Wednesday, September 11, 2024

ಶ್ರೀ ಕೃಷ್ಣ ಶತಾವತಾರಿ-ಡಾ.ಜೀವನ್ ರಾಂ ಸುಳ್ಯ| ಯಡಾಡಿ ಮತ್ಯಾಡಿ ವಿದ್ಯಾರಣ್ಯ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ ಮುದ್ದುಕೃಷ್ಣ ಸ್ಪರ್ಧೆ

ಯಡಾಡಿ-ಮತ್ಯಾಡಿ: ಕೃಷ್ಣನ ಬಾಲ್ಯ ಲೀಲೆಗಳೇ ವಿಶೇಷವಾದದು. ಆ ಎಲ್ಲ ಹಿನ್ನೆಲೆಗಳ ಮೂಲಕ ಶ್ರೀ ಕೃಷ್ಣ ಶತಾವತಾರಿ ಎನಿಸಿಕೊಳ್ಳುತ್ತಾನೆ. ಅದರಲ್ಲಿ ಮುದ್ದು ಕೃಷ್ಣ ಎನ್ನುವುದು ಹೆಚ್ಚು ಮಹತ್ವಿಕೆ ಪಡೆದುಕೊಂಡಿದೆ ಎಂದು ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಜೀವನ್ ರಾಂ ಸುಳ್ಯ ಹೇಳಿದರು.

ಅವರು ಯಡಾಡಿ ಮತ್ಯಾಡಿ ವಿದ್ಯಾರಣ್ಯ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಮುದ್ದು ಕೃಷ್ಣ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.

ಮಕ್ಕಳಲ್ಲಿ ದೇವರನ್ನು ಕಾಣುತ್ತೇವೆ. ಎಲ್ಲ ತಾಯಂದಿರು ಹುಟ್ಟಿದಂತಹ ಮಕ್ಕಳನ್ನು ಕೃಷ್ಣನನ್ನೇ ಕಾಣುವುದು. ಏಕೆ ಪುಟ್ಟ ಮಕ್ಕಳಲ್ಲಿ ಕೃಷ್ಣನನ್ನೇ ಕಾಣಬೇಕು ಎನ್ನುವುದಕ್ಕೆ ಕೂಡಾ ಭಾವನಾತ್ಮಕವಾದ ಅರ್ಥವಿದೆ. ಮಕ್ಕಳಿಗೆ ಬಾಲ್ಯದಿಂದಲೇ ಪುರಾಣದ ಮೌಲ್ಯಗಳನ್ನು ತಿಳಿಸಬೇಕು, ಪುರಾಣ ಪಾತ್ರಗಳ ಮನವರಿಕೆ ಮಾಡಬೇಕು, ನಾಟಕ, ಯಕ್ಷಗಾನ, ಕಲೆಗಳ ಸಾಂಸ್ಕೃತಿಕ ಲೋಕದ ಪರಿಚಯ ಮಾಡಬೇಕು ಎಂದು ಹೇಳಿದ ಅವರು ನನ್ನ ಬಹುತೇಕ ನಾಟಕಗಳಲ್ಲಿ ಕ್ರಷ್ಣನ ಪಾತ್ರ ಬರುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಾಪುರ ಸುಜ್ಞಾನ್ ಎಜುಕೇಶನ್ ಟ್ರಸ್ಟ್  ಅಧ್ಯಕ್ಷ ರಮೇಶ್ ಶೆಟ್ಟಿ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಭರತ್ ನಾಟ್ಯ ಕಲಾವಿದೆ ವಿದ್ವಾನ್ ಕೆ.ಭವಾನಿ ಶಂಕರ್, ಖ್ಯಾತ ಯಕ್ಷಗಾನ ಕಲಾವಿದೆ ಅಶ್ವಿನಿ ಕೊಂಡದಕುಳಿ, ಭರತ ನಾಟ್ಯ ಕಲಾವಿದೆ ವಿದೂಷಿ ವಿದ್ಯಾ ಸಂದೇಶ್, ಭರತ ನಾಟ್ಯ ಕಲಾವಿದೆ ವಿದೂಷಿ ಸಪ್ನ್ ಕಿಶೋರ್, ಕುಂದಾಪುರ ಸುಜ್ಞಾನ್ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಪ್ರತಾಪಚಂದ್ರ ಶೆಟ್ಟಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಚೆಸ್ ಸ್ಪರ್ಧೆಯಲ್ಲಿ ಅಮೋಘ ಸಾಧನೆಗೈದ ಪ್ರಕೃತಿ ಪಿ.ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು.

ಕುಂದಾಪುರ ಸುಜ್ಞಾನ್ ಎಜುಕೇಶನ್ ಟ್ರಸ್ಟ್ ಖಜಾಂಚಿ ಭರತ್ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು. ವಿದ್ಯಾರಣ್ಯ ಇಂಗ್ಲೀಷ್ ಮೀಡಿಯಂ ಸ್ಕೂಲ್ ಮುಖ್ಯೋಪಾಧ್ಯಾಯ ಪ್ರದೀಪ್ ಕೆ. ವಂದಿಸಿದರು. ಸಂತೋಷ್ ಕುಮಾರ್ ಮತ್ತು ರೇಣುಕಾ ಕಾರ್ಯಕ್ರಮ ನಿರ್ವಹಿಸಿದರು. ಒಂದರಿಂದ ಮೂರು ವರ್ಷ, ನಾಲ್ಕರಿಂದ ೬ ವರ್ಷ ವಯೋಮಿತಿಯ ಮಕ್ಕಳ ಮುದ್ದುಕ್ರಷ್ಣ ಸ್ಪರ್ಧೆ ನಡೆಯಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!