Saturday, October 12, 2024

ಸಕಲೇಶಪುರ ಗುಡ್ಡ ಕುಸಿತ : ಹೆದ್ದಾರಿ ಸಂಚಾರ ಬಂದ್‌

ಜನಪ್ರತಿನಿಧಿ (ಹಾಸನ) : ಗುಡ್ಡ ಕುಸಿತದ ಕಾರಣದಿಂದ ಸಕಲೇಶಪುರ ತಾಲೂಕಿನ ಕುಂಬರಾಡಿ ಮತ್ತು ಹಾರ್ಲೆ ಎಸ್ಟೇಟ್ ನಡುವಿನ ರಸ್ತೆ ಕೊಚ್ಚಿ ಹೋಗಿದೆ.

ಅವೈಜ್ಞಾನಿಕವಾಗಿ ನಡೆಯುತ್ತಿರುವ ಎತ್ತಿನಹೊಳೆ ಯೋಜನೆಯಿಂದಾಗಿ ಸಕಲೇಶಪುರ ತಾಲೂಕಿನ ಕೆಲವೆಡೆ ಗುಡ್ಡ ಕುಸಿತ ಉಂಟಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಭಾರೀ ಮಳೆಗೆ ರಸ್ತೆ ಕೊಚ್ಚಿಹೋಗಿ 80 ಅಡಿ ಆಳಕ್ಕೆ ಕುಸಿದಿದೆ. ಅಕ್ಕಪಕ್ಕದ ಐದು ಗ್ರಾಮಗಳು ಹೋಬಳಿ ಮತ್ತು ತಾಲೂಕು ಕೇಂದ್ರಗಳಿಗೆ ಸಂಪರ್ಕ ಕಳೆದುಕೊಂಡಿವೆ. ಮಲ್ಲೇಗದ್ದೆ, ಕಾಡುಮನೆ ಹಾಗೂ ಹಾರ್ಲೆ ಜನರು ಗುಡ್ಡ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಗುಡ್ಡ ಕುಸಿತದ ಕಾರಣದಿಂದ ಆತಂಕಕ್ಕೊಳಗಾದ ಸ್ಥಳೀಯರು ಕಾಫಿ ಎಸ್ಟೇಟ್‌ಗಳಿಗೆ ಭೇಟಿ ನೀಡುವುದನ್ನೇ  ನಿಲ್ಲಿಸಿದ್ದಾರೆ. ಎತ್ತಿನಹೊಳೆ ಕಾಲುವೆ ಕಾಮಗಾರಿಯು ಭೂಕುಸಿತ ಸ್ಥಳದಿಂದ ಕೇವಲ 200 ಮೀಟರ್ ದೂರದಲ್ಲಿದೆ.

ಘಟನಾ ಸ್ಥಳಕ್ಕೆ ಕಂದಾಯ, ಪಿಡಬ್ಲ್ಯುಡಿ ಹಾಗೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ 24 ಗಂಟೆಗಳಿಂದ ಬೆಂಗಳೂರು ಮಂಗಳೂರು ಎನ್‌ಎಚ್ 75 ಮತ್ತು ಸಕಲೇಶಪುರ ತಾಲೂಕಿನ ವಿವಿಧೆಡೆ ಗುಡ್ಡ ಕುಸಿತ ಮುಂದುವರಿದಿದೆ.

ಭಾರಿ ಮಳೆ ಹಿನ್ನೆಲೆಯಲ್ಲಿ ಶಿರಾಢಿ ಘಾಟ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ ಉಂಟಾದ ಪರಿಣಾಮ ರಸ್ತೆ ಸಂಚಾರ ಬಂದ್‌ ಮಾಡಲಾಗಿದೆ ಎಂದು ತಿಳಿದು ಬಂದಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!