Sunday, October 13, 2024

ಮೂನ್ ಮಿಷನ್ “ಚಂದ್ರಯಾನ-4″ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ !

ಜನಪ್ರತಿನಿಧಿ (ನವದೆಹಲಿ) : ಭಾರತೀಯ ಗಗನಯಾತ್ರಿಗಳನ್ನು ಚಂದ್ರನ ಮೇಲೆ ಇಳಿಸಿ, ಮತ್ತೆ ಅವರನ್ನು ಸುರಕ್ಷಿತವಾಗಿ ಭೂಮಿಗೆ ಮರಳಿ ಕರೆತರಲು ಅಗತ್ಯವಾದ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಹಾಗೂ ಪ್ರದರ್ಶಿಸಲು ಮೂನ್ ಮಿಷನ್ “ಚಂದ್ರಯಾನ-4″ಗೆ ಕೇಂದ್ರ ಸಚಿವ ಸಂಪುಟ ಇಂದು(ಬುಧವಾರ) ಅನುಮೋದಿಸಿದೆ.

ಚಂದ್ರಯಾನ-4 ಮಿಷನ್ ಭಾರತೀಯ ಗಗನಯಾತ್ರಿಗಳನ್ನು ಚಂದ್ರನ ಮೇಲೆ ಇಳಿಸಲು(2040 ರ ವೇಳೆಗೆ ಯೋಜಿಸಲಾಗಿದೆ) ಮತ್ತು ಸುರಕ್ಷಿತವಾಗಿ ಭೂಮಿಗೆ ಕರೆತರಲು ಮೂಲಭೂತ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿರುವುದರ ಬಗ್ಗೆ ರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

“ಡಾಕಿಂಗ್ / ಅನ್‌ಡಾಕಿಂಗ್, ಲ್ಯಾಂಡಿಂಗ್ ಒಳಗೊಂಡಂತೆ ಸುರಕ್ಷಿತವಾಗಿ ಭೂಮಿಗೆ ಮರಳುವಂತೆ ಹಾಗೂ ಚಂದ್ರನ ಮಾದರಿ ಸಂಗ್ರಹಣೆ ಮತ್ತು ಅಲ್ಲಿನ ವಿಶ್ಲೇಷಣೆಯನ್ನು ಪಡೆಯಲು ಅಗತ್ಯವಿರುವ ಪ್ರಮುಖ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲಾಗುವುದು” ಮತ್ತು ತಂತ್ರಜ್ಞಾನ ಪ್ರದರ್ಶನ ಮಿಷನ್ “ಚಂದ್ರಯಾನ-4” ಗೆ ಒಟ್ಟು 2,104.06 ಕೋಟಿ ರೂಪಾಯಿ ಅವಶ್ಯಕತೆಯಿದೆ ಎಂದೂ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಚಂದ್ರಯಾನ- 3 ಯೋಜನೆಯ ಐತಿಹಾಸಿಕ ಯಶಸ್ಸಿನ ಸ್ಫೂರ್ತಿಯೊಂದಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ, ಮುಂದಿನ ಚಂದ್ರಯಾನ – 4 ಯೋಜನೆಗೆ ಸಜ್ಜಾಗಿದ್ದು, ಚಂದ್ರಯಾನ -4 ಯೋಜನೆಯಡಿ ನೌಕೆಯನ್ನು ಚಂದ್ರನ ಅಂಗಳದಲ್ಲಿ ಇಳಿಸುವುದಷ್ಟೇ ಅಲ್ಲದೇ, ಚಂದ್ರನಿಂದ ಕಲ್ಲು ಮತ್ತು ಮಣ್ಣಿನ ಮಾದರಿಗಳನ್ನು ಭೂಮಿಗೆ ತರುವ ಉದ್ದೇಶ ಹೊಂದಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!