Wednesday, September 11, 2024

ಬಗ್ವಾಡಿ ಮಹಿಷಾಸುರಮರ್ದಿನಿ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಪೂಜೆ | ಹರಿದು ಬಂದ ಭಕ್ತ ಸಂದೋಹ

ಕುಂದಾಪುರ, ಆ.16: (ಜನಪ್ರತಿನಿಧಿ ವಾರ್ತೆ) ಬಗ್ವಾಡಿ ಶ್ರೀ ಮಹಿಷಾಸುರಮರ್ದಿನಿ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ ಶುಕ್ರವಾರ ನಡೆಯಿತು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ದೇವಸ್ಥಾನಕ್ಕೆ ಆಗಮಿಸಿ ಶ್ರೀ ವರಮಹಾಲಕ್ಷ್ಮೀ, ಶೀ ಮಹಿಷಾಸುರಮರ್ದಿನಿಗೆ ಪೂಜೆ ಸಲ್ಲಿಸಿದರು. ಬೆಳಿಗ್ಗೆಯಿಂದ ಹೋಮ, ಹವನಾಧಿಗಳು ಶ್ರೀ ಕ್ಷೇತ್ರದಲ್ಲಿ ನಡೆಯಿತು. ಸಾಕಷ್ಟು ಸಂಖ್ಯೆಯಲ್ಲಿ ಮಹಿಳೆಯರು ಸಾಮೂಹಿಕ ವರಮಹಾಲಕ್ಷ್ಮೀ ವ್ರತದಲ್ಲಿ ಪಾಲ್ಗೊಂಡರು. 108 ಬಾರಿ ವರಮಹಾಲಕ್ಷ್ಮೀಯ ನಾಮಾವಳಿ ಪಠಿಸಿ ಕುಂಕುಮಾರ್ಚನೆ ಮಾಡಲಾಯಿತು.

ಬಳಿಕ ಮಹಾ ಮಂಗಳಾರತಿ ನಡೆಯಿತು. ನಂತರ ವರವಮಹಾಲಕ್ಷ್ಮೀವೃತ ಮಹಾತ್ಮೆಯನ್ನು ತಂತ್ರಿಗಳು ಭಕ್ತಾಧಿಗಳಿಗೆ ತಿಳಿಯ ಪಡಿಸಿದರು. ಪುರಾಣದಲ್ಲಿ ಚಾರುಮತಿಗೆ ಸಾಕ್ಷಾತ್ ಮಹಾಲಕ್ಷ್ಮೀಯೇ ನಿರ್ದೇಶಿಸಿ ಚಾರುಮತಿಯ ದಾರೀದ್ರ್ಯ ನಿವಾರಣೆಯಾದ ಪುಣ್ಯಕಥೆಯನ್ನು ಶಿವನೇ ಪಾರ್ವತಿಗೆ ಹೇಳುತ್ತಾನೆ. ಶ್ರದ್ದಾ ಭಕ್ತಿಯ ವರಮಹಾಲಕ್ಷ್ಮೀ ಪೂಜೆಯಿಂದ ದಾರೀದ್ರ್ಯಗಳು ದೂರಾಗುತ್ತದೆ ಎಂದರು.

ನಂತರ ಶ್ರೀ ಮಹಿಷಾಸುರ ಮರ್ದಿನಿಗೆ ಸಾಮೂಹಿಕ ತುಪ್ಪದ ದೀಪ ಸೇವೆ ನಡೆಯಿತು. ನೂರಾರು ಭಕ್ತಾದಿಗಳು ಶ್ರೀ ದೇವಿಗೆ ತುಪ್ಪದ ದೀಪ ಬೆಳಗಿ ಪುನೀತರಾದರು.

ಪ್ರವೀಣ ಗಂಗೊಳ್ಳಿ ಸಂಪಾದಕತ್ವದ ಮಹಿಷಾಸುರಮರ್ದಿನಿ ಮಾಸ ಪತ್ರಿಕೆ ನೂತನ ಸಂಚಿಕೆಯನ್ನು ಭಕ್ತಾಭಿಮಾನಿಗಳ ಸಮ್ಮುಖದಲ್ಲಿ ಅನಾವರಣಗೊಳಿಸಲಾಯಿತು. ಅನ್ನದಾನ ನಿಧಿಗೆ ನೆರವು ನೀಡಿದ ದಾನಿಗಳನ್ನು ಅಭಿನಂದಿಸಲಾಯಿತು. ಮಹಾ ಅನ್ನಸಂತರ್ಪಣೆ ನಡೆಯಿತು.

ಹರಿದು ಬಂದ ಭಕ್ತ ಸಂದೋಹ:
ಶ್ರೀ ಕ್ಷೇತ್ರ ಬಗ್ವಾಡಿಗೆ ದಿನದಿಂದ ದಿನಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ದ್ವಿಗುಣವಾಗುತ್ತಿದ್ದು, ಈ ಬಾರಿಯ ವರಮಹಾಲಕ್ಷ್ಮೀ ಪೂಜೆಗೆ ಭಕ್ತಾದಿಗಳ ಸಂದೋಹವೇ ಹರಿದು ಬಂತು. ದೊಡ್ಡ ಸಂಖ್ಯೆಯಲ್ಲಿ ಭಕ್ತರು ಶ್ರೀ ಕ್ಷೇತ್ರಕ್ಕೆ ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡರು. ಬೇರೆ ಬೇರೆ ಭಾಗದಿಂದಲೂ ಭಕ್ತರು ಬಗ್ವಾಡಿಗೆ ಬರುತ್ತಿರುವುದು ಕಾಣಿಸಿತು.

ಕಾರ್ಯಕ್ರಮದಲ್ಲಿ ಮೊಗವೀರ ಮಹಾಜನ ಸೇವಾ ಸಂಘ ಕುಂದಾಪುರ ಶಾಖಾಧ್ಯಕ್ಷ ಉದಯ ಕುಮಾರ್ ಹಟ್ಟಿಯಂಗಡಿ, ಕಾರ್ಯದರ್ಶಿ ಪ್ರಭಾಕರ ಮೊಗವೀರ ಸೇನಾಪುರ, ಉಪಾಧ್ಯಕ್ಷರಾದ ಸದಾನಂದ ಬಳ್ಕೂರು, ನಾಗೇಶ ಬಿ ಕಾಂಚನ್, ಜಗದೀಶ ಮೇಸ್ತ್ರಿ, ಕೋಶಾಧಿಕಾರಿ ಸತೀಶ ಎಂ ನಾಯ್ಕ್, ಆಡಳಿತ ಸಮಿತಿ ಸದಸ್ಯರು, ಮಾಜಿ ಅಧ್ಯಕ್ಷರಾದ ಎಂ.ಎಂ.ಸುವರ್ಣ, ಮೊಗವೀರ ಸ್ತ್ರೀಶಕ್ತಿ ಅಧ್ಯಕ್ಷೆ ಶ್ಯಾಮಲ ಜಿ.ಚಂದನ್, ಹಲ್ಸನಾಡು ಜಗದೀಶಯ್ಯ ಅವರ ಪತ್ನಿ ಮಕ್ಕಳು, ಮೊಗವೀರ ಯುವ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಮೊಗವೀರ ಸ್ತ್ರೀ ಶಕ್ತಿಯ ಪದಾಧಿಕಾರಿಗಳು, ಗುರಿಕಾರರು ಉಪಸ್ಥಿತರಿದ್ದರು.

ವೇ.ಮೂ. ಗಿರೀಶ್ ಭಟ್ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು. ಬಳಿಕ ಭಜನ ಕಾರ್ಯಕ್ರಮ ನಡೆಯಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!