Saturday, October 12, 2024

ಬಿಲ್ಲವ ಸಮಾಜ ಸೇವಾ ಸಂಘ ಕುಂದಾಪುರ: ಜು.28ರಂದು ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಅಭಿನಂದನೆ: ವಿದ್ಯಾರ್ಥಿವೇತನ ವಿತರಣೆ

ಕುಂದಾಪುರ: ಬಿಲ್ಲವ ಸಮಾಜ ಸೇವಾ ಸಂಘ ರಿ., ಕುಂದಾಪುರ ವತಿಯಿಂದ ನೂತನ ಲೋಕಸಭಾ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಅಭಿನಂದನಾ ಕಾರ್ಯಕ್ರಮ ಮತ್ತು 32ನೇ ವರ್ಷದ ವಿದ್ಯಾರ್ಥಿ ಸಹಾಯಧನ ವಿತರಣೆ ಜು.28 ಆದಿತ್ಯವಾರ ಬೆಳಿಗ್ಗೆ 10 ಗಂಟೆಗೆ ಕುಂದಾಪುರ ಶ್ರೀ ನಾರಾಯಣಗುರು ಸಭಾಭವನದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಅಶೋಕ್ ಪೂಜಾರಿ ಬೀಜಾಡಿ ವಹಿಸಲಿದ್ದಾರೆ. ಬಿಲ್ಲವ ಸಮಾಜಸೇವಾ ಸಂಘದ ಗೌರವಾಧ್ಯಕ್ಷರಾದ ಸುರೇಶ್ ಎಸ್.ಪೂಜಾರಿ ದೀಪ ಪ್ರಜ್ವಲನೆ ಮಾಡಲಿದ್ದಾರೆ. ವಿಧಾನ ಪರಿಷತ್ ಮಾಜಿ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಪ್ರತಿಭಾ ಪುರಸ್ಕಾರ ನೆರವೇರಿಸಲಿದ್ದಾರೆ. ಶಾಸಕ ವಿ.ಸುನೀಲ್ ಕುಮಾರ್ ಸಾಧಕರಿಗೆ ಸನ್ಮಾನ ನೆರವೇರಿಸಲಿದ್ದಾರೆ. ವಿದ್ಯಾರ್ಥಿ ಸಹಾಯಧನ ವಿತರಣೆಯನ್ನು ಕರ್ಕಿ ಗ್ರೀನ್ ಲ್ಯಾಂಡ್ ಟೈಲ್ಸ್ ಇದರ ಆಡಳಿತ ನಿರ್ದೇಶಕ ನಾರಾಯಣ ಟಿ.ಪೂಜಾರಿ ನೆರವೇರಿಸಲಿದ್ದಾರೆ.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನದ ಕಾರ್ಯದರ್ಶಿ ರವಿ ಕುಮಾರ್ ಎಚ್.ಆರ್, ರೋಟರಿ ಗವರ್ನರ್ ದೇವ್ ಆನಂದ್ ಸಿ‌ಎ., ಮುಂಬೈ ಉದ್ಯಮಿ ಪರಮೇಶ್ವರ ನಾಗ ಪೂಜಾರಿ ಬಿಜೂರು, ನಾರಾಯಣ ಪೂಜಾರಿ ಹಳ್ಳಿಬೈಲು, ಹಳ್ಳಿಹೊಳೆ, ಗೋವಾ ಉದ್ಯಮಿ ಸತೀಶ್ ಪೂಜಾರಿ ಮರವಂತೆ, ಬಿಲ್ಲವ ಸಮಾಜ ಸೇವಾ ಸಂಘ ಕುಂದಾಪುರ ಇದರ ಉಪಾಧ್ಯಕ್ಷ ರಾಮ ಪೂಜಾರಿ ಮುಲ್ಲಿಮನೆ, ಶಿವರಾಮ ಪೂಜಾರಿ ಬಸ್ರೂರು, ಶ್ರೀನಾರಾಯಣ ಗುರು ಯುವಕ ಮಂಡಲ ರಿ., ಕುಂದಾಪುರ ಅಧ್ಯಕ್ಷರಾದ ಸಂದೇಶ್ ಪೂಜಾರಿ ಬೀಜಾಡಿ, ಬಿಲ್ಲವ ಮಹಿಳಾ ಘಟಕದ ಅಧ್ಯಕ್ಷರಾದ ಗಿರಿಜಾ ಮಾಣಿಗೋಪಾಲ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮಕ್ಕೆ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಅಶೋಕ್ ಪೂಜಾರಿ ಬೀಜಾಡಿ, ಪ್ರಧಾನ ಕಾರ್ಯದರ್ಶಿ ಗಣೇಶ ಪೂಜಾರಿ ವಿಠಲವಾಡಿ, ಪ್ರಧಾನ ಕೋಶಾಧಿಕಾರಿ ರಮೇಶ್ ಪೂಜಾರಿ ಮೇಲ್ ಹಿತ್ಲು, ಶ್ರೀ ನಾರಾಯಣ ಗುರು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ದತ್ತಿ ಸಂಸ್ಥೆ ರಿ., ಕುಂದಾಪುರ ಇದರ ಪ್ರಧಾನ ಕಾರ್ಯದರ್ಶಿ ರಾಜೇಶ್ ಕಡ್ಗಿಮನೆ ತಿಳಿಸಿದ್ದಾರೆ.

 

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!