಗದ ಸದಸ್ಯರು ಸೇರಿ 15.013 ಜನ ಸದಸ್ಯರಿದ್ದು, ಅವರಿಂದ ರೂ.1,90,75,015 ಪಾಲು ಬಂಡವಾಳ ಹೊಂದಲಾಗಿದೆ. ವರದಿ ವರ್ಷದ ಅಂತ್ಯಕ್ಕೆ ಸಂಘದಲ್ಲಿ ರೂ. 78,49,63,635.15 ಠೇವಣಿ ಹೊಂದಿದೆ. ರೈತ ಕೃಷಿಕರಿಗೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ರೂ. 7,51,47.089 ಗಳನ್ನು ಕೃಷಿ ಸಾಲವನ್ನು ನೀಡಲಾಗಿದೆ. ಸಂಘದ ಸದಸ್ಯರಿಗೆ ರೂ.64.72 ಕೋಟಿಯಷ್ಟು ಇತರೆ ಸಾಲ ನೀಡಲಾಗಿದೆ. ಸಾಲ ವಸೂಲಾತಿಯಲ್ಲಿ 97% ಸಾಧನೆ ಮಾಡಿದೆ.
ಸಂಘದ 269 ನವೋದಯ ಸ್ವ ಸಹಾಯ ಗುಂಪುಗಳಿದ್ದು, 2.10 ಕೋಟಿ ಸಾಲವನ್ನು ನೀಡಲಾಗಿದೆ. ಗುಂಪುಗಳಿಂದ 81 ಲಕ್ಷ ಠೇವಣಿ ಪಡೆಯಲಾಗಿದೆ. ಸಂಘದ ವತಿಂದ 151 ಅಕ್ಷಯ ಸ್ವ ಸಹಾಯ ಗುಂಪುಗಳಿದ್ದು, 4.85 ಕೋಟಿ ಸಾಲ ನೀಡಲಾಗಿದೆ. ವರದಿ ವರ್ಷದ ಅಂತ್ಯಕ್ಕೆ ಸಂಘವು ರೂ.37,81,99,637 ನ್ನು ವಿವಿಧ ಆರ್ಥಿಕ ಸಂಸ್ಥೆಗಳಲ್ಲಿ ಹಣಕಾಸು ವಿನಿಯೋಗ ಮಾಡಿದೆ.
ಮುಂದಿನ ಆರ್ಥಿಕ ವರ್ಷದಲ್ಲಿ ಅನೇಕ ಗುರಿಗಳನ್ನು ಇಟ್ಟುಕೊಳ್ಳಲಾಗಿದೆ ಎಂದು ಉಪಾಧ್ಯಕ್ಷರಾದ ವಿಕಾಸ ಹೆಗ್ಡೆ ಹೇಳಿದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸಬಿತಾ ಬಿ. ವಾರ್ಷಿಕ ವರದಿಯನ್ನು ಮಂಡಿಸಿದರು. ನಿರ್ಧೇಶಕರಾದ ಎನ್. ಶೀನ ಪೂಜಾರಿ, ಗೋಪಾಲ ಶೆಟ್ಟಿಗಾರ್., ಕೆ. ಮಹಾಲಿಂಗ, ಕೆ. ಗುಣಾಕರ ಶೆಟ್ಟಿ, ಜಯಾ ಖಾರ್ವಿ, ಸಂಜೀವ ಪೂಜಾರಿ, ಸೀಮಾ ಮೊಗವೀರ, ಕೃಷ್ಣ ಪೂಜಾರಿ, ರಾಘವೇಂದ್ರ ಗಾಣಿಗ, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಸಂದೀಪ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಹಕಾರಿ ಸಂಘಗಳ ಸಹಾಯಕ ನಿಬಂಧಕರಾಗಿ ನಿವೃತ್ತಿಯಾದ ಅರುಣ್ ಕುಮಾರ್ ಎಸ್.ವಿ.ಯವರನ್ನು ಸನ್ಮಾನಿಸಲಾಯಿತು. ಸ್ಥಳೀಯ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಕೆ.ಎನ್. ಮಂಜುನಾಥ ಇವರನ್ನು ಗೌರವಿಸಲಾಯಿತು.
ಸಂಘದ ನಿರ್ದೇಶಕ ಶೀನ ಪೂಜಾರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಇನ್ನೋರ್ವ ನಿರ್ದೇಶಕ ಗುಣಾಕರ ಶೆಟ್ಟಿ ಸ್ವಾಗತಿಸಿ, ಸಹಾಯಕ ಮೆನೇಜರ್ ಕೆ.ನ್. ಗೌತಮ್ ಕಾರ್ಯಕ್ರಮ ನಿರೂಪಿಸಿ, ನಿರ್ದೇಶಕ ಮಾಲಿಂಗ ವಂದಿಸಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!