Monday, September 9, 2024

ಕರ್ನಾಟಕ ಕರಾವಳಿ ಮಿತ್ರ ಮಂಡಳಿ ಬೆಂಗಳೂರು ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿವಿಧ ಸ್ಪರ್ಧಾಕೂಟ

 

ಬೆಂಗಳೂರು: ಕರ್ನಾಟಕ ಕರಾವಳಿ ಮಿತ್ರ ಮಂಡಳಿ ಹಾವನೂರು ಬಡಾವಣೆ, ನಾಗಸಂದ್ರ, ಬೆಂಗಳೂರು ಇವರು ಆ. 26ರಂದು ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಕರಾವಳಿಗರಿಗಾಗಿ ಸೌಂದರ್ಯ ಶಾಲೆಯ ಆವರಣದಲ್ಲಿ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಿತ್ತು.5 ರಿಂದ 10 ವರುಷದ 15 ಮಕ್ಕಳು,1ರಿಂದ 5 ವರುಷದವರಲ್ಲಿ 26 ಚಿಣ್ಣರು ಎರಡು ವಿಭಾಗದಲ್ಲಿ ಒಟ್ಟು 42 ಮಕ್ಕಳು ಮುದ್ದು ಕೃಷ್ಣ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು

ಎಲ್ಲ ವಯೋಮಾನದವರಿಗಾಗಿ ಮಡಿಕೆ ಒಡೆಯುವ ಸ್ಪರ್ಧೆ, ಹಗ್ಗ ಜಗ್ಗಾಟ, ತೆಂಗಿನಕಾಯಿ ಸ್ಪರ್ಧೆ ಮುಂತಾದ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಕರಾವಳಿ ಭಾಗದ ಜನರು ಆಗಮಿಸಿದ್ದರು. ಸೌಂದರ್ಯ ಸಮೂಹ ಸಂಸ್ಥೆಗಳ ಸಂಸ್ಥಾಪಕರಾದ ಸೌಂದರ್ಯ ಮಂಜಪ್ಪ, ಸಂಸ್ಥೆಯ ಸಿ.ಇ.ಓ ಕೀರ್ತನ್ ಕುಮಾರ್, ಟ್ರಸ್ಟಿಗಳಾದ ಶ್ರೀಮತಿ ಸುನೀತಾ ಮಂಜಪ್ಪ ಹಾಗೂ ವರುಣ್ ಕುಮಾರ್ ಉಪಸ್ಥಿತರಿದ್ದು ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು.

ಸಂಘದ ಗೌರವಾಧ್ಯಕ್ಷರಾದ ಕೆ. ಕೃಷ್ಣ ಶೆಟ್ಟಿ, ಅಧ್ಯಕ್ಷರಾದ ರವಿಪ್ರಸಾದ್ ಶೆಟ್ಟಿ, ಉಪಾಧ್ಯಕ್ಷರಾದ ತಿಲಕ್ ಸಾಲ್ಯಾನ್ & ಮಂಜುನಾಥ್ ನಾಯಕ್, ಖಜಾಂಚಿ ಗಣೇಶ್ ಗುಜರಾನ್, ಪದಾಧಿಕಾರಿಗಳಾದ ದಿನೇಶ್ ಕೋಟ್ಯಾನ್, ಜನಾರ್ಧನ ರಾವ್, ಎನ್. ಡಿ. ಶೆಟ್ಟಿ ಮುಂತಾದ ಸದಸ್ಯರು ಹಾಜರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!