Monday, September 9, 2024

ಗುಣಮಟ್ಟದ ಶಿಕ್ಷಣ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಾಧನೆಯ ಮೂಲಕ ರಾಜ್ಯದ ಗಮನ ಸೆಳೆದ ಸುಣ್ಣಾರಿಯ ಎಕ್ಸಲೆಂಟ್ ಶಿಕ್ಷಣ ಸಂಸ್ಥೆ

ಜನಪ್ರತಿನಿಧಿ (ಕುಂದಾಪುರ, ಆ.10) : ಕುಂದಾಪುರ ಸಮೀಪದ ಸುಣ್ಣಾರಿಯಲ್ಲಿ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿ ಇರಿಸಿಕೊಂಡು 2012ರಂದು ಎಕ್ಸಲೆಂಟ್ ವಿದ್ಯಾಸಂಸ್ಥೆ ಸ್ಥಾಪನೆಯಾಯಿತು. ಗುಣಮಟ್ಟದ ಶಿಕ್ಷಣ ಕ್ರಮ, ಸ್ಪರ್ಧಾತ್ಮಕ ಪರೀಕ್ಷೆ, ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಅಮೋಘ ಸಾಧನೆ ಮಾಡುವ ಮೂಲಕ ಸಂಸ್ಥೆ ಕರ್ನಾಟಕದಾದ್ಯಂತ ಹೆಸರು ಗಳಿಸಿ ಪ್ರಸಿದ್ದ ವಿದ್ಯಾಸಂಸ್ಥೆಯಾಗಿ ಬೆಳೆದಿದೆ ಎಂದು ಎಂ.ಎಂ. ಹೆಗ್ಡೆ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಎಂ.ಮಹೇಶ ಹೆಗ್ಡೆ ಹೇಳಿದರು.

೨೦೧೨ರಲ್ಲಿ ಬೆರಳೆಣಿಕೆಯ ವಿದ್ಯಾರ್ಥಿಗಳಿಂದ ಸ್ಥಾಪನೆಗೊಂಡ ಈ ವಿದ್ಯಾಸಂಸ್ಥೆ ಈಗ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಪ್ರಸ್ತುತ ಕಾಲಘಟ್ಟಕ್ಕೆ ಅನುಗುಣವಾಗಿ ಈ ವಿದ್ಯಾಸಂಸ್ಥೆಯಲ್ಲಿ ವಿಜ್ಞಾನ’ ಹಾಗೂ ವಾಣಿಜ್ಯ’ ವಿಭಾಗಗಳಿದ್ದು ಅವುಗಳಲ್ಲಿ ವಿದ್ಯಾರ್ಥಿಗಳಿಗೆ ಮುಂದಿನ ನೀಟ್, ಜೆ‌ಇ‌ಇ, ಸಿ‌ಇಟಿ, ಎನ್.ಡಿ.ಎ., ಸಿ.ಎ, ಸಿ.ಎಸ್ ಪರೀಕ್ಷೆಗಳಿಗೆ ಬೇಕಾದ ತರಬೇತಿಯನ್ನು ನುರಿತ ಉಪನ್ಯಾಸಕರಿಂದ ತರಬೇತಿ ನೀಡುವುದಲ್ಲದೇ ಆಂಧ್ರದ ಪ್ರತಿಷ್ಟಿತ ಕಾಲೇಜಿನ ಅನುಭವಿ ಉಪನ್ಯಾಸಕರು ಹಾಗೂ ಕರ್ನಾಟಕದ ಪ್ರತಿಷ್ಟಿತ ಕಾಲೇಜಿನ ಅನುಭವಿ ಉಪನ್ಯಾಸಕರಿಂದ ತರಬೇತಿ ನೀಡಿ ಉತ್ತಮ ರ್‍ಯಾಂಕ್ ಪಡೆಯಲು ಎಕ್ಸಲೆಂಟ್ ಸೂರಿನಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದರು.

ಪರಿಣಾಮಕಾರಿ ತರಬೇತಿಯ ಕಾರಣದಿಂದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಲವಾರು ರ್‍ಯಾಂಕನ್ನು ಪಡೆದು ಜೆ‌ಇ‌ಇ ಅಡ್ವಾನ್ಸ್ ಹಾಗೂ ಸಿ.ಎ ಫೌಂಡೇಶನ್ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುವುದು ಸಂಸ್ಥೆಯ ಸಾಧನೆಯಾಗಿದೆ. ಅಷ್ಟೇ ಅಲ್ಲದೇ ನೀಟ್, ಜೆ‌ಇ‌ಇ ಮೈನ್ಸ್, ಸಿ‌ಇಟಿ ಹಾಗೂ ಸಿ.ಎಸ್ ನಲ್ಲಿ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿದೆ. ಪ್ರತಿ ವಾರ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎಲ್ಲ ಪಿಯುಸಿ ವಿದ್ಯಾರ್ಥಿಗಳಿಗೆ ನಡೆಸುತ್ತಾ ಬಂದಿದೆ. ಈ ರೀತಿ ಫಲಿತಾಂಶ ಬರಲು ಕಾರಣ ನಮ್ಮ ಇಂಟಿಗ್ರೇಟೆಡ್ ಮಾದರಿಯಲ್ಲಿ ನಡೆಸುತ್ತಿರುವುದು. ಜೆ‌ಇ‌ಇ ಅಡ್ವಾನ್ಸ್ ಪರೀಕ್ಷೆಯಲ್ಲಿ ನಮ್ಮ ಸಂಸ್ಥೆಯ ವಿದ್ಯಾರ್ಥಿ ಚಿರಾಗ್ ವಿನಾಯಕ ಮಹಾಲೆ ತೇರ್ಗಡೆ ಹೊಂದುವ ಮೂಲಕ ಪ್ರತಿಷ್ಠಿತ ಗಾಂಧಿನಗರ ಐ‌ಐಟಿ, ಗುಜರಾತ್‌ನಲ್ಲಿ ಉಚಿತ ಸೀಟ್ ಪಡೆದು ವ್ಯಾಸಂಗ ಮಾಡುತ್ತಿದ್ದು, ಇನ್ನೋರ್ವ ವಿದ್ಯಾರ್ಥಿನಿ ನಿಶಾ ಜೆ‌ಇ‌ಇ ಅಡ್ವಾನ್ಸ್ ನಲ್ಲಿ ತೇರ್ಗಡೆ ಹೊಂದಿ ಹೈದ್ರಾಬಾದ್ ಐ‌ಐಟಿಯಲ್ಲಿ ಉಚಿತ ವ್ಯಾಸಂಗ ಮಾಡುತ್ತಿರುವುದು ಎಕ್ಸಲೆಂಟ್ ನ ಗರಿಮೆಯಾಗಿದೆ. ಈ ರೀತಿಯಲ್ಲಿ ಎಕ್ಸಲೆಂಟ್ ಪದವಿಪೂರ್ವ ಕಾಲೇಜು, ಸುಣ್ಣಾರಿ ಉಡುಪಿ ಜಿಲ್ಲೆಗೆ ಪ್ರಥಮವಾಗಿ ಮೂಡಿ ಬಂದಿದೆ. ಈ ಫಲಿತಾಂಶ ಕೊಟ್ಟ ಉಪನ್ಯಾಸಕರ ತಂಡದ ಮಾರ್ಗದರ್ಶನ ಮುಂದಿನ ಎಲ್ಲಾ ಶೈಕ್ಷಣಿಕ ವರ್ಷಗಳಲ್ಲಿ ವಿದ್ಯಾರ್ಥಿಗಳಿಗೂ ಸಿಗಲಿದೆ ಎಂದರು.

ಎಕ್ಸಲೆಂಟ್ ಕೇವಲ ಪರಿಸರದ ವಿದ್ಯಾರ್ಥಿಗಳು ಮಾತ್ರವಲ್ಲದೇ ಕರ್ನಾಟಕ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದಲೂ ಹಾಗೂ ಬೇರೆ ಬೇರೆ ರಾಜ್ಯದಿಂದಲೂ ವಿದ್ಯಾರ್ಥಿಗಳೂ ವ್ಯಾಸಂಗ ಮಾಡುತ್ತಿದ್ದಾರೆ. ದೂರದ ಮಕ್ಕಳಿಗೆ ಅನುಕೂಲವಾಗುವಂತೆ ಅತ್ಯಂತ ಸುಸಜ್ಜಿತವಾದ ಬಾಲಕ ಹಾಗೂ ಬಾಲಕಿಯರ ವಸತಿನಿಲಯವನ್ನು ಪ್ರತ್ಯೇಕವಾಗಿರುವ ಕಟ್ಟಡದಲ್ಲಿ ಸ್ಥಾಪಿಸಲಾಗಿದೆ. ಅತ್ಯಂತ ಸ್ವಚ್ಛತೆಯಿಂದ ಕೂಡಿರುವ ಸುಂದರ ವಸತಿ ನಿಲಯದ ಜೊತೆಗೆ ಊಟೋಪಚಾರವು ಸಹ ಅವರ ಮನೆಯ ಊಟದಂತೆ ಆರೋಗ್ಯದ ಹಿತದೃಷ್ಟಿಯಿಂದ ಮನೆ ಊಟದ ರೀತಿಯಲ್ಲೇ ಒದಗಿಸಲಾಗುತ್ತದೆ. ವಸತಿನಿಲಯದ ಮಕ್ಕಳಿಗೆ ಬೇಕಾಗುವ ಎಲ್ಲಾ ರೀತಿಯ ವಿಶೇಷ ತರಗತಿಗಳನ್ನು ನುರಿತ ವಿದ್ಯಾರ್ಥಿನಿಲಯದ ಉಪನ್ಯಾಸಕರಿಂದ ಮಾಡಿಸಲಾಗುತ್ತದೆ. ವಸತಿ ನಿಲಯದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕೆ ಬೇಕಾಗುವ ಬಿಸಿನೀರಿನ ವ್ಯವಸ್ಥೆಯೂ ಇದೆ. ಅವರಿಗೆ ಅಗತ್ಯವಾದ ಯೋಗ ಹಾಗೂ ಜೀವನದ ಸಂಸ್ಕಾರವನ್ನು ಸಹ ಕಲಿಸಲಾಗುತ್ತದೆ ಎಂದರು.

ವಸತಿ ನಿಲಯದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಬೇಕಾದ ಕ್ರೀಡೆಗೆ ಸಂಬಂಧಪಟ್ಟ ವಾಲಿಬಾಲ್, ತ್ರೋಬಾಲ್, ಕೇರಂ, ಚೆಸ್, ಶಟಲ್ ಬ್ಯಾಡ್ಮಿಂಟನ್ ಇತ್ಯಾದಿ ಆಟಗಳ ತರಬೇತಿಯು ದೈಹಿಕ ಶಿಕ್ಷಕರ ನೆರವಿನಲ್ಲಿ ಮಳೆಗಾಲದ ನಂತರ ಸತತವಾಗಿ ನೀಡಲಾಗುತ್ತಿದೆ. ಎಕ್ಸಲೆಂಟ್ ವಿದ್ಯಾರ್ಥಿಗಳು ಕ್ರೀಡೆಯಲ್ಲಿಯು ತಾಲ್ಲೂಕು ಜಿಲ್ಲೆ, ರಾಜ್ಯಗಳಲ್ಲಿಯೂ ತಮ್ಮ ಛಾಪನ್ನು ಮೂಡಿಸಿದ್ದಾರೆ ಎಂದರು.

ಇಲ್ಲಿ ಕೇವಲ ಪದವಿ ಪೂರ್ವ ಕಾಲೇಜು ಮಾತ್ರವಲ್ಲದೇ ೬ರಿಂದ ೧೦ನೇ ತರಗತಿಯ ಪ್ರೌಢಶಾಲೆಯು ಸಹ ಇರುವುದರಿಂದ ಉತ್ತಮ ಅನುಭವಿ ಶಿಕ್ಷಕರಿಂದ ತರಗತಿಗಳು ನಡೆಯುತ್ತ ಬಂದಿದೆ. ನಮ್ಮಲ್ಲಿ ೬ನೇ ತರಗತಿಯಿಂದ ಐ‌ಐಟಿ ಫೌಂಡೇಶನ್ ಕೋಚಿಂಗ್ ವಿದ್ಯಾರ್ಥಿಗಳ ಮುಂದಿನ ಭವಿಷ್ಯತ್ತಿಗೆ ಅನುಕೂಲವಾಗಲೂ ನೀಟ್, ಸಿ‌ಇಟಿ, ಜೆ‌ಇ‌ಇ ತರಬೇತಿ ನೀಡುವ ಅನುಭವಿ ತರಬೇತುದಾರರಿಂದ ಪ್ರತ್ಯೇಕ್ಷವಾಗಿ ನೀಡಲಾಗುತ್ತಿದೆ. ಅಷ್ಟೇ ಅಲ್ಲದೇ ನಮ್ಮ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿಯೇ ಪ್ರತಿ ವಾರದ ಕೊನೆಯ ಶನಿವಾರದಂದು ಇಸಿ‌ಎ ಎನ್ನುವ ಸಾಂಸ್ಕೃತಿಕ ಹಾಗೂ ಚಟುವಟಿಕೆಗಳಾದ ಯಕ್ಷಗಾನ, ಚಂಡೆ, ಕರಾಟೆ, ಚೆಸ್, ಭರತನಾಟ್ಯ, ವೇದ ಗಣಿತ, ಚಿತ್ರಕಲೆ ಮೊದಲಾದ ವಿಷಯಗಳನ್ನು ತಜ್ಞ ಗುರುಗಳಿಂದ ತರಬೇತಿ ಕೊಡಿಸಲಾಗುತ್ತದೆ ಎಂದರು.

ಮಕ್ಕಳಲ್ಲಿ ಭಾಷಾ ಹಾಗೂ ಸಾಂಸ್ಕೃತಿಕ ಬೆಳವಣಿಗೆಗೆಗಾಗಿ ಪ್ರತಿಭಾಕಾರಂಜಿಯ ಎಲ್ಲಾ ವಿಭಾಗದಲ್ಲಿ ಭಾಗವಹಿಸಲು ತಯಾರಿ ನಡೆಸಿ ಅವರನ್ನು ತಾಲ್ಲೂಕು ಜಿಲ್ಲೆ ರಾಜ್ಯದಲ್ಲಿಯೂ ಗುರುತಿಸುವ ಕಾರ್ಯ ಸಂಸ್ಥೆ ಮಾಡಿದೆ. ಈಗ ಪದವಿ ಪೂರ್ವ ಕಾಲೇಜು ಹಾಗೂ ಹೈಸ್ಕೂಲು ಜೊತೆಯಲ್ಲೆ ಇದ್ದು ಮುಂದಿನ ಶೈಕ್ಷಣಿಕ ವರ್ಷದಿಂದ ಇದೇ ಕ್ಯಾಂಪಸ್‌ನಲ್ಲಿ ಪ್ರತ್ಯೇಕವಾಗಿ ಒಂದು ಸುಂದರ ಪ್ರೌಢ ಶಾಲೆಯ ಕಟ್ಟಡ ನಿರ್ಮಾಣ ಮಾಡಲಾಗುವುದು. ಈ ಕಟ್ಟಡವು ಹೊಸವಿನ್ಯಾಸದೊಂದಿಗೆ ಸ್ಮಾರ್ಟ್ ರೂಮ್ ಅಳವಡಿಕೆ ಒಳಾಂಗಣ ಶಟಲ್ ಬ್ಯಾಡ್ಮಿಂಟನ್ ಅಂಕಣ ಹಾಗೂ ವಿನೂತನ ಮಾದರಿಯ ಸ್ವಿಮಿಂಗ್ ಪೂಲ್‌ನ್ನು ನಿರ್ಮಾಣ ಮಾಡಲಾಗುವುದು ಎಂದರು.

ಎಕ್ಸಲೆಂಟ್ ವಿಧ್ಯಾಸಂಸ್ಥೆಯು ಶೈಕ್ಷಣಿಕವಾಗಿ ಹೇಗೆ ಹೆಸರನ್ನು ಗಳಿಸಿದೆಯೋ ಅದೇ ರೀತಿ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಸಹ ರಾಜ್ಯಾದ್ಯಾಂತ ಕೀರ್ತಿಯ ಪತಾಕೆಯನ್ನು ಸಾರಿದೆ. ಸಾಂಸ್ಕೃತಿಕ ಚಟುವಟಿಕೆಯ ಮುಖ್ಯ ಭಾಗವಾದ ಪ್ರತಿಭಾ ಕಾರಂಜಿ” ಯನ್ನು ಇಲ್ಲಿ ಮಾಡುವುದಲ್ಲದೇ, ಈ ಪ್ರತಿಭಾ ಕಾರಂಜಿಯಲ್ಲಿ ಕನ್ನಡದ ಚರ್ಚಾಸ್ಪರ್ಧೆಯಲ್ಲಿ ಮನೀಷ್ ಶೆಟ್ಟಿ ರಾಜ್ಯಕ್ಕೆ ಆಯ್ಕೆಯಾಗಿದ್ದಾರೆ. ಅಷ್ಟೇ ಅಲ್ಲದೇ ವಸತಿ ನಿಲಯದ ಮಕ್ಕಳ ಅಭಿಲಾಷೆಯಲ್ಲಾ ಕಾಲೇಜಿನ ನಾನಾ ರೀತಿಯ ಹಬ್ಬಗಳನ್ನು ಬಹಳ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಪ್ರತಿವರ್ಷವು ಗುರುವಂದನ ಕಾರ್ಯಕ್ರಮ, ದೀಪಾವಳಿ, ವರಮಹಾಲಕ್ಷ್ಮೀ ಪೂಜೆ, ಕ್ರಿಸ್ ಮಸ್, ಸ್ವಾತಂತ್ರ್ಯ ದಿನಾಚರಣೆ, ಮಕ್ಕಳ ದಿನಾಚರಣೆ, ಶಿಕ್ಷಕರ ದಿನಾಚರಣೆ, ವನಮಹೋತ್ಸವವನ್ನು ಆಚರಿಸುವ ಮೂಲಕ ಮಕ್ಕಳಲ್ಲಿ ಭಾವೈಕ್ಯತೆ ಹಾಗೂ ಸಂಸ್ಕಾರವನ್ನು ರೂಪಿಸುವಲ್ಲಿ ಮಹತ್ತರದ ಕೆಲಸ ಮಾಡುತ್ತಿದೆ ಎಂದರು.

ಸುದ್ಧಿಗೋಷ್ಠಿಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ನಾಗರಾಜ ಶೆಟ್ಟಿ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!