Saturday, October 12, 2024

‘ನೆಲ್ಲಿಕಟ್ಟೆ ದಸರಾ’ ರಜತ ಸಂಭ್ರಮ | ಅ.9ರಿಂದ ಅ.13ರ ತನಕ ಅದ್ದೂರಿಯ ಕಾರ್ಯಕ್ರಮ

ಕುಂದಾಪುರ: ಜೈ ಭಾರತಿ ಶಾಲಾ ಸಾರ್ವಜನಿಕ ಶಾರದಾ ಮಹೋತ್ಸವ ಸಮಿತಿ ವತಿಯಿಂದ ನೆಡೆಯುವ ನೆಲ್ಲಿಕಟ್ಟೆ ದಸರಾ ರಜತ ಮಹೋತ್ಸವದ ಸಂಭ್ರಮದಲ್ಲಿದೆ. ಅಕ್ಟೋಬರ್ 9ರಿಂದ ಅ.13ರ ತನಕ ವೈಭವದ ನೆಲ್ಲಿಕಟ್ಟೆ ದಸರಾ ಮಹೋತ್ಸವ ನಡೆಯಲಿದೆ.

ಅಕ್ಟೋಬರ್ 9ರಂದು ಬೆಳಿಗ್ಗೆ 9 ಗಂಟೆಯಿಂದ ಕೋದಂಡ ರಾಮಚಂದ್ರ ದೇವಸ್ಥಾನದಿಂದ ಮೆರವಣಿಗೆಯೊಂದಿಗೆ ದೇವಿಯ ವಿಗ್ರಹ ತಂದು ಶಾರದ ಮಂಟಪದಲ್ಲಿ ಪ್ರತಿಷ್ಠಾಪನೆ ಮಾಡಲಾಗುವುದು. ಬೆಳಿಗ್ಗೆ 10-30ಕ್ಕೆ ಗಣಹೋಮ, ದುರ್ಗಾಹೋಮ,ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ 12.30ರಿಂದ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5 ಗಂಟೆಯಿಂದ ಭಜನಾ ಕಾರ್ಯಕ್ರಮ, 6-30ರಿಂದ ದೀಪ ನಮಸ್ಕಾರ, ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ 8.15ರಿಂದ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿಗಳು, ಅರೆಹೊಳೆ ಪ್ರತಿಷ್ಠಾನದವರಿಂದ ನೃತ್ಯ ವೈಭವ, ಹಳೆ ವಿದ್ಯಾರ್ಥಿಗಳಿಂದ ವಿವಿಧ ವಿನೋಧಾವಳಿಗಳು ನಡೆಯಲಿವೆ.

ಅಕ್ಟೋಬರ 10ರಂದು ಬೆಳಿಗ್ಗೆ 10-30ರಿಂದ 12-30ರ ತನಕ ಲಲಿತ ಸಹಸ್ರ ನಾಮ ಮತ್ತು ದುರ್ಗಾಹೋಮ ಹಾಗೂ ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ, ಮಧ್ಯಾಹ್ನ2 ಗಂಟೆಯಿಂದ ದಿ.ಜಿ.ಆರ್ ಕಾಳಿಂಗ ನಾವಡ ಅಭಿಮಾನಿ ಬಳಗ ನೆಲ್ಲಿಕಟ್ಟೆ ಮತ್ತು ಯಂಗ್ ಸ್ಟಾರ್ ಅಂಪಾರು ಇವರ ಪ್ರಾಯೋಜಕತ್ವದಲ್ಲಿ ದಿ.ಜಿ.ಆರ್ ಕಾಳಿಂಗ ನಾವಡ ಸಂಸ್ಮರಣೆ ಹಾಗೂ ಮಯ್ಯ ಯಕ್ಷ ಬಳಗ ಹಾಲಾಡಿ ಇವರಿಂದ ಯಕ್ಷ-ಗಾನ-ವೈಭವ ನಡೆಯಲಿದೆ.

ಸಂಜೆ 6 ಗಂಟೆಯಿಂದ ಭಜನೆ ಕಾರ್ಯಕ್ರಮ,6.30ರಿಂದ 8ರ ತನಕ ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ 8 ಗಂಟೆಯಿಂದ ದಿ.ಜಿ.ಆರ್ ಕಾಳಿಂಗ ನಾವಡ ಅಭಿಮಾನಿ ಬಳಗ ನೆಲ್ಲಿಕಟ್ಟೆ ಮತ್ತು ಯಂಗ್ ಸ್ಟಾರ್ ಅಂಪಾರು ಇವರ ಪ್ರಾಯೋಜಕತ್ವದಲ್ಲಿ ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾನ ಸಿದ್ಧಾಪುರ ಇವರಿಂದ ಪೌರಾಣಿಕ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ಅಕ್ಟೋಬರ್ 11ರಂದು ಬೆಳಿಗ್ಗೆ 10ರಿಂದ 12.30ರ ತನಕ ಚಂಡಿಕಾ ಹೋಮ, ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ 12.30ರಿಂದ ಅನ್ನಸಂತರ್ಪಣೆ, ಸಂಜೆ 5 ಗಂಟೆಯಿಂದ 6.30ರ ತನಕ ಭಜನಾ ಕಾರ್ಯಕ್ರಮ, ಬಳಿಕ ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ 8 ಗಂಟೆಯಿಂದ ಶಿವಾನಿ ಮ್ಯೂಸಿಕಲ್ ಸಂಯೋಜನೆಯಲ್ಲಿ ಝಿ ಕನ್ನಡ ಸರಿಗಮಪ ಖ್ಯಾತಿಯ ಕಲಾವಿದರಿಂದ ಲೈವ್ ಆರ್ಕೆಸ್ಟ್ರಾ, ಝಿ ಕನ್ನಡ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಖ್ಯಾತಿಯ ಸುಧೀರ್ ಉಳ್ಳಾಲ್ ಹಾಗೂ ಡಿಕೆಡಿ ರನ್ನರ್ ಅಪ್ ಶಿಫಾಲಿ ಪೂಜಾರಿ ನೇತೃತ್ವದಲ್ಲಿ ಸಿಟಿಗೈಸ್ ಕುಡ್ಲ-ಕ್ಲೀನ್ ನೃತ್ಯ ತಂಡದವರಿಂದ ಡ್ಯಾನ್ಸ್ ಧಮಾಕ ನಡೆಯಲಿದೆ.

ಅಕ್ಟೋಬರ್ 12ರಂದು ಬೆಳಿಗ್ಗೆ 10ರಿಂದ 12.30ರ ತನಕ ದುರ್ಗಾಹೋಮ, ಮಹಾಪೂಜೆ, ಪ್ರಸಾದ ವಿತರಣೆ, 12.30ರಿಂದ ಅನ್ನಸಂತರ್ಪಣೆ, ಸಂಜೆ 5 ಗಂಟೆಯಿಂದ 6.30ರ ತನಕ ಭಜನಾ ಕಾರ್ಯಕ್ರಮ, ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ 8ರಿಂದ ಝಿ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಾಸ್ಯ ದಿಗ್ಗಜರಿಂದ ಹಾಸ್ಯಮಯ ನಗೆ ಔತಣ ಹಾಗೂ ಸಾಯಿಶಕ್ತಿ ಕಲಾ ಬಳಗ ಚಿಲಿಂಬಿ-ಮಂಗಳೂರು ಇವರಿಂದ ಕನ್ನಡ ಪೌರಾಣಿಕ ನಾಟಕ ‘ಬೆಳ್ಳಿಬೆಟ್ಟದ ಶಿವಶಕ್ತಿಗಳು’ ಪ್ರದರ್ಶನಗೊಳ್ಳಲಿದೆ.
ಅಕ್ಟೋಬರ್ 13 ಆದಿತ್ಯವಾರ ಬೆಳಿಗ್ಗೆ 11-30ರಿಂದ 12.30ರ ತನಕ ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ 12-30ರಿಂದ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 2.30ಕ್ಕೆ ವಿವಿಧ ಆಕರ್ಷಕ ವೇಷಭೂಷಣ, ಭಜನೆ ಕುಣಿತ, ಚಂಡೆ, ಗೊಂಬೆ ಕುಣಿತ, ಆಕರ್ಷಕ ಟ್ಯಾಬ್ಲೋ ಹಾಗೂ ಡಿ.ಜೆ ಸೌಂಡ್ಸ್‍ಗಳೊಂದಿಗೆ ವಿಸರ್ಜನಾ ಶೋಭಾಯಾತ್ರೆ ನಡೆಯಲಿದೆ.

ನೆಲ್ಲಿಕಟ್ಟೆ ದಸರಾ: ಹಿನ್ನೋಟ
ಕುಂದಾಪುರ ತಾಲೂಕು ಅಂಪಾರು ಗ್ರಾಮದ ನೆಲ್ಲಿಕಟ್ಟೆ ಗ್ರಾಮೀಣ ಪ್ರದೇಶದಲ್ಲಿ ಯುವಕರ ತಂಡ ಗುರು-ಹಿರಿಯರ ಮಾರ್ಗದರ್ಶನದೊಂದಿಗೆ ಸಾರ್ವಜನಿಕ ಶ್ರೀ ಶಾರದೋತ್ಸವ ನಡೆಸುವ ಕುರಿತು ನಿರ್ಣಯಿಸಿ, ವಿದ್ಯಾದೇಗುಲ ಜೈ ಭಾರತಿ ಶಾಲೆಯಲ್ಲಿ 2000ನೇ ಇಸವಿಯಲ್ಲಿ ಶಾರದಾ ಮಾತೆಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಯಿತು. ಆರಂಭದಿಂದಲೇ ಇಲ್ಲಿನ ಭಕ್ತಾಭಿಮಾನಿಗಳು ಶ್ರದ್ಧಾಪೂರ್ವಕವಾಗಿ ಶ್ರೀ ಮಾತೆಯನ್ನು ಆರಾಧಿಸಿಕೊಂಡು ಸುತ್ತಮುತ್ತಲ ಪ್ರದೇಶದಲ್ಲಿ ‘ನೆಲ್ಲಿಕಟ್ಟೆ ದಸರಾ’ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು. ಶಾರದೋತ್ಸವದ ದಶಮಾನೋತ್ಸವವು 2009ರಲ್ಲಿ ವಿಜೃಂಭಣೆಯಿಂದ ಜರುಗುವುದರೊಂದಿಗೆ ಇದರ ಸವಿನೆನಪಿಗಾಗಿ ಭವ್ಯ ಶಾರದಾ ಮಂದಿರ ಸ್ಥಾಪನೆಯಾಯಿತು. ಊರ- ಪರಊರ ಭಕ್ತಾಭಿಮಾನಿಗಳ ನೆರವಿನಿಂದ ಸಾಕಾರಗೊಂಡ ಶಾರದಾ ಮಂದಿರದಲ್ಲಿ ಪ್ರತೀ ವರ್ಷ ಶ್ರೀ ಶಾರದಾ ಮಹೋತ್ಸವವನ್ನು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿಜೃಂಭಣೆಯಿಂದ ನಡೆಸಿಕೊಂಡು ಬರಲಾಗುತ್ತಿದೆ.

2019ರಲ್ಲಿ ವಿಂಶತಿ ಸಂಭ್ರಮವನ್ನು ವೈಭವದಿಂದ ಆಚರಿಸುವುದರೊಂದಿಗೆ ಶ್ರೀ ದೇವಿಯ ಪ್ರೀತ್ಯರ್ಥವಾಗಿ ದಾನಿಗಳ ಸಹಕಾರದಿಂದ ಯಾಗಶಾಲೆಯನ್ನು ನಿರ್ಮಾಣ ಮಾಡಲಾಯಿತು. ಪ್ರಸಿದ್ಧ ಕ್ಷೇತ್ರಗಳಲ್ಲಿ ಇರುವಂತೆ ಇಲ್ಲಿ ಯಾಗಶಾಲೆ ರಚನೆಯಾಗಿರುವುದು ವಿಶೇಷ. ಪ್ರತೀ ವರ್ಷ ದೇವಿಯ ಸನ್ನಿಧಿಯಲ್ಲಿ ದುರ್ಗಾಹೋಮ, ದೀಪನಮಸ್ಕಾರ, ರಂಗಪೂಜೆ, ತುಲಾಭಾರ ಸೇವೆ, ಮಹಾಪೂಜೆ, ಅಕ್ಷರಭ್ಯಾಸ ಮುಂತಾದ ಸೇವೆಗಳನ್ನು ಭಕ್ತಿಯಿಂದ ಸಮರ್ಪಿಸಿ ಕೃತಾರ್ಥಗೊಂಡಿರುತ್ತಾರೆ. ಈಗಾಗಲೇ ಅನೇಕ ಪೂಜಾ ಸಲಕರಣೆಗಳು ಅಲ್ಲದೇ ಬೆಳ್ಳಿ, ಚಿನ್ನದ ಆಭರಣಗಳು ಮುಂತಾದ ಅನೇಕ ವಸ್ತುಗಳು ಭಕ್ತಾಭಿಮಾನಿಗಳಿಂದ ಹರಕೆ ರೂಪದಲ್ಲಿ ಸಂದಾಯವಾಗಿರುತ್ತದೆ. ಪ್ರತೀ ವರ್ಷದ ಆಚರಣೆಯ ಸಂದರ್ಭದಲ್ಲಿ ಪ್ರತೀ ದಿನವೂ ಅನ್ನದಾನದ ಸೇವೆ ನಡೆಯುತ್ತಿರುವುದು ಇಲ್ಲಿನ ವಿಶೇಷ. ಇದಕ್ಕಾಗಿ ವಿಂಶತಿ ಸಂಭ್ರಮದಲ್ಲಿ ಸುಸಜ್ಜಿತ ಪಾಕಶಾಲೆ ರಚನೆಯಾಗಿರುವುದು ಈ ಸ್ಥಳದ ಮಹಿಮೆಯನ್ನು ಬಿಂಬಿಸುತ್ತಿದೆ.

ಹೀಗೆ ಉಡುಪಿ ಜಿಲ್ಲೆಯಲ್ಲಿಯೇ ಅತ್ಯಂತ ವ್ಯವಸ್ಥಿತವಾಗಿ ಶೃದ್ಧಾ ಭಕ್ತಿಯೊಂದಿಗೆ ಆಚರಿಸುವ ದಸರಾ ಮಹೋತ್ಸವವಾಗಿ ಪರಿಣಮಿಸಿದೆ. ಇದಕ್ಕೆ ಶ್ರೀ ಶಾರದಾ ಮಾತೆಯ ಅನುಗ್ರಹ, ಭಕ್ತಾಭಿಮಾನಿಗಳ ಪೆÇ್ರೀತ್ಸಾಹ, ಸಮಿತಿಯವರ ಅವಿರತ ಶ್ರಮವು ಸಾಕ್ಷಿಯಾಗಿದೆ.
ಇದೀಗ 2024ರಲ್ಲಿ ಶ್ರೀ ಶಾರದೋತ್ಸವದ 25ನೇ ವರ್ಷದ ‘ರಜತ ಮಹೋತ್ಸವ’ ಆಚರಣೆಯ ಸಂಭ್ರಮದಲ್ಲಿದೆ. ಈಗಾಗಲೇ ಪೂರ್ವಭಾವಿಯಾಗಿ ಸಭೆ ನಡೆಸಿ, ಕಾರ್ಯಕ್ರಮಗಳ ರೂಪು ರೇಷೆಗಳನ್ನು ಭಕ್ತಾಭಿಮಾನಿಗಳ ಸಹಕಾರದಿಂದ ಸಾಕಾರಗೊಳಿಸಲು ಸಮಿತಿಯವರು ಮುಂದಡಿ ಇಟ್ಟಿದ್ದಾರೆ.

ಭರದಿಂದ ಸಾಗುತ್ತಿದೆ ಸಿದ್ದತೆ:
ರಜತ ಮಹೋತ್ಸವ ಸಮಿತಿ ಅಧ್ಯಕ್ಷರಾದ ಪ್ರದೀಪ ಕುಮಾರ್ ಶೆಟ್ಟಿ ಗುಡಿಬೆಟ್ಟು, ಕಾರ್ಯದರ್ಶಿ ನವೀನ್ ಕುಮಾರ್ ಶೆಟ್ಟಿ ಶಾನ್ಕಟ್ಟ್, ಜೈಭಾರತಿ ಶಾಲಾ ಸಾರ್ವಜನಿಕ ಶಾರದಾ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಶಂಕರ ಶೇಟ್, ಕಾರ್ಯದರ್ಶಿ ಸುಬ್ರಹ್ಮಣ್ಯ ಪಂಗಡಗಾರ ಹಾಗೂ ಸರ್ವ ಸದಸ್ಯರು, ಸಂಚಾಲಕರು, ಮುಖ್ಯೋಪಾಧ್ಯಾಯರು, ಸಹಶಿಕ್ಷಕರು, ಶಾಲಾ ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು ಹಾಗೂ ಅಂಪಾರು, ನೆಲ್ಲಿಕಟ್ಟೆ ಗ್ರಾಮಸ್ಥರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!