Saturday, October 12, 2024

ವಂಡ್ಸೆ ಸಹಕಾರಿ ವ್ಯವಸಾಯಿಕ ಸಂಘ: 1.33 ಕೋಟಿ ಲಾಭ | ಶೇ.16 ಡಿವಿಡೆಂಡ್ ಘೋಷಣೆ

ವಂಡ್ಸೆ, ಸೆ.21: ವಂಡ್ಸೆ ಸಹಕಾರಿ ವ್ಯವಸಾಯಿಕ ಸಂಘ 66 ವರ್ಷಗಳ ಸಾರ್ಥಕ ಸೇವೆಯನ್ನು ನೀಡಿ 67ನೇ ವರ್ಷದಲ್ಲಿ ಮುನ್ನೆಡೆಯುತ್ತಿದೆ. ವರದಿ ವರ್ಷದಲ್ಲಿ ರೂ.49,21,60,223.52 ಠೇವಣಾತಿಯನ್ನು ಸಂಗ್ರಹಿಸಿದೆ. ವರ್ಷಾಂತ್ಯಕ್ಕೆ ರೂ.1,33,96,790 ನಿವ್ವಳ ಲಾಭ ಗಳಿಸಿದೆ ಎಂದು ವಂಡ್ಸೆ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷರಾದ ಎನ್.ಮಂಜಯ್ಯ ಶೆಟ್ಟಿ ಸಬ್ಲಾಡಿ ಹೇಳಿದರು.
ಸೆ.21ರಂದು ವಂಡ್ಸೆ ಶ್ರೀಯಾ ಕನ್ವೆನ್‍ಷನ್ ಹಾಲ್‍ನಲ್ಲಿ ನಡೆದ ವಂಡ್ಸೆ ಸಹಕಾರಿ ವ್ಯವಸಾಯಿಕ ಸಂಘದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಅವರು ಶೇ.16% ಘೋಷಣೆ ಮಾಡಿದರು.
ಸಂಘವು ವರದಿ ವರ್ಷದಲ್ಲಿ 5681 ‘ಅ’ ತರಗತಿ ಸದಸ್ಯರು, 5,567 ‘ಕ’ ತರಗತಿ ಸದಸ್ಯರಿಂದ ಒಟ್ಟು ರೂ 3,16,10,335 ಪಾಲು ಹಣವನ್ನು ಹೊಂದಿದೆ. ವಷಾಂತ್ಯಕ್ಕೆ ಸಂಘವು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಲ್ಲಿ ಸದಸ್ಯರಿಗೆ ಅನುಕೂಲವಾಗುವಂತೆ 42,52,13,802 ಸಾಲವನ್ನು ಪಡೆಯಲಾಗಿದೆ. ಸದಸ್ಯರಿಗೆ ರೂ.81,45,37,498 ಸಾಲ ನೀಡಲಾಗಿದೆ. ವರ್ಷಾಂತ್ಯಕ್ಕೆ ರೂ.87,03,53,578 ರಷ್ಟು ಸದಸ್ಯರಿಂದ ಬರತಕ್ಕ ಸಾಲವಾಗಿದೆ ಸರಕಾರ ರೂಪಿಸಿದ ಕಿಸಾನ್ ಕ್ರೆಡಿಟ್ ಸಾಲ ಯೋಜನೆಯಲ್ಲಿ ರೈತ ಸದಸ್ಯರಿಗೆ 38,78,57,000 ಸಾಲ ನೀಡಲಾಗಿದೆ ಎಂದರು.
ಸಂಘದ ಸೇವೆ ಮತ್ತು ಪೂರೈಕೆ ವಿಭಾಗದ ಅಂಗವಾಗಿ ಆರು ನ್ಯಾಯಬೆಲೆ ಅಂಗಡಿಗಳನ್ನು ಹೊಂದಿ ಪಡಿತರ ಸಾಮಗ್ರಿ ಮತ್ತು ರೈತ ಸದಸ್ಯರಿಗೆ ಅನುಕೂಲವಾಗುವಂತೆ ರಸಗೊಬ್ಬರ ವಿತರಿಸಲಾಗುತ್ತಿದೆ. ಸಂಘವು ಕೆರಾಡಿ, ಇಡೂರು-ಕುಂಜ್ಞಾಡಿ, ಚಿತ್ತೂರು ಇಲ್ಲಿ ಪೂರ್ಣಪ್ರಮಾಣದ ಶಾಖೆಗಳು, ಸೆ.16ರಂದು ಹೊಸೂರಿನಲ್ಲಿ ಹೊಸ ಶಾಖೆ, ಕಟ್ಟಡ ಉದ್ಘಾಟನೆಗೊಂಡಿದೆ ಎಂದರು.
ವರದಿ ವರ್ಷದ ಅಂತ್ಯಕ್ಕೆ ಸಂಘದಲ್ಲಿ ಇರುವ ಸ್ಥಿರಾಸ್ತಿ ಮತ್ತು ಚರಾಸ್ತಿಗಳ ಒಟ್ಟು ಮೌಲ್ಯ ರೂ.1,15,52,496.22 ಆಗಿದೆ. ಸಂಘವು ವರ್ಷಾಂತ್ಯಕ್ಕೆ ರೂ.19,60,95,640 ಬಂಡವಾಳ ಮತ್ತು ವಿನಿಯೋಗಗಳನ್ನು ಹೊಂದಿದೆ. ಎ ವರ್ಗದ ಆಡಿಟ್ ವರ್ಗಿಕರಣಗೊಂಡಿದೆ. ನಮ್ಮ ಸಂಘವು ರೈತಾಪಿಗಳಿಗೆ ಸರಕಾರದ ಶೇ.3 ರ ಬಡ್ಡಿದರದ ಸಾಲವನ್ನು ಜಿಲ್ಲೆಯಲ್ಲಿಯೇ ಗಣನೀಯ ಸಂಖ್ಯೆಯ ರೈತರಿಗೆ ಒದಗಿಸಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಜೂನ್ 30ರಂದು ನಿವೃತ್ತರಾದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಅರುಣ್ ಕುಮಾರ್ ಎಸ್.ವಿ ಅವರನ್ನು ಸನ್ಮಾನಿಸಲಾಯಿತು. ಸನ್ಮಾನಕ್ಕೆ ಪ್ರತ್ಯುತ್ತರಿಸಿ ಮಾತನಾಡಿದ ಅರುಣ್ ಕುಮಾರ್ ಅವರು ವಂಡ್ಸೆ ಸಹಕಾರಿ ವ್ಯವಸಾಯಿಕ ಸಂಘ ಬಲಿಷ್ಠವಾಗಿ ಬೆಳೆದಿದೆ. ಆರ್ಥಿಕ ವ್ಯವಹಾರಗಳು, ಸದಸ್ಯರಿಗೆ ಒದಗಿಸುವ ಸೌಲಭ್ಯಗಳಿಂದ ಸಂಸ್ಥೆ ಸಹಕಾರ ಕ್ಷೇತ್ರದಲ್ಲಿ ಗಮನ ಸಳೆದಿದೆ. ಇನ್ನೂ ಹೆಚ್ಚಿನ ಸಾಧನೆ ಮಾಡುವಂತಾಗಲಿ ಎಂದರು.
ಸಂಘದ ಕಾರ್ಯಕ್ಷೇತ್ರ ವ್ಯಾಪ್ತಿಯಲ್ಲಿ ವೈದ್ಯಕೀಯ ಶಿಕ್ಷಣ, ಇಂಜಿನಿಯರಿಂಗ್ ಹಾಗೂ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಿ ಅಭಿನಂದಿಸಲಾಯಿತು. ಅನಾರೋಗ್ಯದಿಂದ ಬಳಲುತ್ತಿರುವವರಿಗೆ ವೈದ್ಯಕೀಯ ನೆರವು ನೀಡಲಾಯಿತು.
ಸಂಘದ ಉಪಾಧ್ಯಕ್ಷರಾದ ಜಗನ್ನಾಥ ಶೆಟ್ಟಿ ಹೊಸೂರು, ನಿರ್ದೇಶಕರಾದ ಐ.ಗೋವರ್ಧನ ಶೆಟ್ಟಿ ಇಡೂರು-ಕುಂಜ್ಞಾಡಿ, ಸಂಜೀವ ಪೂಜಾರಿ ವಂಡ್ಸೆ, ಎ.ಜಯರಾಮ ಶೆಟ್ಟಿ ವಂಡ್ಸೆ, ರಾಮಚಂದ್ರ ಮಂಜ ಚಿತ್ತೂರು, ಕೃಷ್ಣಯ್ಯ ಆಚಾರ್ ಚಿತ್ತೂರು, ಶ್ರೀಮತಿ ನಾಗರತ್ನ ಶೆಟ್ಟಿ ಹೊಸೂರು, ಶ್ರೀಮತಿ ಕಸ್ತೂರಿ ಎಸ್.ಶೆಟ್ಟಿ ಚಿತ್ತೂರು, ಸುನೀಲ ನಾಯ್ಕ ಕೆರಾಡಿ, ಪದನಿಮಿತ್ತ ನಿರ್ದೇಶಕರಾದ ಶೇಖರ ಶೆಟ್ಟಿ ಬೆಳ್ಳಾಲ, ಶಿವಪ್ಪ ಶೆಟ್ಟಿ ಜನ್ನಾಲು, ವಲಯ ಮೇಲ್ವಿಚಾರಕ ಚಂದ್ರಶೇಖರ ಶೆಟ್ಟಿ ಉಪಸ್ಥಿತರಿದ್ದರು.
ಸಿಬ್ಬಂದಿಗಳಾದ ಶ್ರುತಿ ಮತ್ತು ಜ್ಯೋತಿ ಪ್ರಾರ್ಥಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೀತಾರಾಮ ಜಿ.ಪೂಜಾರಿ ವಾರ್ಷಿಕ ವರದಿ ಮಂಡಿಸಿದರು. ಸಂಘದ ಅಧ್ಯಕ್ಷರಾದ ಎನ್.ಮಂಜಯ್ಯ ಶೆಟ್ಟಿ ಸಬ್ಲಾಡಿ ಸ್ವಾಗತಿಸಿದರು. ನಿರ್ದೇಶಕ ಎ.ಜಯರಾಮ ಶೆಟ್ಟಿ ವಂಡ್ಸೆ ವಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!