spot_img
Saturday, December 7, 2024
spot_img

ಪಂಚಗಂಗಾವಳಿ ನದಿ ಪಾತ್ರದಲ್ಲಿ ಹೂಳೆತ್ತುವಂತೆ ಸರ್ಕಾರಕ್ಕೆ ಮಂಜುನಾಥ ಭಂಡಾರಿ ಮನವಿ

ಕುಂದಾಪುರ ಕಸಬಾ ಹೋಬಳಿಯ ಕುಂದಾಪುರ ಪುರಸಭಾ ವ್ಯಾಪ್ತಿಯ ಉತ್ತರ ದಿಕ್ಕಿನಲ್ಲಿರುವ ನದಿ ಪಾತ್ರದಲ್ಲಿ ಹೂಳು ತುಂಬಿದ್ದು ಹೂಳೆತ್ತಲು ಕ್ರಮ ಕೈಗೊಳ್ಳುವಂತೆ ಮೀನುಗಾರಿಕಾ ಸಚಿವ ಮಾಂಕಾಳ ವೈದ್ಯ ಅವರಿಗೆ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮನವಿ ಸಲ್ಲಿಸಿದ್ದಾರೆ.

ಈ ಭಾಗಲ್ಲಿ ಸುಮಾರು 500ಕ್ಕೂ ಹೆಚ್ಚು ಕುಟುಂಬಗಳು ಸುಮಾರು ವರ್ಷಗಳಿಂದ ತಮ್ಮ ಬದುಕನ್ನು ಕಟ್ಟಿಕೊಂಡು ಬರುತ್ತಿದ್ದಾರೆ. ಈ ಕುಟುಂಬಗಳು ಮೀನುಗಾರಿಕೆ, ಚಿಪ್ಪು. ಹಕ್ಕುವಂತದ್ದು, ಮೀನು ಸಾಕಾಣಿಕೆ, ದೋಣಿ ಚಲಿಸುವಂತದ್ದು, ಪ್ರವಾಸೋದ್ಯಮ ಹೀಗೆ ಹಲವಾರು ಚಟುವಟಿಕೆಗಳು ನಡೆಯುತ್ತಿರುತ್ತದೆ. ಈ ಹಿಂದೆ ಈ ನದಿ ಪಾತ್ರದಲ್ಲಿ ಸಾಂಪ್ರದಾಯಿಕ ಮರಳುಗಾರಿಕೆ ನಡೆಯುತ್ತಿತ್ತು. ಹಾಗಾಗಿ ಇದರ ಪರಿಣಾಮ ನದಿ ಪಾತ್ರದಲ್ಲಿ ಯಾವುದೇ ಹೂಳು ಶೇಖರಣೆಯಾಗುತ್ತಿರಲಿಲ್ಲ. ನದಿಯು ಆಳವಾಗಿಯೂ ಹಾಗೂ ದೋಣಿಗಳು ಸರಾಗವಾಗಿಯೂ ಚಲಿಸುತ್ತಿತ್ತು.

ಆದರೆ ಇತ್ತೀಚಿಗೆ ಹೊಸ ಕಾನೂನಿನ ಪರಿಣಾಮ ಯಾವುದೇ ಮರಳುಗಾರಿಕೆ ಇಲ್ಲಿ ನಡೆಯುತ್ತಿಲ್ಲ. ಹಾಗಾಗಿ ನದಿಯಲ್ಲಿ ಹೂಳು ಶೇಖರಣೆಗೊಂಡು ನದಿ ಪಾತ್ರ ತುಂಬಿರುತ್ತದೆ. ಇದು ನದಿಯನ್ನು ಮುಚ್ಚಿದಂತೆ ಆಗಿದ್ದು, ಮಳೆಗಾಲದಲ್ಲಿ ಕೃತಕ ನೆರೆ ಬಂದು ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸುತ್ತದೆ. ನದಿ ಪಾತ್ರ ಹೂಳಿನಿಂದ ಮುಚ್ಚಿರುವುದರಿಂದ ದೋಣಿಗಳು ಯಾವುದೇ ದಿಕ್ಕಿನಲ್ಲಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ನೀರಿನ ಇಳಿತ ಕಾಲದಲ್ಲಿಯೂ ಮೈದಾನದಂತೆ ಮತ್ತು ಮರುಭೂಮಿಯಂತೆ ಗೋಚರಿಸುತ್ತದೆ. ಇದರ ಪರಿಣಾಮ ಇಲ್ಲಿ ಇತ್ತೀಚಿಗೆ ಕಾಂಡ್ಲ ಗಿಡಗಳು ಬೆಳೆದಿದ್ದು, ಅರಣ್ಯ ಇಲಾಖೆ ಇದನ್ನು ತೆರವುಗೊಳಿಸಲು ಬಿಡುತ್ತಿಲ್ಲ.

ಈ ಎಲ್ಲಾ ಕಾರಣಗಳಿಂದ ಈ ಕುಟುಂಬಗಳ ದೈನಂದಿನ ಬದುಕು ಹಾಗೂ ನದಿಯನ್ನು ಅವಲಂಭಿತರಾದ ಆ ಸಮಾಜದ ಮತ್ತು ಬಡ ಮೀನುಗಾರರ ಜೀವನ ಬಹಳ ಸಂಕಷ್ಟಕ್ಕೀಡಾಗಿದೆ. ಇದರೊಂದಿಗೆ ಪ್ರವಾಸೋದ್ಯಮ ಅವಕಾಶಗಳು ಕುಂಠಿತವಾಗಿವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!