Monday, September 9, 2024

ಗಂಗೊಳ್ಳಿ :ಶ್ರೀ ಗ್ರಾಮ ಜಟ್ಟಿಗ ದೇವಸ್ಥಾನ-ಸುವರ್ಣ ಮಹೋತ್ಸವ ಉದ್ಘಾಟನೆ

ಗಂಗೊಳ್ಳಿ: ಮನುಷ್ಯ ಜನ್ಮ ಸಾರ್ಥಕವಾಗಬೇಕಾದರೆ ಧರ್ಮಾಚರಣೆ ಮಾಡಬೇಕು. ಆಧ್ಯಾತ್ಮಿಕ ವಿಚಾರಗಳಲ್ಲಿ ಹೆಚ್ಚು ತೊಡಗಿಸಿಕೊಂಡು ಭಗವಂತನನ್ನು ಸ್ಮರಿಸುವುದರಿಂದ ಭಗವಂತನ ದರ್ಶನ ಆಗುತ್ತದೆ. ನಮ್ಮ ಜೀವ ಇರುವ ತನಕ ಸತ್ಕರ್ಮ, ಉಪಕಾರ, ಉತ್ತಮ ಕೆಲಸಗಳನ್ನು ಮಾಡುತ್ತಿರಬೇಕು. ದೇವರ ಸಂಕೀರ್ತನೆ, ಭಜನೆ, ಗುರು ಹಿರಿಯರ ಸೇವೆಯನ್ನು ಮಾಡುವುದರಿಂದ ಜೀವನ ಪಾವನವಾಗಿ ಭಗವಂತನ ಆಶೀರ್ವಾದ ಪ್ರಾಪ್ತಿಯಾಗುತ್ತದೆ ಎಂದು ಗಂಗೊಳ್ಳಿಯ ಎಸ್.ವಿ. ಶಾಲೆಯ ಸಂಸ್ಕೃತ ಅಧ್ಯಾಪಕ ಶ್ರೀಪತಿ ಭಟ್ ಹೇಳಿದರು.

ಗಂಗೊಳ್ಳಿಯ ಮಲ್ಯರಬೆಟ್ಟು ಶ್ರೀ ಗ್ರಾಮ ಜಟ್ಟಿಗ ಸಭಾ ಭವನದಲ್ಲಿ ಇಲ್ಲಿನ ಶ್ರೀ ಗ್ರಾಮ ಜಟ್ಟಿಗ ದೇವಸ್ಥಾನದ ಶ್ರೀ ಗ್ರಾಮ ಜಟ್ಟಿಗ ಸೇವಾ ಸಮಿತಿ ಹಾಗೂ ಶ್ರೀ ಜಟ್ಟಿಗೇಶ್ವರ ಭಜನಾ ಮಂಡಳಿ ಇದರ ಸುವರ್ಣ ಮಹೋತ್ಸವ ೨೦೨೪-೨೫ ಸಮಾರಂಭವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ರಾಘವೇಂದ್ರ ಖಾರ್ವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿದ್ದ ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಸದಾಶಿವ ಖಾರ್ವಿ ಮತ್ತು ಉದ್ಯಮಿ ಉಮೇಶ್ ಎಲ್.ಮೇಸ್ತ ಗುಜ್ಜಾಡಿ ಅವರು ಸುವರ್ಣ ಮಹೋತ್ಸವದ ಲಾಂಛನ ಬಿಡುಗಡೆಗೊಳಿಸಿ ಶುಭಾಶಂಸನೆಗೈದರು. ದೇವಸ್ಥಾನದ ಆಡಳಿತ ಮೊಕ್ತೇಸರ ದೇವರಾಯ ಪಟೇಲ್, ಸುವರ್ಣ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಶಿವಪ್ಪ ಖಾರ್ವಿ, ಶ್ರೀ ಗ್ರಾಮ ಜಟ್ಟಿಗ ಸೇವಾ ಸಮಿತಿ ಅಧ್ಯಕ್ಷ ಜಿ.ರಾಮಪ್ಪ ಖಾರ್ವಿ ಉಪಸ್ಥಿತರಿದ್ದರು.

ಸುವರ್ಣ ಮಹೋತ್ಸವ ಸಮಿತಿ ಉಪಾಧ್ಯಕ್ಷ ಸುರೇಂದ್ರ ಡಿ.ಖಾರ್ವಿ ಸ್ವಾಗತಿಸಿದರು. ಶ್ರೀ ಜಟ್ಟಿಗೇಶ್ವರ ಭಜನಾ ಮಂಡಳಿ ಅಧ್ಯಕ್ಷ ಮಡಿಕಲ್ ಜನಾರ್ಧನ ಖಾರ್ವಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಿ.ಎನ್.ಸತೀಶ ಖಾರ್ವಿ ಅತಿಥಿಗಳನ್ನು ಪರಿಚಯಿಸಿದರು. ಮಂಜುನಾಥ ಖಾರ್ವಿ ಕಾರ್ಯಕ್ರಮ ನಿರ್ವಹಿಸಿದರು. ಸುವರ್ಣ ಮಹೋತ್ಸವ ಸಮಿತಿ ಕಾರ್ಯದರ್ಶಿ ಮಂಜುನಾಥ ವಿ.ಖಾರ್ವಿ ವಂದಿಸಿದರು.

 

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!