Saturday, October 12, 2024

ಹಿರಿಯ ಕಮ್ಯುನಿಸ್ಟ್‌ ನಾಯಕ ಸೀತಾರಾಮ್‌ ಯೆಚೂರಿ ನಿಧನ !

ಜನಪ್ರತಿನಿಧಿ (ನವ ದೆಹಲಿ) : ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಇಂದು(ಗುರುವಾರ) ಅಸ್ತಂಗತರಾಗಿದ್ದಾರೆ.

ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು ಈ ಹಿನ್ನೆಲೆಯಲ್ಲಿ ದೆಹಲಿಯ ಏಮ್ಸ್‌ನಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತೀವ್ರ ಉಸಿರಾಟದ ಸೋಂಕಿನಿಂದ ಬಳಲುತ್ತಿರುವ ಅವರಿಗೆ ಆಮ್ಲಜನಕ ಕೊರತೆಯಿತ್ತು. ತೀರ್ವ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ನಿಧರಾಗಿದ್ದಾರೆ.

1952ರಲ್ಲಿ ಚೆನ್ನೈನಲ್ಲಿ ಸರ್ವೇಶ್ವರ ಸೋಮಾಯುಜಲಾ ಯೆಚೂರಿ ಮತ್ತು ಕಲ್ಪಕಮ್‌ ಯೆಚೂರಿ ದಂಪತಿಯ ಪುತ್ರನಾಗಿ ಜನಿಸಿದ್ದರು. ಹೈದರಾಬಾದ್‌ ನಲ್ಲಿ ಬೆಳೆದ ಅವರು ಶಾಲಾ ಶಿಕ್ಷಣ ಮುಗಿಸಿದ ಅವರು 1969ರಲ್ಲಿ ತೆಲಂಗಾಣ ಪ್ರತ್ಯೇಕತಾ ಹೋರಾಟ ಆರಂಭವಾದ ಬಳಿಕ ಹೊಸದಿಲ್ಲಿಗೆ ತೆರಳಿದರು. ಅರ್ಥಶಾಸ್ತ್ರದಲ್ಲಿ ಬಿಎ ಪದವಿ ಪಡೆದ ಯೆಚೂರಿ, ಬಳಿಕ ಜೆಎನ್‌ ಯು ನಲ್ಲಿ ಎಂ.ಎ ಪದವಿ ಪಡೆದರು. ನಂತರದ ದಿನಗಳಲ್ಲಿ ಅಲ್ಲೇ ಪಿಎಚ್‌ಡಿ ಆರಂಭಿಸಿದರಾದರೂ ತುರ್ತು ಪರಿಸ್ಥಿತಿಯ ಕಾರಣದಿಂದ ಪೂರ್ಣಗೊಳಿಸಲಾಗಲಿಲ್ಲ.

1970 ರ ದಶಕದಲ್ಲಿ, ಯೆಚೂರಿ ಅವರು ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷರಾಗಿ ಮೂರು ಬಾರಿ ಸೇವೆ ಸಲ್ಲಿಸಿದರು, ಎಸ್‌ಎಫ್‌ಐ ಪ್ರತಿನಿಧಿಸಿದರು. 1984 ರ ಹೊತ್ತಿಗೆ, ಅವರು ಸಿಪಿಎಂನ ಕೇಂದ್ರ ಸಮಿತಿಗೆ ಆಯ್ಕೆಯಾಗಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!