spot_img
Saturday, December 7, 2024
spot_img

ಸಿಎಂ ಸಿದ್ದರಾಮಯ್ಯ ಭರವಸೆಯ ಬೆನ್ನಲ್ಲೇ ಕೆಎಆರ್‌ಡಿ ಮುಷ್ಕರ ಅಂತ್ಯ

ಜನಪ್ರತಿನಿಧಿ (ಬೆಂಗಳೂರು) : ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ಬೆನ್ನಲ್ಲೇ ಕರ್ನಾಟಕ ಸ್ಥಾನಿಕ ವೈದ್ಯರ ಸಂಘ (ಕೆಎಆರ್‌ಡಿ) ಮುಷ್ಕರವನ್ನು ಹಿಂದಕ್ಕೆ ಪಡೆದುಕೊಂಡಿದೆ.

ವೈದ್ಯಕೀಯ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಥಾನಿಕ ವೈದ್ಯರ ಶಿಷ್ಯವೇತನ ಹೆಚ್ಚಳಕ್ಕೆ ಆಗ್ರಹಿಸಿ ಕರ್ನಾಟಕ ಸ್ಥಾನಿಕ ವೈದ್ಯರ ಸಂಘವು ಕಳೆದ 10 ದಿನಗಳಿಂದ ಪ್ರತಿಭಟನೆ ನಡೆಸುತ್ತಿತ್ತು.

ಬುಧವಾರ ಬಾಗಲಕೋಟೆಗೆ ತೆರಳುವುದಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂನಲ್ಲಿ ತಮ್ಮ ನಿವಾಸದಲ್ಲಿ ಕೆಎಆರ್‌ಡಿ ಸದಸ್ಯರನ್ನು ಭೇಟಿ ಮಾಡಿದರು.

ಈ ವೈದ್ಯರು, ವಾರಕ್ಕೆ 70-80 ಗಂಟೆಗಳ ಕಾಲ ಕೆಲಸ ಮಾಡಿದರೂ ನಮ್ಮಗಳಿಕೆ ಕಡಿಮೆಯಿದೆ ಎಂದು ಅಳಲು ತೋಡಿಕೊಂಡರು. ಶಿಷ್ಯವೇತನ ಹೆಚ್ಚಳಕ್ಕೆ ಮನವ ಮಾಡಿಕೊಂಡರು.

ಮಾತುಕತೆ ಬಳಿಕ ಮುಖ್ಯಮಂತ್ರಿಗಳು ಸ್ನಾತಕೋತ್ತರ ಪದವೀಧರರು ಮತ್ತು ಸೂಪರ್-ಸ್ಪೆಷಾಲಿಟಿ ನಿವಾಸಿ ವೈದ್ಯರಿಗೆ ಶಿಷ್ಯವೇತನವನ್ನು ಶೇ.25ರಷ್ಟು ಹೆಚ್ಚಳ ಮಾಡಲಾಗುವುದು ಎಂದು ಭರವಸೆ ನೀಡಿದರು.

ಮುಖ್ಯಮಂತ್ರಿಗಳಿಂದ ಇನ್ನೂ ಅಧಿಕೃತ ಆದೇಶಗಳು ಬಂದಲ್ಲ. ಆದರೆ, ಭರವಸೆ ಬೆನ್ನಲ್ಲೇ ಮುಷ್ಕರ ವಾಪಸ್ ಪಡೆಯಲಾಗಿದೆ. ಇಂದಿನಿಂದ ಕೆಎಆರ್‌ಡಿ ಸದಸ್ಯರು ತಮ್ಮ ತಮ್ಮ ಸೇವೆಗಳನ್ನು ಪುನರಾರಂಭಿಸುತ್ತಾರೆಂದು ಕೆಎಆರ್‌ಡಿ ಹೇಳಿದೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!