Monday, September 9, 2024

ಹವ್ಯಾಸಿ ಯಕ್ಷಗಾನ ಕಲಾವಿದರು ಇವತ್ತಿನ ಅವಶ್ಯಕತೆ-ಆನಂದ್ ಸಿ ಕುಂದರ್ | ‘ಸೌರಭ ಸಪ್ತಮಿ’ ಸಮಾರೋಪ

ಸಾಲಿಗ್ರಾಮ: ಅಟ್ಟಳಿಗೆ ಆಟ, ಜೋಡಾಟ, ದೊಂದಿ ಬೆಳಕಿನ ಆಟ ಹೀಗೆ ಪರಂಪರೆಯನ್ನು ನೆನಪಿಸುವ ಪ್ರಯೋಗಗಳ ಮೂಲಕ ಪ್ರಸಿದ್ಧಿ ಪಡೆದ ಯಕ್ಷಸೌರಭ ಕೋಟ ಯಕ್ಷಗಾನದ ಮೂಲ ಸ್ವರೂಪವನ್ನು ತೆರೆದಿಡುವ ಕೆಲಸ ಮಾಡುತ್ತಿದೆ. ಬೇರೆ ಬೇರೆ ಹವ್ಯಾಸಿ ಕಲಾವಿದರನ್ನು ಕರೆಸಿ ಅವರ ಪ್ರತಿಭೆ ಪ್ರೋತ್ಸಾಹಿಸುವ ಕೆಲಸವನ್ನು ಮಾಡಿದ್ದಾರೆ. ಇಂಥಹ ಹವ್ಯಾಸಿ ತಂಡಗಳು ಯಕ್ಷಗಾನವನ್ನು ಉಳಿಸಿ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಹವ್ಯಾಸಿ ತಂಡಗಳು, ಹವ್ಯಾಸಿ ಕಲಾವಿದರು ಯಕ್ಷಗಾನದ ಇವತ್ತಿನ ಅವಶ್ಯಕತೆ ಎಂದು ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಆನಂದ ಸಿ.ಕುಂದರ್ ಹೇಳಿದರು.

ಅವರು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನ ವಠಾರದಲ್ಲಿ ಕೀರ್ತಿಶೇಷ ಕೆದೂರು ಗೌರಿ ಮರಕಾಲ್ತಿ ರಂಗಸ್ಥಳದಲ್ಲಿ ಆ.31ರಂದು ನಡೆದ ಯಕ್ಷ ಸೌರಭ ಶ್ರೀ ಹಿರೇಮಹಾಲಿಂಗೇಶ್ವರ ಕಲಾರಂಗ ರಿ., ಕೋಟ ಇದರ ದಶಮಾನಪೂರ್ವ ಕಾರ್ಯಕ್ರಮ ಶ್ರಾವಣ ಸಂಭ್ರಮದಲ್ಲಿ ಯಕ್ಷಗಾನ ಸಪ್ತಾಹ ‘ಸೌರಭ ಸಪ್ತಮಿ’ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶ್ರೀ ಗುರುನರಸಿಂಹ ದೇವಸ್ಥಾನದ ಅಧ್ಯಕ್ಷರು, ಖ್ಯಾತ ಮನೋವೈದ್ಯರಾದ ಡಾ.ಕೆ.ಎಸ್ ಕಾರಂತ ಅವರು ಮಾತನಾಡಿ ಸೌರಭ ಸಪ್ತಮಿ ಯಕ್ಷಗಾನ ಸಪ್ತಾಹ  ಅತ್ಯಂತ ಯಶಸ್ವಿಯಾಗಿ ಮಾಡಿರುವುದನ್ನು ಶ್ಲಾಘಿಸಿದರು.

ಗೋಳಿಗರಡಿ ಮೇಳದ ಯಜಮಾನರಾದ ಜಿ ವಿಠ್ಠಲ ಪೂಜಾರಿ, ಪತ್ರಕರ್ತರಾದ ಲಕ್ಷ್ಮೀ ಮಚ್ಚಿನ, ರವೀಂದ್ರ ಕುಮಾರ್ ಕೋಟ, ವಕೀಲರದ ಮಂಜುನಾಥ ಎಸ್ ಕೆ ಸಾಲಿಗ್ರಾಮ, ವಕೀಲರು ಟಿ ಮಂಜುನಾಥ ಗಿಳಿಯಾರು, ಹಂದಕುಂದ ಅಶೋಕ್ ಕುಮಾರ್ ಶೆಟ್ಟಿ, ಯಕ್ಷ ಸೌರಭಕ್ಕೆ ಶುಭ ಹಾರೈಸಿದರು.

ಗುರು ಗೌರವವನ್ನು ಸ್ವೀಕರಿಸಿ ಮಾತನಾಡಿದ ಸಂಘದ ಗುರುಗಳು ಪ್ರಸಾದ್ ಕುಮಾರ್ ಮೊಗೆಬೆಟ್ಟು, ಯಕ್ಷ ಸೌರಭ ಒಂದು ಹವ್ಯಾಸಿಗಳಲ್ಲಿಯೇ ಅತ್ಯುನ್ನತ ಯಕ್ಷ ತಂಡ. ಇಲ್ಲಿಯ ಕಲಾವಿದರ ದಂಡು ಎಲ್ಲಾ ಸಂಘಗಳಿಗೆ ಮಾದರಿ ಈಗಾಗಲೇ ಬಹಳಷ್ಟು ಪ್ರಥಮ ಸಾಧನೆಗಳಿಗೆ ಸಾಕ್ಷಿಯಾಗಿರುವ ತಂಡಕ್ಕೆ ನಾನು ಗುರುವಾಗಿರೋದು ಬಹಳ ಖುಷಿ ಕೊಟ್ಟ ಸಂಗತಿ ಸೌರಭ ಇನ್ನಷ್ಟು ಮತ್ತಷ್ಟು ಬೆಳೆಯಲಿ ಎಂದು ಶುಭ ಹಾರೈಸಿದರು.

ಸೌರಭ ಸಪ್ತಮಿ 7ನೇ ದಿನದ ಪ್ರಯೋಜಕರಾದ ಮತ್ಸ್ಯೋದ್ಯಮಿ ಶ್ರೀನಿವಾಸ್ ತಿಂಗಳಾಯ ಇವರನ್ನು ಸನ್ಮಾನಿಸಲಾಯಿತು.
ಸಪ್ತಾಹದ ಪೋಷಕರಾದ ಸದಾನಂದ ಹೊಳ್ಳ ಗೆಳೆಯರ ಬಳಗ ಕಾರ್ಕಡ ಇವರನ್ನು ಗೌರವಿಸಲಾಯಿತು. ಮತ್ತು ಸಪ್ತಾಹಕೆ ಸಹಕರಿಸಿದ ಮಹನೀಯರನ್ನು ಗೌರವಿಸಲಾಯಿತು.

ಈ ಸಂದರ್ಭ ಸಂಘದ ಅಧ್ಯಕ್ಷರಾದ ಕೋಡಿ ರಾಘವೇಂದ್ರ ಕರ್ಕೇರ, ಸ್ಥಾಪಕಧ್ಯಕ್ಷರಾದ ಹರೀಶ್ ಭಂಡಾರಿ ಗಿಳಿಯಾರು ಉಪಸ್ಥಿತರಿದ್ದರು
ಸಂಘದ ಸದಸ್ಯ ರಾಜೇಶ್ ಕರ್ಕೇರ ನಿರೂಪಿಸಿ, ಸಂಘದ ಅಧ್ಯಕ್ಷರಾದ ರಾಘವೇಂದ್ರ ಕರ್ಕೇರ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಶ್ರೀನಾಥ್ ಉರಾಳ ವಂದಿಸಿದರು. ಬಳಿಕ ಪ್ರಸಾದ್ ಮೊಗೇಬೆಟ್ಟು ನಿರ್ದೇಶನದಲ್ಲಿ “ಕುಶ ಲವ ”ಯಕ್ಷಗಾನ ಪ್ರದರ್ಶನ ಜರುಗಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!