Monday, September 9, 2024

ಮರ್ಯಾದೆ ಇದ್ದರೇ ಸುನೀಲ್‌ ಕುಮಾರ್‌ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿ : ಉದಯ್‌ ಕುಮಾರ್‌ ಶೆಟ್ಟಿ ಮುನಿಯಾಲು

ಜನಪ್ರತಿನಿಧಿ (ಉಡುಪಿ) : ಮಾನ ಮರ್ಯಾದೆ ಇದ್ದರೇ ಸುನೀಲ್‌ ಕುಮಾರ್‌ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿ. ದೇವರ ಹೆಸರಿನಲ್ಲಿ ಧಾರ್ಮಿಕತೆಗೆ ಮೋಸ ಮಾಡಬಾರದು. ಜನಗಳ ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಪರಶುರಾಮ ಥೀಂ ಪಾರ್ಕ್‌ ನಿರ್ಮಾಣ ಮಾಡಿದ್ದಾರೆ ಎಂದು ಕಾರ್ಕಳ ಕಾಂಗ್ರೆಸ್‌ ಮುಖಂಡ ಉದಯ್‌ ಕುಮಾರ್‌ ಶೆಟ್ಟಿ ಮುನಿಯಾಲು ಆಕ್ರೋಶ ಹೊರ ಹಾಕಿದ್ದಾರೆ.

ಇಂದು(ಸೋಮವಾರ) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುನಿಯಾಲು ಅವರು, ನಕಲಿ ಪರಶುರಾಮ ಮೂರ್ತಿ ಸೃಷ್ಟಿಸಿ, ಜನರಿಗೆ ಸುಳ್ಳು ಹೇಳಿ ಸುನೀಲ್‌ ಕುಮಾರ್‌ ಶಾಸಕನಾಗಿದ್ದಾರೆ. ನಮ್ಮ ಒಂದು ವರ್ಷದ ಹೋರಾಟಕ್ಕೆ ಒಂದು ಹಂತದ ಜಯ ಸಿಕ್ಕಿದೆ. ಈಗ ನಡೆಯುತ್ತಿರುವ ಬೆಳವಣಿಗೆ ನೋಡಿದರೇ ಮನಸ್ಸಿಗೆ ನೋವಾಗುತ್ತದೆ. ಪರಶುರಾಮನ ಮೂರ್ತಿಯ ಬಿಡಿ ಭಾಗಗಳನ್ನು ಬೆಂಗಳೂರಿನಲ್ಲಿ ಪೊಲೀಸರು ಜಪ್ತಿ ಮಾಡಿದ್ದಾರೆ. ಈಗ ಬೆಟ್ಟದಲ್ಲಿ ಇರುವ ಅರ್ಧ ಪರಶುರಾಮನ ಮೂರ್ತಿ ಕಂಚಿನದ್ದು ಎಂದು ಹೇಳುವುದು ಇವರೇ (ಬಿಜೆಪಿ) ಆದಮೇಲೆ ಮತ್ತೆ ಎರಡು ಕಾಲುಗಳನ್ನು ತಯಾರಿಸಿದ್ದು ಯಾಕೆ ಎಂದು ತಿಳಿಯುತ್ತಿಲ್ಲ. ಬೆಟ್ಟದಲ್ಲಿ ಇರುವ ಅರ್ಧಮೂರ್ತಿ ನಕಲಿ ಎಂದು ಇವರೇ ಹೇಳಿದ ಹಾಗಾಯ್ತಲ್ಲಬೇ ಎಂದು ಅವರು ಪ್ರಶ್ನಿಸಿದ್ದಾರೆ.

ಕಂಚಿನ ಪ್ರತಿಮೆಗಿಂತ ಹೆಚ್ಚು ಪರಶುರಾಮ ಥೀಂ ಪಾರ್ಕ್‌ ಉದ್ಘಾಟನಾ ಕಾರ್ಯಕ್ರಮಕ್ಕೆ ಖರ್ಚು ಮಾಡಿದ್ದಾರೆ. ಕಾನೂನನ್ನು ಉಲ್ಲಂಘಿಸಿ ಗೋಮಾಳದಲ್ಲಿ ಥೀಂ ಪಾರ್ಕ್‌ ನಿರ್ಮಾಣ ಮಾಡಿದ್ದಾರೆ. ಹಿಂದೂ ಧರ್ಮದ ಧಾರಮಿಕ ಭಾವನೆಗೆ ನಕಲಿ ಪರಶುರಾಮನ ಮೂರ್ತಿ ಸ್ಥಾಪಿಸುವುದರ ಮೂಲಕ ಧಕ್ಕೆ ಮಾಡಿದ್ದಾರೆ ಎಂದು ಅವರು ಕಿಡಿ ಕಾರಿದರು.

ಮಹಜರು ಸಂದರ್ಭದಲ್ಲಿ ಪೊಲೀಸರು ಕರೆದಿದ್ದಾರೆ, ನಾನು ಹೋಗಿದ್ದೇನೆ. ಕೃಷ್ಣ ನಾಯ್ಕ್‌ ಆರೋಪ ಸುಳ್ಳು. ನಾನು ಯಾವ ಮುಸ್ಲೀಮರನ್ನು ನನ್ನೊಂದಿಗೆ ಕರೆದುಕೊಂಡು ಹೋಗಿಲ್ಲ. ಕಾನೂನು ನಮ್ಮ ಹೋರಾಟಕ್ಕೆ ಜಯ ತಂದುಕೊಡುತ್ತದೆ ಎಂಬ ನಂಬಿಕೆ ಇದೆ ಎಂದು ಅವರು ಹೇಳಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!