Saturday, September 21, 2024

ಫೇಸ್‌ ಬುಕ್‌ ಪೇಜ್‌ ನಲ್ಲಿ ಹಿಂದೂ ದೇವರುಗಳ ಅವಹೇಳನ : ಉರ್ವ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲು !

ಜನಪ್ರತಿನಿಧಿ (ಮಂಗಳೂರು) :ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನ ‘ಫ್ಯಾಕ್ಟ್ ವಿಡ್‌’ (factvid@gmail.com) ಪೇಜ್‌ ನಲ್ಲಿ ಹಿಂದೂ ಧಾರ್ಮಿಕ ನಂಬಿಕೆಯನ್ನು ಅವಹೇಳನ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಉರ್ವ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಪೇಜ್‌ ನಲ್ಲಿ ಹಿಂದೂ ದೇವತೆಗಳನ್ನು ಅವಹೇಳನ ಮಾಡುವಂತಹ ಚಿತ್ರಗಳನ್ನು ಪ್ರಕಟಿಸಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿ ಉರ್ವದ ದಾಮೋದರ ಪ್ರಭು ಕಂಪೌಂಡ್ ನಿವಾಸಿಯಾಗಿರುವ ವಕೀಲ ತೀರ್ಥೇಶ್ ಪಿ. ದೂರು ನೀಡಿದ್ದು, ಸದ್ಯ ಎಫ್‌ಐಆರ್‌ ದಾಖಲಾಗಿದೆ ಎಂದು ತಿಳಿದು ಬಂದಿದೆ.

‘ಫ್ಯಾಕ್ಟ್ ವಿಡ್’ ಫೇಸ್‌ ಬುಕ್‌ ಪೇಜ್‌ ನಲ್ಲಿ ಕೃತಕ ಬುದ್ಧಿಮತ್ತೆ(ಎಐ) ತಂತ್ರಜ್ಞಾನ ಬಳಸಿ ಶಿವ, ಕೃಷ್ಣ, ರಾಮ, ಗಣೇಶ ಮೊದಲಾದ ಹಿಂದೂ ದೇವರ ಚಿತ್ರಗಳನ್ನು ಮಹಿಳೆಯರ ಜೊತೆ ವರ್ತಿಸಿರುವಂತೆ, ಓಡಿಸುತ್ತಿರುವಂತೆ, ಕುಸ್ತಿ ಆಡಿಸುತ್ತಿರುವಂತೆ ವಿವಿಧ ಭಂಗಿಗಳಲ್ಲಿ ಅಶ್ಲೀಲವಾಗಿ ತೋರಿಸಲಾಗಿತ್ತು. ಅದಕ್ಕೆ ಹಿಂದೂಯೇತರರು ಅಶ್ಲೀಲವಾಗಿ ಕಮೆಂಟ್ ಹಾಕಿ ಹಿಂದೂಗಳ ಭಾವನೆಯನ್ನು ನೋಯಿಸಿದ್ದರು.’ ಎಂದು ದೂರುದಾರರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕೋಮುಸೂಕ್ಷ್ಮ ಪ್ರದೇಶವಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಗಲಭೆ ಸೃಷ್ಟಿಸಿ, ಸಾಮರಸ್ಯಕ್ಕೆ ಧಕ್ಕೆ ತರುವ ಪ್ರಯತ್ನವನ್ನು ಈ ಫೇಸ್‌ಬುಕ್ ಪೇಜ್‌ ನಲ್ಲಿ ಹಿಂದೂ ದೇವರನ್ನು ವಿಡಂಬನೆ ಮಾಡಿ ಮಹಿಳೆಯರನ್ನು ಅಶ್ಲೀಲವಾಗಿ ಚಿತ್ರಿಸುವಂತಹ ಕೆಲಸ ನಿರಂತರವಾಗಿ ಈ ಫೇಸ್‌ ಬುಕ್‌ ಪೇಜ್‌ ನಲ್ಲಿ ಮಾಡಲಾಗುತ್ತಿದೆ. ‘ಫ್ಯಾಕ್ಟ್ ವಿಡ್’ ಪೇಜ್‌ ಅನ್ನು ನಿರ್ವಹಿಸುವ ಅಡ್ಮಿನ್‌ ವಿರುದ್ಧ ಹಾಗೂ ಈ ಪೇಜ್‌ ನಲ್ಲಿ ಹಿಂದೂ ಧರ್ಮದವರ ಭಾವನೆಗೆ ಧಕ್ಕೆ ತರುವ ರೀತಿ ಕಮೆಂಟ್ ಹಾಕಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ತೀರ್ಥೇಶ್ ಅವರು ದೂರಿನಲ್ಲಿ ಒತ್ತಾಯಿಸಿದ್ದಾರೆ’ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.

ಈ ಸಂಬಂಧಿಸಿದಂತೆ ಉರ್ವ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 299 (ಉದ್ದೇಶ ಪೂರ್ವಕವಾಗಿ ಧಾರ್ಮಿಕ ಭಾವನೆ ಕೆರಳಿಸುವುದು), ಸೆಕ್ಷನ್ 192 (ದೊಂಬಿ, ಗಲಭೆ ಎಬ್ಬಿಸಲು ಪ್ರಚೋದನೆ ನೀಡುವುದು) ಹಾಗೂ ಸೆಕ್ಷನ್ 353 (ಬೇರೆ ಬೇರೆ ಕೋಮುಗಳ ನಡುವೆ ದ್ವೇಷ ಹುಟ್ಟಿಸಲು ಸುಳ್ಳು ಮಾಹಿತಿ ಹಂಚಿಕೊಳ್ಳುವುದು) ಹಾಗೂ 2008ರ ಮಾಹಿತಿ ತಂತ್ರಜ್ಞಾನ ಕಾಯ್ದೆ ಯ ಸೆಕ್ಷನ್‌ 67ರ (ವಿದ್ಯನ್ಮಾನ ಮಾಧ್ಯಮಗಳಲ್ಲಿ ಅಶ್ಲೀಲ ಚಿತ್ರಗಳನ್ನು ಹಂಚಿಕೊಳ್ಳುವುದು) ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!