Monday, September 9, 2024

ಕೆಡಿಪಿ ಸಭೆ : ವಕ್ವಾಡಿ ಪ್ರಕರಣ ಪ್ರಮುಖ ಆರೋಪಿ ಬಂಧನ ವಿಳಂಬಕ್ಕೆ ಅಸಮಾಧಾನ | ಶಾಲಾ ಶಿಥಿಲ ಕಟ್ಟಡ ಅನಾಹುತ ಆದರೆ ಅಧಿಕಾರಿಗಳೆ ಹೊಣೆ | ಪೋಸ್ಟ್ ಮಾರ್ಟಂಗೆ ಶವ ಮೆರವಣಿಗೆ ಬೇಡ

ಜನಪ್ರತಿನಿಧಿ (ಕುಂದಾಪುರ) : ವಕ್ವಾಡಿಯಲ್ಲಿ ಇತ್ತೀಚೆಗೆ ನಡೆದ ಮಾರಣಾಂತಿಕ ಹಲ್ಲೆಯಲ್ಲಿ ಪ್ರಮುಖ ಆರೋಪಿಗಳ ಬಂಧನಕ್ಕೆ ವಿಳಂಭವಾಗುತ್ತಿರುವುದು, ಕುಂದಾಪುರ ಬೈಂದೂರು ತಾಲೂಕಿನಲ್ಲಿ ಶಿಥಿಲವಸ್ಥೆಯಲ್ಲಿ ಶಾಲಾ ಕಟ್ಟಡ, ಬೈಂದೂರು ಕ್ಷೇತ್ರಕ್ಕೆ ಮೀನುಗಾರಿಕಾ ಮನೆ ದೊರಕದಿರುವುದು, ಕಂಡ್ಲೂರು ಸೇತುವೆ ಶಿಥಿಲಗೊಳ್ಳುತ್ತಿರುವುದು ,ಆರೋಗ್ಯ ಇಲಾಖೆಯ ಕೆಲವು ನಿಯಮಗಳಿಗೆ ತಿದ್ಧುಪಡಿಗೆ ಆಗ್ರಹ ಇದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಕುಂದಾಪುರ ತಾಲೂಕು ತ್ರೆöÊಮಾಸಿಕ ಕೆ.ಡಿ.ಪಿ ಸಭೆಯಲ್ಲಿ ಕಂಡುಬAದ ಪ್ರಮುಖ ಅಂಶಗಳು.

ಇತ್ತೀಚೆಗೆ ವಕ್ವಾಡಿಯಲ್ಲಿ ಅಮಲು ಪದಾರ್ಥಗಳನ್ನು ಸೇವಿಸಿ ಮಾರಣಾಂತಿಕ ಹಲ್ಲೆ ಮಾಡಿದ ಪ್ರಕರಣದ ಪ್ರಮುಖ ಆರೋಪಿಗಳನ್ನು ತಕ್ಷಣ ಬಂಧಿಸಬೇಕು, ಹಾಗೂ ವಕ್ವಾಡಿಯಲ್ಲಿ ಪೊಲೀಸ್ ಗಸ್ತು ಜಾಸ್ತಿ ಮಾಡಬೇಕು, ಅನುಮಾನಸ್ಪದವಾಗಿ ತಿರುಗಾಡುವ ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಬೇಕು ಎಂದು ಕೆಡಿಪಿ ಸದಸ್ಯ ರಮೇಶ ಶೆಟ್ಟಿ ಆಗ್ರಹಿಸಿದರು.

ಕಂಡ್ಲೂರಿನ ಸಂಪರ್ಕ ಸೇತುವೆ ಶಿಥಿಲಗೊಳ್ಳುತ್ತಿದ್ದು ಈ ಬಗ್ಗೆ ಸಂಬAಧಪಟ್ಟ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದರೆ ದೊಡ್ಡ ಅವಘಡ ಸಂಭವಿಸಬಹುದು ಎಂದು ಕೆಡಿಪಿ ಸದಸ್ಯರಾದ ಜ್ಯೋತಿ ಪುತ್ರನ್ ಸಭೆಯ ಗಮನ ಸಳೆದರು.

ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಡಾ. ಪ್ರೇಮಾನಂದ ಉತ್ತರಿಸಿ ಹಳ್ಳಿಹೊಳೆ ಹಾಗೂ ಶಂಕರನಾರಾಯಣ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ರಜೆಯಲ್ಲಿರುವುದರಿಂದ ಬದಲಿ ನಿಯೋಜನೆ ಮಾಡಲಾಗಿದೆ. ಬೈಂದೂರು ತಾಲೂಕು ಆಸ್ಪತ್ರೆಗೆ ಸ್ಥಳದ ಸರ್ವೇಗೆ ಹದ್ದುಬಸ್ತಿಗೆ ಅರ್ಜಿ ಹಾಕಿದ್ದೇವೆ. ಅದು ತಹಶೀಲ್ದಾರ್ ಹಂತದಲ್ಲಿದೆ. ಅಗ್ನಿಶಾಮಕ ದಳ ಕಛೇರಿ ಆ ಸ್ಥಳದಲ್ಲಿದ್ದು ಅದು ಹಸ್ತಾಂತರವಾಗುತ್ತಿದ್ದಂತೆ ನಮಗೆ ಸ್ಥಳ ಸಿಗುತ್ತದೆ ಎಂದರು. ಡೆಂಗ್ಯೂ ಅಂತಹ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಡ್ರೈ ಡೇ ಕಾರ್ಯಕ್ರಮವನ್ನು ಪ್ರತೀ ಶುಕ್ರವಾರ ನಡೆಸುತ್ತಿದ್ದೇವೆ ಎಂದರು.

ರಮೇಶ ಶೆಟ್ಟಿ ಮಾತನಾಡಿ ಆಯುಷ್ಮಾನ್ ಆರೋಗ್ಯ ವಿಮೆಯ ಮಾಹಿತಿ ಕೊರತೆಯಿಂದ ಸಮಸ್ಯೆಯಾಗುತ್ತಿದೆ. ಮಣಿಪಾಲದಲ್ಲಿ ಬೆಡ್ ಸಿಗುವುದಿಲ್ಲ. ಬಡವರಿಗೆ ಸಮಸ್ಯೆಯಾದ ಪ್ರಕರಣಗಳು ಸಾಕಷ್ಟಿದೆ ಎಂದರು. ಇದಕ್ಕೆ ಉತ್ತರಿಸಿದ ಶಾಸಕ ಕಿರಣ್ ಕೊಡ್ಗಿ ಸರಕಾರಿ ಆಸ್ಪತ್ರೆಯ ರೆಫರಲ್ ಲೆಟರ್ ಇದ್ದು, ಶಸ್ತçಚಿಕಿತ್ಸೆಗಳಿಗೆ ಮಾತ್ರ ಇದು ಅನ್ವಯವಾಗುತ್ತದೆ, ತುರ್ತು ಕೆಲವೇ ಕೆಲವು ಕೋಡ್‌ಗಳನ್ನು ಮಾತ್ರ ನೀಡಿದ್ದಾರೆ ಆಯುಷ್ಮಾನ್ ಸಮಸ್ಯೆ, ಇತ್ಯಾದಿ ವಿಚಾರಗಳನ್ನು ಸರ್ಕಾರ ಮಟ್ಟದಲ್ಲಿ ಪ್ರಯತ್ನ ಮಾಡಿದ್ದೇವೆ ಎಂದರು. ಕುಂದಾಪುರ ಭೂ ಬ್ಯಾಂಕ್ ಅಧ್ಯಕ್ಷರಾದ ಮಲ್ಯಾಡಿ ಶಿವರಾಮ ಶೆಟ್ಟಿ ಮಾತನಾಡಿ ತಿದ್ದುಪಡಿ ಮಾಡಬೇಕಾದ ಅವಶ್ಯಕತೆ ಇದೆ ಎಂದರು. ಶಾಸಕ ಕಿರಣ್ ಕೊಡ್ಗಿ ಮಾತನಾಡಿ, ಎಲ್ಲರೂ ಮಣಿಪಾಲ ಆಸ್ಪತ್ರೆಗೆ ಹೋಗುವ ಬದಲು ಮಂಗಳೂರಿಗೆ ಹೋದರೆ ಅಲ್ಲಿ ಹಲವು ಮೆಡಿಕಲ್ ಕಾಲೇಜು ಆಸ್ಪತ್ರೆಗಳಿವೆ. ಇಷ್ಟು ರೋಗಿಗಳ ಒತ್ತಡ ಅಲ್ಲಿ ಇಲ್ಲ.ಅಲ್ಲಿ ಆಯುಷ್ಮಾನ್ ಸೌಲಭ್ಯ ದೊರೆಯುತ್ತದೆ. ಹಾಗಾಗಿ ಮಂಗಳೂರಿಲ್ಲಿಯೂ ಒಳ್ಳೆಯ ಆಸ್ಪತ್ರೆಗಳಿವೆ ಸಾಧ್ಯವಾದಷ್ಟು ಜನ ಅಲ್ಲಿಗೆ ಹೋದರೆ ಅನುಕೂಲ ಎಂದರು.

ಯಶಸ್ವಿನಿ ವಿಮಾ ಯೋಜನೆ ನೊಂದಾವಣಿ ಮಾಡಿದ್ದಾರೆ. ಆದರ ಸೌಲಭ್ಯವೂ ಫಲಾನುಭವಿಗಳಿಗೆ ಸಿಗುತ್ತಿಲ್ಲ ಎಂದರು. ಶಾಸಕ ಕಿರಣ್ ಕೊಡ್ಗಿ ಇದಕ್ಕೆ ಉತ್ತರಿಸಿ ಯಶಸ್ವಿನಿ ಯೋಜನೆ ಸಹಕಾರಿ ಸಂಘಗಳ ಮೂಲಕ ನೊಂದಣಿಯಾಗುತ್ತದೆ. ಪ್ಯಾಕೆಜ್ ಆಧಾರದಲ್ಲಿ ವಿಮಾ ಹಣ ಬರುತ್ತದೆ. ಮಣಿಪಾಲ ಆಸ್ಪತ್ರೆಯಲ್ಲಿ ಯಶಸ್ವಿನಿ ಇಲ್ಲದಿರುವುದರಿಂದ ಈ ಭಾಗದ ಜನರಿಗೆ ಅಷ್ಟೊಂದು ಅನುಕೂಲವಾಗಿಲ್ಲ ಎಂದರು.

ರಮೇಶ ಶೆಟ್ಟಿ ವಕ್ವಾಡಿ ಮುಂದುವರಿದು, ಆರೋಗ್ಯ ಉಪಕೇಂದ್ರಗಳ ಆರ್.ಟಿ.ಸಿ ಆಗಿಲ್ಲ, ಆವರಣ ಗೋಡೆ ನಿರ್ಮಾಣವಾಗಿಲ್ಲ. ವಿಶೇಷವಾದ ಅನುದಾನ ನೀಡಬೇಕು ಎಂದರು. ಟಿಎಪಿಸಿಎಂಸಿ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ ಮಾತನಾಡಿ ಮರಣೋತ್ತರ ಪರೀಕ್ಷೆಯಲ್ಲಿಯೂ ಸಮಸ್ಯೆಯಾಗುತ್ತಿದ್ದು, ಇಲಾಖೆಯಲ್ಲಿ ಸಮನ್ವಯತೆಯ ಕೊರತೆ ಕಾಡುತ್ತಿದೆ. ಇತ್ತೀಚೆಗೆ ಒಂದು ಪ್ರಕರಣದಲ್ಲಿ ಶವವನ್ನು ಬೇರೆ ಬೇರೆ ಆಸ್ಪತ್ರೆಗಳಿಗೆ ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಯಿತು ಎಂದರು. ಇದಕ್ಕೆ ಉತ್ತರಿಸಿದ ವೈದ್ಯಾಧಿಕಾರಿಗಳು ಗ್ರೂಪ್ ಡಿ ಹುದ್ದೆ ಖಾಲಿ ಇದೆ. ಹಾಗಾಗಿ ಸಮಸ್ಯೆಯಾಗುತ್ತಿದೆ. ಗುತ್ತಿಗೆ ಆಧಾರದಲ್ಲಿ ತಗೆದುಕೊಂಡ ಗ್ರೂಫ್ ಡಿ’ ಅವರಿಗೆ ತರಬೇತಿ ಇರುವುದಿಲ್ಲ ಎಂದರು.

ಮಲ್ಯಾಡಿ ಶಿವರಾಮ ಶೆಟ್ಟಿ ಮಾತನಾಡಿ ಮೋರ್ಚರಿಯಲ್ಲಿ ಶವ ಇಡಲು ತಾಂತ್ರಿಕ ಸಮಸ್ಯೆಗಳಾಗುತ್ತಿರುವುದನ್ನು ವಿವರಿಸಿದರು. ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ ಇಲಾಖೆಯಲ್ಲಿನ ಸಮಸ್ಯೆಗಳನ್ನು ಪರಿಹರಿಸಿಕೊಂಡು ಜನರಿಗೆ ಉತ್ತಮ ಸೇವೆ ನೀಡಲು ವೈದ್ಯಾದಿಕಾರಿಗಳು ಹೆಚ್ಚಿನ ಗಮನ ಹರಿಸಬೇಕು. ಮೂಲಸೌಕರ್ಯಗಳ ಬಗ್ಗೆಯೂ ಗಮನ ನೀಡಬೇಕು. ಮಾನವೀಯನ ನೆಲೆಯಲ್ಲಕಿ ಯೋಚನೆ ಮಾಡಿ, ಮರಣೋತ್ತರ ಪರೀಕ್ಷೆಗೆ ಶವ ಮೆರವಣಿಗೆ ಬೇಡ ಎಂದರು.

ರಮೇಶ ಶೆಟ್ಟಿ ಮುಂದುವರಿದು ಮಾತನಾಡಿ, ಕೆಲವು ಸರ್ಕಾರಿ ಆಸ್ಪತ್ರೆಯ ವೈದ್ಯರು ಖಾಸಗಿಯಾಗಿ ಕ್ಲಿನಿಕ್ ಇಟ್ಟುಕೊಂಡಿರುತ್ತದೆ. ಸರ್ಕಾರಿ ಆಸ್ಪತ್ರೆಯಲ್ಲಿ ಆಸಡ್ಡೆ ಮಾಡುತ್ತಾರೆ. ಕ್ಲಿನಿಕ್‌ಗೆ ಬರುವಂತೆ ಸೂಚಿಸುತ್ತಾರೆ ಈ ಬಗ್ಗೆ ಗಮನ ಹರಿಸಬೇಕು ಎಂದರು.

ಜ್ಯೋತಿ ಎಂ ನಾಯಕ ಮಾತನಾಡಿ ಎನ್.ಆರ್.ಸಿ ಸ್ಥಳಾಂತರವಾಗುತ್ತಿದೆ ಎನ್ನುವ ಸುದ್ಧಿ ಇದೆ. ಯಾವುದೆ ಕಾರಣಕ್ಕೆ ಇದು ಕುಂದಾಪುರದಿಂದ ಸ್ಥಳಾಂತರ ಆಗಬಾರದು ಎಂದರು. ಜ್ಯೋತಿ ಪುತ್ರನ್ ಧ್ವನಿಗೂಡಿಸಿ ಎನ್.ಆರ್,ಸಿಯನ್ನು ಕುಂದಾಪುರದಲ್ಲಿ ಉಳಿಸಿಕೊಳ್ಳಬೇಕು ಎಂದರು. ಶಾಸಕ ಗುರುರಾಜ ಗಂಟಿಹೊಳೆ ಕೂಡಾ ಇದನ್ನು ಬೇರೆಡೆಗೆ ಹೋಗಲು ಯಾವುದೇ ಕಾರಣಕ್ಕೂ ಬಿಡಬಾರದು ಎಂದರು.

ಬಿತ್ತನೆ ಬೀಜ ಕೊರತೆ ಬಗ್ಗೆ ಮಾತನಾಡಿದ ಕೆಡಿಪಿ ಸದಸ್ಯ ಶರತ್ ಕುಮಾರ್ ಶೆಟ್ಟಿ ಈ ಬಾರಿ ಮುಂಗಾರು ಹಂಗಾಮಿಗೆ ಎಂಓ೪ ಬಿತ್ತನೆ ಬೀಜ ಕೊರತೆಯಾಗಿತ್ತು. ಬೇಡಿಕೆ ಇರುವಷ್ಟು ಬೀಜ ದಾಸ್ತಾನು ಇಡಲಿಲ್ಲ ಏಕೆ ಎಂದು ಪ್ರಶ್ನೆ ಮಾಡಿದರು.

ಕಿರಣ್ ಕೊಡ್ಗಿ ಕೃಷಿ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡು ತಾಲೂಕಿಗೆ ಅಗತ್ಯ ಇರುವಷ್ಟು ಬಿತ್ತನೆ ಬೀಜಕ್ಕೆ ಬೇಡಿಕೆ ಸಲ್ಲಿಸಬೇಕು. ಆ ಕೆಲಸವನ್ನು ನೀವು ಮಾಡಬೇಕು. ನೀವು ಬೇಡಿಕೆ ಸಲ್ಲಿಸದೇ ಇದ್ದರೆ ಹೇಗೆ? ಇಲ್ಲಿ ರೈತರು ಹೆಚ್ಚಾಗಿ ಬಳಸುವ ತಳಿಯ ಬದಲಿಗೆ ಬೇರೆ ಕೊಟ್ಟರೆ ಆಗುತ್ತದಾ ? ಎಂದು ಪ್ರಶ್ನಿಸಿದರು. ಹರಿಪ್ರಸಾದ್ ಶೆಟ್ಟಿ ಮಾತನಾಡಿ ಅಕ್ಕಿ ಮಿಲ್ಲಿನಲ್ಲಿ ಅಕ್ಕಿ ಮಾಡಲು ಬಂದ ಎಂಒ೪ ಭತ್ತವನ್ನು ಬೀಜಕ್ಕೆ ತರಲು ಮುಂದಾದ ಉದಾಹರಣೆಯೂ ಇದೆ ಎಂದರು.

ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳಲ್ಲಿ ವಾರ್ಡನ್ ಗಳು ಸರಿಯಾಗಿ ಕೆಲಸ ಮಾಡುವುದಿಲ್ಲವೇ? ಹಾಸ್ಟೆಲ್‌ನಿಂದ ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಮಧ್ಯಾಹ್ನ ನಂತರ ಹೆಚ್ಚಾಗಿ ಗೈರಾಗುತ್ತಾರೆ ಎಂದು ಶಿಕ್ಷಣ ಸಂಸ್ಥೆಗಳು ಹೇಳುತ್ತಿವೆ, ವಾರ್ಡನ್‌ಗಳು ನಿಗಾ ವಹಿಸಬೇಕು, ಶಿಕ್ಷಣ ಅಧಿಕಾರಿಗಳು ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಹಾಜರಾತಿ ಗಮನಿಸಬೇಕು ಎಂದರು.

ಶಂಕರನಾರಾಯಣದಲ್ಲಿ ಅಂಬೇಡ್ಕರ್ ವಸತಿ ನಿಲಯ ಕಟ್ಟಡ ಗುಡ್ಡಕ್ಕೆ ತಾಗಿಕೊಂಡು ನಿರ್ಮಾಣ ಮಾಡಲಾಗಿದ್ದು ಗುಡ್ಡ ಕುಸಿಯುವ ಭೀತಿಯಲ್ಲಿದೆ. ತಡೆಗೋಡೆ ಅಪಾಯದಲ್ಲಿದೆ ಎಂದು ಹರಿಪ್ರಸಾದ ಶೆಟ್ಟಿ ಹೇಳಿದರು. ಈ ಬಗ್ಗೆ ಸಿನಿಯರ್ ಇಂಜಿನಿಯರ್, ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರೀಶಿಲನೆ ನೆಡೆಸಿದ್ದಾರೆ ಎಂದು ಅಧಿಕಾರಿಗಳು ಉತ್ತರಿಸಿದರು.

ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ ಇದು ಸರಿ ಇದೆಯೋ ಇಲ್ಲವೋ ಪರಿಶೀಲನಾ ವರದಿ ನೀಡಿ, ಅರ್ಧಂಬರ್ಧ ಆಗಬಾರದು, ಸಮಸ್ಯೆ ಇದ್ದರೆ ಬೇಗ ಸರಿ ಪಡಿಸಿ ಎಂದರು.
ಸಾಮಾಜಿಕ ಅರಣ್ಯ ಇಲಾಖೆ ಗಿಡ ನೆಡುತ್ತಾರೆ. ಗ್ರಾಮ ಅರಣ್ಯ ಸಮಿತಿಗೆ ಅದರ ನಿರ್ವಹಣೆಯ ಜವಬ್ದಾರಿ ನೀಡಬಹುದು ನೆಟ್ಟ ಸಸಿಗಳ ಸಂಖ್ಯೆ ಮುಂದಿನ ವರ್ಷ ಇರುವುದಿಲ್ಲ. ಇದ್ದ ಗಿಡವನ್ನು ರಕ್ಷಣೆ ಮಾಡುವುದು ಮುಖ್ಯ ಎಂದರು.

ಗೃಹಲಕ್ಷ್ಮೀ ಯೋಜನೆಯ ಆರ್ಹ ಫಲಾನುಭವಿಗಳಿಗೆ ಕೆಲವೊಂದು ತಾಂತ್ರಿಕ ಸಮಸ್ಯೆಯಿಂದ ಸೌಲಭ್ಯ ಸಿಗುತ್ತಿಲ್ಲ. ಆದಾಯ ತೆರಿಗೆ ಪಾವತಿ ಕಾರಣಗಳನ್ನು ನೀಡಲಾಗುತ್ತಿದೆ. ಸೂಕ್ತ ದಾಖಲೆಗಳನ್ನು ಪಡದುಕೊಂಡು ಆರ್ಹರಿಗೆ ಸೌಲಭ್ಯ ಸಿಗುವಂತೆ ಮಾಡಬೇಕು. ಮತ್ತೆ ಮತ್ತೆ ಹಳ್ಳಿಯ ಜನರನ್ನು ಕಛೇರಿಗಳಿಗೆ ಅಲೆದಾಡಿಸಬಾರದು ರಮೇಶ ಶೆಟ್ಟಿ ವಕ್ವಾಡಿ ಒತ್ತಾಯಿಸಿದರು.

ಸರಕಾರಿ ಶಾಲಾ ಕಟ್ಟಡಗಳು ಶಿಥಿಲಗೊಂಡು ಬೀಳುವ ಹಂತ ತಲುಪಿವೆ. ಇದನ್ನು ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ಕಟ್ಟಡ ಬಿದ್ದು ಏನಾದರೂ ಸಮಸ್ಯೆಯಾದರೆ ಅಧಿಕಾರಿಗಳನ್ನೇ ಹೊಣೆ ಮಾಡಬೇಕಾಗುತ್ತದೆ. ಮಕ್ಕಳ ವಿಷಯವನ್ನು ನಿರ್ಲಕ್ಷ್ಯ ಮಾಡಬೇಡಿ ಎಂದು ಶಾಸಕ ಕಿರಣ್ ಕೊಡ್ಗಿ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಶಿಥಿಲಗೊಂಡ ಕಟ್ಟಡಗಳ ದುರಸ್ತಿ, ಹೊಸ ಕಟ್ಟಡ ನಿರ್ಮಾಣ, ದುರಸ್ತಿಗೆ ಅಸಾಧ್ಯವಾದ ಕಟ್ಟಡಗಳ ತೆರವಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಕೆಡಿಪಿ ಸದಸ್ಯರಾದ ವಿಜಯಧರ, ಅಬ್ದುಲ್ ಮುನಾಫ್ ಚರ್ಚೆಯಲ್ಲಿ ಪಾಲ್ಗೊಂಡರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಶೋಭಾ ಲಕ್ಷ್ಮೀ, ಜಿ.ಪಂ ಯೋಜನಾ ನಿರ್ದೇಶಕರಾದ ಉದಯ ಕುಮಾರ್, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಶಶಿಧರ ಜಿ. ಉಪಸ್ಥಿತರಿದ್ದರು.

ಶಾಲೆ ದತ್ತು ಪಡೆದವರು ಮಧ್ಯೆ ಕೈ ಬಿಟ್ಟರೆ…..?
ಸರಕಾರಿ ಶಾಲೆಯನ್ನು ದತ್ತು ತೆಗೆದುಕೊಂಡ ವ್ಯಕ್ತಿ ಮಧ್ಯಂತರದಲ್ಲಿ ಕೈಬಿಟ್ಟರೆ ದತ್ತು ಪ್ರಕ್ರಿಯೆಯನ್ನು ರದ್ದು ಮಾಡಬೇಕು ರಮೇಶ ಶೆಟ್ಟಿ ವಕ್ವಾಡಿ ಸಭೆಯ ಗಮನ ಸಳೆದರು. ಇದಕ್ಕೆ ಧ್ವನಿಗೂಡಿಸಿದ ಶಾಸಕ ಗುರುರಾಜ ಗಂಟಿಹೊಳೆ ದಾನಿಗಳು ದತ್ತು ತಗೆದುಕೊಳ್ಳುತ್ತಾರೆ. ನಂತರ ಮುನ್ನಡೆಸಲು ಆರ್ಥಿಕ ಮುಗ್ಗಟ್ಟು ಎದುರಿಸಬಹುದು. ಆ ಸಂದರ್ಭದಲ್ಲಿ ದತ್ತು ಪ್ರಕ್ರಿಯೆ ರದ್ದತಿ ಮಾಡುವುದು ಸೂಕ್ತ ಎಂದರು.

ಆಹಾರ ಪದಾರ್ಥ :ಸ್ವಚ್ಛತೆ ಕೊರತೆ
ಆಹಾರ ತಿನಿಸುಗಳನ್ನು ತಯಾರಿಸುವವರು ಗ್ರಾಹಕರ ಆರೋಗ್ಯ ಮರೆತು ವ್ಯವಹರಿಸುತ್ತಾರೆ. ಬೀದಿ ಬದಿಯ ಅಂಗಡಿಗಳಲ್ಲಿ ಕರಿದ ತಿಂಡಿಗಳನ್ನು ನ್ಯೂಸ್ ಪೇಪರ್‌ಗಳಲ್ಲಿ ಹಾಕಿ ಕೊಡುತ್ತಾರೆ. ತಿಂಡಿ ತಿನಿಸುಗಳನ್ನು ತಯಾರಿಸುವಾಗ ಸರಿಯಾಗಿ ಸ್ವಚ್ಛಗೊಳಿಸುವುದಿಲ್ಲ. ಸ್ವಚ್ಛತೆ ಬಗ್ಗೆ ಹಾಗೂ ಆಹಾರದ ಗುಣಮಟ್ಟದ ಬಗ್ಗೆ ಸಂಬAಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು ಎಂದು ಜ್ಯೋತಿ ಪುತ್ರನ್ ಸಭೆಯ ಗಮನ ಸಳೆದರು.
ಇದಕ್ಕೆ ಉತ್ತರಿಸಿದ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ತಿಳಿಸಿದರು.

ಅಪಾಯಕಾರಿ ಮರ: ತೆರವಿಗೆ ಮೀನಮೇಷ
ಕಾಳಾವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಸ್ತೆಗೆ ವಾಲಿಕೊಂಡಿರುವ ಮರಗಳ ತೆರವು ಮಾಡಲು ನಿರ್ಣಯ ಮಾಡಿ ಇಲಾಖೆಗೆ ಕೊಟ್ಟರೂ ಇನ್ನೂ ಅಪಾಯಕಾರಿ ಮರಗಳ ತೆರವು ಮಾಡುವ ಕೆಲಸ ಆಗಿಲ್ಲ. ಈ ವರ್ಷ ತುಂಬಾ ಮರಗಳ ರಸ್ತೆಗೆ ಬಿದ್ದಿವೆ ಎಂದು ರಮೇಶ ಶೆಟ್ಟಿ ಹೇಳಿದರು.

ಶರತ್ ಕುಮಾರ್ ಶೆಟ್ಟಿ ಮಾತನಾಡಿ ಹೆಮ್ಮಾಡಿ ಕೊಲ್ಲೂರು ರಸ್ತೆಯಲ್ಲಿ ಹೆಮ್ಮಾಡಿ ಮಂಡಲ ಪಂಚಾಯತ್ ಇರುವ ಕಾಲದಲ್ಲಿ ಗಾಳಿ ಸಸಿಗಳನ್ನು ನೆಟ್ಟಿದ್ದು ಅದು ಈಗ ಅಪಾಯಕಾರಿಯಾಗಿ ರಸ್ತೆಗೆ ಬೀಳುತ್ತಿವೆ. ಇದನ್ನು ಕಡಿದು ಹೊಸ ಗಿಡ ನೆಡುವಂತೆ ಮೂರು ವರ್ಷದ ಹಿಂದೆಯೇ ಮನವಿ ಮಾಡಿದ್ದೇವೆ. ಈಗಾಗಲೇ ಈ ಮಾರ್ಗ ಉದ್ದಕ್ಕೂ ಮರಗಳು ರಸ್ತೆಗೆ ಬಿದ್ದು ವಿದ್ಯುತ್ ಸಮಸ್ಯೆ ಸೇರಿದಂತೆ ಸಾಕಷ್ಟು ಹಾನಿಯಾಗುತ್ತಿದೆ ಎಂದರು.

ಪರಿಶಿಷ್ಟರ ಹಣ ದುರುಪಯೋಗ
ಶಂಕರನಾರಾಯಣ ಗ್ರಾಮ ಪಂಚಾಯತ್ ನಲ್ಲಿ ಪರಿಶಿಷ್ಟರ ಕಲ್ಯಾಣಕ್ಕೆ ಬಂದ ೨.೫ಕೋಟಿ ರೂಪಾಯಿ ಅನುದಾನವನ್ನು ನಕಲಿ ದಾಖಲೆ ಸ್ರಷ್ಟಿಸಿ ಬಳಸಿಕೊಳ್ಳಲಾಗಿದೆ. ಎಸ್,ಸಿ ಎಸ್.ಟಿ ಸಮುದಾಯದವರುಇಲ್ಲದ ರಸ್ತೆಗೆ ಕಾಮಗಾರಿ ಮಾಡಲಾಗಿದ್ದು ಲೋಕಾಯುಕ್ತಕ್ಕೆ ದೂರು ಹೋಗಿದೆ ಎಂದು ಕೆಡಿಪಿ ಸದಸ್ಯ ಶರತ್ ಕುಮರ್ ಶೆಟ್ಟಿ ಸಭೆಯ ಗಮನ ಸಳೆದರು. ಇದಕ್ಕೆ ಉತ್ತರಿಸಿದ ಸಮಾಜ ಕಲ್ಯಾಣ ಕಛೇರಿ ಅಧೀಕ್ಷಕರು ಅಲ್ಲಿ ಎಸ್,ಸಿ ಎಸ್.ಟಿ ಸಮುದಾಯದವರ ಮನೆಗಳಿಲ್ಲ. ಸಮಾಜ ಕಲ್ಯಾಣ ಇಲಾಖೆಯಿಂದ ದೃಢೀಕರಣ ಪಡೆಯುವ ಮೊದಲೇ ತನಿಖೆ ಆರಂಭವಾಗಿದೆ ಎಂದರು.

ಮನೆ ಕೊಡದಿದ್ದರೆ ಧರಣಿ-ಗಂಟಿಹೊಳೆ
ಶಾಸಕ ಗುರುರಾಜ ಗಂಟಿಹೊಳೆ ಮೀನುಗಾರಿಕೆ ಇಲಾಕೆ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿ ಮೀನುಗಾರಿಕಾ ಇಲಾಖೆಯಲ್ಲಿ ಬೈಂದೂರು ಕ್ಷೇತ್ರಕ್ಕೆ ಮನೆ ನೀಡಿಕೆ ಆಗಿಲ್ಲ. ಈ ಬಾರಿಯೂ ಮನೆ ನೀಡದಿದ್ದರೆ ನಾನು ಬಿಡುವುದಿಲ್ಲ. ಅಕ್ಟೋ¨ರ್ ೧ರಂದು ನಿಮ್ಮ ಇಲಾಖೆ ಮುಂದೆ ಧರಣಿ ಕುಳಿತುಕೊಳ್ಳುತ್ತೇನೆ ಎಂದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!