spot_img
Saturday, April 26, 2025
spot_img

ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿ ಪೂರ್ವ ಕಾಲೇಜು ಕೊಲ್ಲೂರು : ವಿವಿಧ ಸಂಘಗಳ ಉದ್ಘಾಟನೆ

ಜನಪ್ರತಿನಿಧಿ (ಕೊಲ್ಲೂರು) : ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿ ಪೂರ್ವ ಕಾಲೇಜು ಕೊಲ್ಲೂರು ಇದರ 2024-2025 ನೇ  ಶೈಕ್ಷಣಿಕ ಸಾಲಿನ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭವು ಪದವಿ ಪೂರ್ವ ಕಾಲೇಜಿನ ನೂತನ ಸಭಾ ಭವನದಲ್ಲಿ ಜರಗಿತು.

ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘವನ್ನು ಡಾ| ಗೋಪಾಲಕೃಷ್ಣ ಭಟ್ ಪ್ರಾಚಾರ್ಯರು ವೇದ ಪಾಠ ಶಾಲೆ ಕೊಲ್ಲೂರು ಇವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಯಾವುದೇ ಕೆಲಸವನ್ನು ಮಾಡುವಾಗ ಮನಃ ಪೂರ್ವಕ ಮಾಡಬೇಕು ತಂದೆ, ತಾಯಿ ಮತ್ತು ಗುರುವಿಗೆ ಸದಾ ಋಣಿ ಯಾಗಿದ್ದು ಒಳ್ಳೆಯ ಗುಣ ನಡತೆಗಳನ್ನು ಅಳವಡಿಸಿಕೊಂಡು ಈ ಎಲ್ಲಾ ಸಂಘಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಉತ್ತಮ ನಾಗರಿಕನಾಗಿ ಸಮಾಜದಲ್ಲಿ ಬೆಳಗಬೇಕು ಎಂದು ಆಶಿಸಿದರು.

ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ನ್ನು ಮೂಕಾಂಬಿಕಾ ವ್ಯವಸಾಯ ಸೇವಾ ಸಹಕಾರಿ  ಬ್ಯಾಂಕ್ ಕೊಲ್ಲೂರು ಇದರ ಅಧ್ಯಕ್ಷರಾದ ಕೆ ಎನ್ ಚಂದ್ರಶೇಖರ ಅಡಿಗ ಇವರು ಎನ್. ಎಸ್ .ಎಸ್. ಪ್ರತಿಜ್ಞಾ ವಿಧಿಯನ್ನು ಮಕ್ಕಳಿಗೆ ಭೋಧಿಸುವುದರ ಮೂಲಕ “ಎನ್ ಎಸ್ ಎಸ್ “ಉದ್ಘಾಟಿಸಿ ವಿದ್ಯಾರ್ಥಿಗಳು  ಇಂತಹ ಯೋಜನೆಗೆ ಸೇರಿ ನಮ್ಮ ಸಮಾಜಕ್ಕೆ ದೇಶಕ್ಕೆ ಸೇವೆ ಮಾಡಿ ತಮ್ಮಲ್ಲಿ ಸಹಕಾರಿ ,ಸಹಬಾಳ್ವೆ,ನಾಯಕತ್ವ ಗುಣ ,ಶಿಸ್ತು ಹಾಗೂ ಸಮಯ ಪಾಲನೆ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಗೋಪಾಲಕೃಷ್ಣ ಜಿ ಬಿ ಸಭೆಯಲ್ಲಿ ಉಪಸ್ಥಿತರಿದ್ದರು.

ಆಂಗ್ಲಭಾಷಾ ಉಪನ್ಯಾಸಕಿ ಪೂರ್ಣಿಮ ಏನ್ ಜೋಯಿಸ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಾಧಿಕಾರಿ ರಾಮ ನಾಯ್ಕ ಕೆ ಬಿ ಅಥಿತಿ ಗಣ್ಯರನ್ನು ಸ್ವಾಗತಿಸಿದರು .ಕನ್ನಡ ಉಪನ್ಯಾಸಕ  ಎಂ ವಾಸುದೇವ ಉಡುಪ ಪ್ರಾಸ್ತಾವಿಕ ಮಾತನಾಡಿದರು. ದೈಹಿಕ ಶಿಕ್ಷಣ ಉಪನ್ಯಾಸಕ ಸುಕೇಶ್ ಶೆಟ್ಟಿ ಹೊಸಮಠ ವಂದನಾರ್ಪಣೆ ಗೈದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ವತಿಂದ ಕೊಲ್ಲೂರು ಮೆಸ್ಕಾಂ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು. ಪ್ರತಿಭಾ ಕಾರಂಜಿಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ಕಾಲೇಜಿನ ಎಲ್ಲಾ ಉಪನ್ಯಾಸಕ ಉಪನ್ಯಾಸಕರ ವೃಂದದವರು ದೇವಳದ ಸಿಬ್ಚಂದಿಗಳಾದ ಜಯರಾಜ್ ಹುದಾರ್ ಹಾಗೂ ರಾಮ ಪೂಜಾರಿ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,300SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!