spot_img
Saturday, February 14, 2026
spot_img

ಡಾ.ಸುಧಾಕರ ನಂಬಿಯಾರ್ ಅವರಿಗೆ ವೈದ್ಯಸಿರಿ ಪುರಸ್ಕಾರ

ಕೋಟೇಶ್ವರ: ಆಯುಷ್ ಫೆಡರೇಷನ್ ಆಫ್ ಇಂಡಿಯ ಇದರ ಉಡುಪಿ ಜಿಲ್ಲಾ ಶಾಖೆಯ ನೇತೃತ್ವದಲ್ಲಿ ನಡೆದ ಕುಟುಂಭೋತ್ಸವ ಕಾರ್ಯಕ್ರಮದಲ್ಲಿ ಕೋಟೇಶ್ವರದ ವೈದ್ಯ ಡಾ.ಸುಧಾಕರ ನಂಬಿಯಾರ್ ಅವರಿಗೆ ಜಿಲ್ಲಾ ಮಟ್ಟದ ವೈದ್ಯ ಸಿರಿ ಪುರಸ್ಕಾರದೊಡನೆ ಸಮ್ಮಾನಿಸಲಾಯಿತು.

ಉಡುಪಿ ಪ್ರಸಾದ ನೇತ್ರಾಲಯದ ಅಡಳಿತ ನಿರ್ದೇಶಕ ಡಾ.ಕೃಷ್ಣಪ್ರಸಾದ ಅವರು ಡಾ. ನಂಬಿಯಾರ್ ಅವರನ್ನು ಸಮ್ಮಾನಿಸಿ ವೈದ್ಯಕೀಯ ಕ್ಷೇತ್ರದಲ್ಲಿನ ಅವರ ಸೇವೆಯನ್ನು ಶ್ಲಾಘಿಸಿದರಲ್ಲದೇ ಬಡ ರೋಗಿಗಳ ಬಗ್ಗೆ ಅವರಿಗಿರುವ ಕಾಳಜಿಯನ್ನು ಕೊಂಡಾಡಿದರು.

ಆಯುಷ್ ಫೆಡರೇಷನ್ ಆಫ್ ಇಂಡಿಯಾ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎನ್.ಟಿ. ಅಂಚನ್, ಜಿಲ್ಲಾ ಕಾರ್ಯದರ್ಶಿ ಡಾ.ಸತೀಶ್ ರಾವ್, ಉಡುಪಿ ತಾಲೂಕು ಅಧ್ಯಕ್ಷ ಡಾ.ಮನೋಜ್ ಕುಮಾರ್ ಶೆಟ್ಟಿ, ತಾಲೂಕು ಕಾರ್ಯದರ್ಶಿ ಡಾ.ಸಂದೀಪ್ ಸನಿಲ್, ಕುಂದಾಪುರ ಎ.ಎಫ್. ಐ. ಅಧ್ಯಕ್ಷ ಡಾ.ಹರಿಪ್ರಸಾದ ಶೆಟ್ಟಿ, ಉತ್ತರ ಕನ್ನಡ ಎ.ಎಫ್. ಐ. ಅಧ್ಯಕ್ಷ ಡಾ.ಸುನಿಲ್ ಜತ್ತನ್ನ, ಸಿನಿಮಾ ಹಾಗೂ ನಾಟಕದ ಹಾಸ್ಯನಟ ಪ್ರಸನ್ನಶೆಟ್ಟಿ ಬೈಲೂರು ಉಪಸ್ಥಿತರಿದ್ದರು.

ಡಾ.ಮನೋಜ್ ಕುಮಾರ್ ಶೆಟ್ಟಿ ಸ್ವಾಗತಿಸಿದರು.ಡಾ.ರವಿಪ್ರಸಾದ ಹೆಗ್ಡೆ ನಿರೂಪಿಸಿದರು. ಡಾ.ಸತೀಶರಾವ್ ವಂದಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಮಾಜಿ ಶಾಸಕ, ಜಿಲ್ಲೆಯ ಧಾರ್ಮಿಕ ಮುಂದಾಳು ಬಿ.ಅಪ್ಪಣ್ಣ ಹೆಗ್ಡೆ ಇನ್ನಿಲ್ಲ

kundapura: ಮಾಜಿ ಶಾಸಕ, ಉಡುಪಿ ಜಿಲ್ಲೆಯ ಧಾರ್ಮಿಕ ಮುಂದಾಳು, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದ ಅಗ್ರಮೇವ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇನ್ನೂ ನೆನಪು ಮಾತ್ರ. ಫೆ.7ಶನಿವಾರ (ಇಂದು ಬೆಳಿಗ್ಗೆ) ಅವರು ವಯೋಸಹಜ ಕಾರಣದಿಂದ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!