Sunday, October 13, 2024

ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ 3.28 ಕೋಟಿ ಲಾಭ, ಶೇಕಡಾ 25 ಡಿವಿಡೆಂಡ್

ಸಿದ್ಧಾಪುರ: ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಸಂಘ (ನಿ)., ಇದರ 2023-24ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯು ಸಂಘದ ಅಧ್ಯಕ್ಷರಾದ  ಬಿ. ಪ್ರದೀಪ ಯಡಿಯಾಳರ ಅಧ್ಯಕ್ಷತೆಯಲ್ಲಿ  ಸಂಘದ ಕೇಂದ್ರ ಕಛೇರಿಯಲ್ಲಿ ಜರುಗಿತು.

ಸಂಘವು 2023-24ನೇ ಸಾಲಿನಲ್ಲಿ ರೂ.977 ಕೋಟಿ ವ್ಯವಹಾರ ನಡೆಸಿದ್ದು, ರೂ. 3.28 ಕೋಟಿ ಲಾಭ ಗಳಿಸಿದ್ದು, ವರ್ಷಾಂತ್ಯಕ್ಕೆ ರೂ.2.50 ಕೋಟಿ ಪಾಲು ಬಂಡವಾಳ, ರೂ.164.09 ಕೋಟಿ ಠೇವಣಾತಿ, ರೂ.173.05 ಕೋಟಿ ಸದಸ್ಯರ ಸಾಲ ಹೊರಬಾಕಿ ಇದ್ದು, ದುಡಿಯುವ ಬಂಡವಾಳ 241 ಕೋಟಿ ಇರುತ್ತದೆ. ಶೇಕಡಾ 97.47 ರಷ್ಟು ಸಾಲ ಮರುಪಾವತಿಯಾಗಿರುತ್ತದೆ. 2023-24ನೇ ಸಾಲಿಗೆ ಸದಸ್ಯರ ಪಾಲು ಬಂಡವಾಳದ ಮೇಲೆ ಶೆ. 25 ಡಿವಿಡೆಂಡ್ ಘೋಷಣೆ ಮಾಡಲಾಯಿತು. ಸಂಘವು ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ಸದಸ್ಯರಿಗೆ ಶೆ. 25 ಡಿವಿಡೆಂಡ್ ನೀಡುತ್ತಾ ಬಂದಿದೆ.

ವರದಿ ವರ್ಷದಲ್ಲಿ ಮೃತರಾದ ಸದಸ್ಯರಿಗೆ ಶೃದ್ದಾಂಜಲಿ ಅರ್ಪಿಸಲಾಯಿತು. ಸಂಘದ ಜನರಲ್ ಮ್ಯಾನೇಜರ್ ಬಿ. ಮಂಜುನಾಥ ನಾಯ್ಕ 2023-24ನೇ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿದರು. ಸಭೆಯಲ್ಲಿ ಸಂಘದ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಅಧ್ಯಕ್ಷರು ಹಾಗೂ ಜನರಲ್ ಮ್ಯಾನೇಜರ್ ಸೂಕ್ತ ಸಮಜಾಯಿಸಿಕೆ ಹಾಗೂ ಮಾಹಿತಿ ನೀಡಿದರು.

ಸಹಕಾರ ಇಲಾಖೆಯಲ್ಲಿ ಸುದೀರ್ಘ 36 ವರ್ಷಗಳ ಕಾಲ ಸೇವೆ ಸಲ್ಲಿಸಿ, ಕುಂದಾಪುರ ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾಗಿ ನಿವೃತ್ತರಾದ ಶ್ರೀ ಅರುಣ್ ಕುಮಾರ್ ಎಸ್. ವಿ ಇವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀಯುತರು ಸಂಸ್ಥೆ ಬೆಳೆದು ಬಂದ ದಾರಿಯ ಕುರಿತಾಗಿ ಮೆಲುಕು ಹಾಕಿದರು. ಸಿಬ್ಬಂದಿಗಳ ಕಾರ್ಯ ಕ್ಷಮತೆಯ ಬಗ್ಗೆ ಕಿವಿಮಾತುಗಳನ್ನು ಹೇಳಿದರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಹಿರಿಯ ಯಕ್ಷಗಾನ ಕಲಾವಿದರಾದ ಆರ್ಗೋಡು ಮೋಹನದಾಸ ಶೆಣೈ ಹಾಗೂ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಹಿರಿಯ ಯಕ್ಷಗಾನ ಕಲಾವಿದರಾದ ಆಜ್ರಿ ಗೋಪಾಲ ಗಾಣಿಗ ಇವರನ್ನು ಸನ್ಮಾನಿಸಲಾಯಿತು. ವೈದ್ಯಕೀಯ ಶಿಕ್ಷಣದ ಎಂ.ಡಿ ನೀಟ್ ಪರಿಕ್ಷೆಯಲ್ಲಿ ರ್ಯಾಂಕ್ ಗಳಿಸಿದ ಸಂಘದ ಸದಸ್ಯರ ಮಕ್ಕಳಾದ ಶ್ರೀ ಅರ್ಜುನ್ ಚಾತ್ರ, ಶ್ರೀ ಧ್ರುವ ಯಡಿಯಾಳ ಹಾಗೂ ಸಿ.ಎ ಪರಿಕ್ಷೆಯಲ್ಲಿ ಉತ್ತೀರ್ಣರಾದ ಶ್ರೀ ಶರಣ್ ಕುಮಾರ್ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. 2023-24ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿ ಪರಿಕ್ಷೆಯಲ್ಲಿ ಶೇ. 85 ಕ್ಕಿಂತ ಮೇಲ್ಪಟ್ಟು ಅಂಕ ಗಳಿಸಿದ ಸಂಘದ ಸದಸ್ಯರ 75 ಮಕ್ಕಳಿಗೆ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು.

ಇಂಡಿಯನ್ ರೆಡ್‍ಕ್ರಾಸ್ ಸೊಸೈಟಿ ಹಾಗೂ ರಕ್ತನಿಧಿ ಕೇಂದ್ರ, ಕುಂದಾಪುರ ಇವರ ಸಹಕಾರದೊಂದಿಗೆ ಸಂಘದ ಸದಸ್ಯರಿಗೆ ‘ರಕ್ತದಾನ ಪ್ರೋತ್ಸಾಹಕ ಯೋಜನೆ’ಯಡಿ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು. ಶಿಬಿರದಲ್ಲಿ ಸುಮಾರು 125ಕ್ಕೂ ಹೆಚ್ಚು ಸದಸ್ಯರು ರಕ್ತದಾನ ಮಾಡಿದರು.

ಸಂಘವು ಲಾಭ ಗಳಿಸಿ ಪ್ರಗತಿ ಸಾಧಿಸಿರುವುದಕ್ಕೆ ಕಾರಣೀಕರ್ತರಾದ ಸದಸ್ಯ ಬಾಂಧವರಿಗೆ, ಗ್ರಾಹಕರಿಗೆ, ನಿರ್ದೇಶಕರಿಗೆ, ಸಿಬ್ಬಂದಿ ವರ್ಗದವರಿಗೆ, ಜಿಲ್ಲಾ ಬ್ಯಾಂಕಿನ ಆಡಳಿತಾಧಿಕಾರಿಗಳಿಗೆ, ಸಹಕಾರ ಇಲಾಖೆಗೆ ಅಧ್ಯಕ್ಷರು ಕೃತಜ್ಞತೆ ಸಲ್ಲಿಸಿ ಮುಂದಿನ ದಿನಗಳಲ್ಲಿ ಸಂಘವು ಇನ್ನೂ ಹೆಚ್ಚಿನ ಪ್ರಗತಿ ಸಾಧಿಸುವಲ್ಲಿ ಸಹಕರಿಸುವಂತೆ ಮನವಿ ಮಾಡಿದರು.

ಸಂಘದ ಉಪಾಧ್ಯಕ್ಷರಾದ ಸುದೀಪ ಶೆಟ್ಟಿ, ನಿರ್ದೇಶಕರಾದ ಎ. ಮಾಧವ ಶೆಣೈ, ಎಸ್. ಶಂಕರನಾರಾಯಣ ಯಡಿಯಾಳ, ಎಂ. ದೇವದಾಸ ಶೆಟ್ಟಿ, ಬಿ. ಮಂಜುನಾಥ ರಾವ್, ಎಂ.ಎಸ್ ವಿಷ್ಣುಮೂರ್ತಿ, ಶ್ರೀಮತಿ ರೋಹಿಣಿ, ಶ್ರೀಮತಿ ಅನಿತಾ, ನರಸಿಂಹ ಪೂಜಾರಿ, ಜಯಂತ ಶೆಟ್ಟಿ, ರವೀಂದ್ರ ಬೆಳಾರಿ, ಗುರುರಾಜ ನಾಯ್ಕ ಮತ್ತು ದ.ಕ.ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ವಲಯ ಮೇಲ್ವಿಚಾರಕರಾದ ಚಂದ್ರಶೇಖರ ಶೆಟ್ಟಿ ಉಪಸ್ಥಿತರಿದ್ದರು. ಕುಮಾರಿ ಮಮತಾ, ಕಾವ್ಯ, ಬ್ರಾಹ್ಮೀ ಪ್ರಾರ್ಥಿಸಿದರು, ಚೆನ್ನ ಪೂಜಾರಿ ಸ್ವಾಗತಿಸಿ, ಕೆ. ಸತೀಶ ಭಟ್ಟ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು. ಕೆ. ಗಿರೀಶ ಕಾರ್ಯಕ್ರಮ ನಿರೂಪಿಸಿದರು, ಕೆ. ಸತೀಶ ಭಟ್ಟ ವಂದಿಸಿದರು.

 

 

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!