Saturday, October 12, 2024

ವಿಶ್ವಕರ್ಮ ಸಮಾಜ ವೇದಿಕೆ ಬೆಂಗಳೂರು- 20ನೇ ವರ್ಷದ ವಿಶ್ವಕರ್ಮ ಪೂಜೆ, ವಾರ್ಷಿಕ ಮಹಾಸಭೆ

ಜನಪ್ರತಿನಿಧಿ (ಬೆಂಗಳೂರು) : ವಿಶ್ವಕರ್ಮ ಸಮಾಜ ವೇದಿಕೆ ಬೆಂಗಳೂರು ಇದರ 20ನೇ ವರ್ಷದ ವಿಶ್ವಕರ್ಮ ಪೂಜೆ ಶೀಲೇಶ್ ಆಚಾರ್ಯ ಪೌರೋಹಿತ್ಯದಲ್ಲಿ ನೆರವೇರಿತು ಹಾಗೂ ವಾರ್ಷಿಕ ಮಹಾಸಭೆಯು ಗಿರಿನಗರದ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಭಾನುವಾರ(ದಿನಾಂಕ 22.09.2024) ನಡೆಯಿತು.

ಪೂಜಾ ಕಾರ್ಯಕ್ರಮದ ಬಳಿಕ ಹಿರಿಯರ ಮತ್ತು ಆಡಳಿತ ಸಮಿತಿಯ ಪಧಾದಿಕಾರಿಗಳ ಸಮ್ಮುಖದಲ್ಲಿ www.vsvbengaluru.com ವೇದಿಕೆಯ ಅಧೀಕೃತ ಜಾಲತಾಣವು ಉದ್ಘಾಟನೆಗೊಂಡಿತು.

ವಿಶ್ವಕರ್ಮ ಸಮಾಜದಲ್ಲಿ ವಿಶ್ವಕರ್ಮರಿಗೆಂದೇ ರೂಪುಗೊಂಡ ಮೊದಲನೇ ಜಾಲತಾಣವು ಇದಾಗಿದ್ದು, ಕೇವಲ ೩೦ ಗಂಟೆಗಳಲ್ಲಿ ಜಾಲತಾಣದ ಕಾರ್ಯವನ್ನು ನಿರ್ವಹಿಸಿದ ದೀಪಕ್ ಎಂ ಎನ್ ಆಚಾರ್ಯರನ್ನುಸಭೆಯಲ್ಲಿ ಗೌರವಿಸಲಾಯಿತು . ಈ ಜಾಲತಾಣ ಹೊರಬರುವಲ್ಲಿ ಸಹಕರಿಸಿದ  ಕಿಶನ್ ಚಂದ್ರ ಆಚಾರ್ಯ, ವಿನೀತ್ ಆಚಾರ್ಯ ಹಾಗೂ ಡೇಟಾಬೇಸ್ ತಂಡದ ವೆಬ್ಸೈಟ್ ಎಂಬ ಮಹತ್ತರ ಯೋಜನೆಗೆ ಸಮಾಜ ಭಾಂದವರಿಂದ ಮೆಚ್ಚುಗೆ ವ್ಯಕ್ತಪಡಿಸಲಾಯಿತು.

ಪ್ರಧಾನ ಕಾರ್ಯದರ್ಶಿಗಳಾದ ಯತೀಂದ್ರ ಆಚಾರ್ಯ ರವರು 2023-2024ನೇ ಸಾಲಿನ ವಾರ್ಷಿಕ ವರದಿಯನ್ನು ಸಭೆಯಲ್ಲಿ ಮಂಡಿಸಿದರು, ನಂತರ ಆಂತರಿಕ ಲೆಕ್ಕ ಪರಿಶೋಧಕರಾದ ನಾಗೇಂದ್ರ ಆಚಾರ್ಯ ರವರು 2023-2024ನೇ ಸಾಲಿನ ಲೆಕ್ಕಪತ್ರವನ್ನು ಸಭೆಗೆ ಮಂಡಿಸಿದರು. ಅಧ್ಯಕ್ಷರಾದ ತ್ರಿವಿಕ್ರಮ ಆಚಾರ್ಯರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸಂಘದ ಬೆಳವಣಿಗೆಗಳನ್ನು ಶ್ಲಾಘಿಸಿದರು.

ಅಯೋಧ್ಯೆಯ ಶ್ರೀ ರಾಮಲಲ್ಲಾನ ವಿಗ್ರಹ ಕೆತ್ತನೆಯಲ್ಲಿ ಭಾಗಿಯಾದಂತಹ ಶಿಲ್ಪಿ ಚಿದಾನಂದ ಆಚಾರ್ಯ ಮೂವಾಜೆ ಅವರನ್ನು ಸನ್ಮಾನಿಸಲಾಯಿತು. ಇನ್ನು, 2023-2024ನೇ ಶೈಕ್ಷಣಿಕ ಸಾಲಿನಲ್ಲಿ ಉನ್ನತ ಅಂಕಗಳಿಸಿದ ಬೆಂಗಳೂರಿನ ವಿಶ್ವಕರ್ಮ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ದಿ. ಶ್ರೀಧರ ಆಚಾರ್ಯ ಅವರ ಸ್ಮರಣಾರ್ಥ ಅವರ ಧರ್ಮಪತ್ನಿ ವನಮಾಲಾ ಶ್ರೀಧರ ಆಚಾರ್ಯ ಪುರಸ್ಕೃತ ವಿದ್ಯಾರ್ಥಿಗಳಿಗೆ ಕಲಿಕೆಗೆ ಉಪಯುಕ್ತ ಪುಸ್ತಕಗಳನ್ನು ನೀಡಿದರು. ವಿನೀತ್ ಕುಮಾರ್ ಆಚಾರ್ಯ ಜೊತೆಗಿದ್ದರು.

ಇನ್ನು, ರಾಘವ ಆಚಾರ್ಯ ಮಾಣಿಲ ರವರ 2024-26 ಸಾಲಿನ ನೂತನ ಸಮಿತಿ ಚುನಾವಣಾ ಪ್ರಕ್ರಿಯೆ ನಡೆಯಿತು. ನೂತನ ಸಮಿತಿಯ ಗೌರವಾಧ್ಯಕ್ಷರಾಗಿ  ತ್ರಿವಿಕ್ರಮ ಆಚಾರ್ಯ ನಲ್ಕ, ಅಧ್ಯಕ್ಷರಾಗಿ  ಮೋಹನ ಆಚಾರ್ಯ ವಿಟ್ಲ, ಉಪಾಧ್ಯಕ್ಷರುಗಳಾಗಿ ಜಾಹ್ನವಿ ಗಣೇಶ್ ಆಚಾರ್ಯ, ರಾಜಲಕ್ಷ್ಮಿ ವಾಸುದೇವ ಆಚಾರ್ಯ, ಸಂತೋಷ್ ಕುಮಾರ್ ಆಚಾರ್ಯ, ಪ್ರಧಾನ ಕಾರ್ಯದರ್ಶಿಯಾಗಿ ವಿನೀತ್ ಕುಮಾರ್ ಆಚಾರ್ಯ, ಜೊತೆ ಕಾರ್ಯದರ್ಶಿಯಾಗಿ ಅನಂತ ಕಿರಣ ಆಚಾರ್ಯ, ಕೋಶಾಧಿಕಾರಿಯಾಗಿ ವೇಣುಗೋಪಾಲ ಆಚಾರ್ಯ, ಅಂತರಿಕ ಲೆಕ್ಕಪರಿಶೋಧಕರಾಗಿ ನಾಗೇಂದ್ರ ಆಚಾರ್ಯ ಆಯ್ಕೆ ಮಾಡಲಾಯಿತು.

ಗಾಯತ್ರಿ ಆಚಾರ್ಯ ಸ್ವಾಗತಿಸಿ, ವಿಜಯಕಲ ಆಚಾರ್ಯ ಧನ್ಯವಾದ ಸಮರ್ಪಿಸಿದರು, ದೀಕ್ಷಿತಾ ಯತೀಂದ್ರ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!