Thursday, March 28, 2024

ಹೊಸ ಅಡಿಕೆ ತೋಟ ಮಾಡುವಾಗ ತಿಳಿದಿರಬೇಕಾದ ಅಂಶಗಳು

 


ಹೊಸದಾಗಿ ಅಡಿಕೆ ತೋಟ ಮಾಡುವಾಗ ಸಾಕಷ್ಟು ವಿಚಾರಗಳನ್ನು ರೈತ ತಿಳಿದುಕೊಂಡಿರಬೇಕು. ಅನುಭವಿ ಕೃಷಿಕರು, ಕೃಷಿ ಅಧಿಕಾರಿಗಳು ಅಥವಾ ತಜ್ಞರಿಂದ ಮುಂಚಿತವಾಗಿ ಮಾಹಿತಿ ಪಡೆದುಕೊಳ್ಳುವುದು ಒಳಿತು.ಕಾರಣ ಕೆಲವರು ಹೊಸದಾಗಿ ಅಡಿಕೆ ತೋಟ ಮಾಡುವಾಗ, ಯಾವುದನ್ನು ಗಮನಿಸದೇ ಅಡಿಕೆ ಗಿಡ ಹಾಕುತ್ತಾರೆ. ನಂತರ ಹಲವು ಸಮಸ್ಯೆಗಳಿಂದ ಫಸಲು ಬರುವುದರ ಜೊತೆಗೆ ರೋಗಗಳು ಕೂಡ ಜಾಸ್ತಿ ಎದುರಿಸಬೇಕಾಗುತ್ತದೆ.

ಹೊಸದಾಗಿ ಅಡಿಕೆ ತೋಟ ಮಾಡುವಾಗ ಜಾಗ ಮುಖ್ಯವಲ್ಲ. ಮಣ್ಣು ಮತ್ತು ಬೀಜ ಉಪಚಾರ ಮಾಡುವುದು ಮುಖ್ಯವಾಗಿರುತ್ತದೆ. ಕಾರಣ ನಾವು ಮಾಡುವುದು ಹೊಸದಾಗಿ ಇರಬಹುದು ಆದರೆ ಪಕ್ಕದಲ್ಲಿ ಇನ್ನೊಬ್ಬರ ಅಡಿಕೆ ತೋಟದಲ್ಲಿ ರೋಗ ಬಂದರೆ ಅದು ನಮ್ಮ ಅಡಿಕೆ ತೋಟಕ್ಕೂ ಆವರಿಸುತ್ತವೆ. ಅಷ್ಟೇ ಅಲ್ಲ ಪಕ್ಕದ ತೋಟದವರು 750 ಮೋಹಿತನಗರ ಅಡಿಕೆ ಗಿಡ ಬೆಳೆಸಿದರೆ ಅವರ ಪಕ್ಕದಲ್ಲಿ ಇರುವ ನಾವು 250 ಇಂಟರ್‍ಸಿ ಮಂಗಳ ತೋಟ ಮಾಡಿದರೆ ನಮ್ಮ ಅಡಿಕೆ ಮರ ಕೂಡ ಮೋಹಿತ್‍ನಗರ ಗಿಡವಾಗಿ ಪರಿವರ್ತಿಸುತ್ತದೆ. ಕಾರಣ ಹತ್ತಿರದಲ್ಲಿ ಇರುವ ತೋಟ ಯಾವ ಜಾತಿಯನ್ನು ಹೊಂದಿಕೊಂಡಿರುತ್ತದೆಯೋ ಅದೇ ಗುಣವನ್ನು ಪಕ್ಕದಲ್ಲಿ ಅಲ್ಪ ಸ್ವಲ್ಪ ಇರುವ ತೋಟದ ಗಿಡಗಳು ಹೊಂದುತ್ತದೆ. ಅಷ್ಟೇ ಅಲ್ಲ ನಾವು ಮಾಡಿರುವ ತೋಟದ ಸುತ್ತಲೂ ಬೇರೆ ಬೇರೆ ಜಾತಿಯ ಸ್ಥಳೀಯ ಮರಗಳಿದ್ದರೆ ಅಲ್ಲಿ ಬಿದ್ದಿರುವ ಕಸಕಡ್ಡಿಯಿಂದ ಕೂಡ ಹಲವು ರೋಗಗಳು ಅಡಿಕೆ ಮರಕ್ಕೆ ಮಾರಕವಾಗಿ ಕಾಡುತ್ತದೆ. ಇನ್ನು ಒಂದು ಮುಖ್ಯ ವಿಚಾರ ಏನೆಂದರೆ ನಮ್ಮ ತೋಟಕ್ಕೆ ರೋಗ ಬಾರದಿದ್ದರೂ ಪಕ್ಕದ ತೋಟಕ್ಕೆ ರೋಗ ಬಂದರೆ ಅವರು ಔಷಧ ಸಿಂಪಡಿಸಿದರೆ ಅವರ ತೋಟಕ್ಕೆ ಬಂದ ಬ್ಯಾಕ್ಟೀರೀಯಾಗಳು ಅವರು ಸಿಂಪಡಿಸುವ ಔಷಧದಿಂದ ಅಲ್ಲಿಂದ ಹಾರಿ ನಮ್ಮ ತೋಟಕ್ಕೆ ಬರುತ್ತದೆ. ಆಗ ನಾವು ಔಷಧ ಸಿಂಪಡಿಸುವುದು ಮುಖ್ಯವಾಗಿರುತ್ತದೆ.

ಮಳೆಗಾಲದಲ್ಲಿ ಅಡಿಕೆ ಮರಕ್ಕೆ ಬಂದಿರುವ ರೋಗ ಬಂದಿದ್ದರೆ ಅಡಿಕೆ ಏಳೆಕಾಯಿ ಉದುರಿದ್ದಾಗ ತಕ್ಷಣವೇ ನಾವು ಅದನ್ನು ಸಂಪೂರ್ಣ ತೆಗೆದು ಬೇರೆ ಕಡೆ ಎಸೆಯಬೇಕು. ಮರದ ಬುಡದಲ್ಲಿ ಅದು ಇದ್ದರೆ ಸೊಳ್ಳೆಗಳು ಹೆಚ್ಚಾಗಿ ಅಡಿಕೆ ಏಳೆಕಾಯಿ ಉದುರುವಿಕೆ ಹೆಚ್ಚಾಗುತ್ತದೆ. ನಂತರ ಯಾವ ಔಷಧವು ತಡೆಗಟ್ಟುವ ಕೆಲಸ ಮಾಡುವುದಿಲ್ಲ. ಏಪ್ರಿಲ್ ಕೊನೆಯಲ್ಲಿ ಮತ್ತು ಮೇ20ರವರೆಗೆ ಉದುರುವ ಹಿಂಗಾರ ತಡೆಗಟ್ಟಲು ಯಾವ ಔಷಧಿಯಿಂದಲೂ ಆಸಾಧ್ಯ. ಕಾರಣ, ಪ್ರತಿ ಅಡಿಕೆ ಮರಗಳು ತನಗೆ ಬೇಕಾಗುವ ಆಹಾರವನ್ನು ಹಿಂಗಾರನ್ನು ಉದುರುವಿಸಿಕೊಂಡೆ ಆಹಾರ ಉತ್ಪತ್ತಿ ಮಾಡುತ್ತದೆ. ಇದು ಯಾವ ರೋಗದ ಲಕ್ಷಣಗಳು ಅಲ್ಲ, ಕೆಲವು ಕೆಲವೇ ರೈತರು ರಾಸಾಯನಿಕ ಔಷಧ ಸಿಂಪರಣೆ ಮಾಡುತ್ತಾರೆ. ಹೀಗಾಗಿ ಎಷ್ಟು ಜನ ರೈತರು ಇನ್ನು ಕೂಡ ಕೆಲವೇ ಅಡಿಕೆ ಮರದ ಲಕ್ಷಣದ ಬಗ್ಗೆ ಅರಿವೇ ಇರುವುದಿಲ್ಲ.

ಇನ್ನು ಕೆಲವೇ ಜನ ರೈತರು ಮಳೆಗಾಲ ಪ್ರಾರಂಭದಲ್ಲಿ ಬೈಯೋಪಾಟ್ ಸಿಂಪರಣೆ ಮಾಡುತ್ತಾರೆ. ಇನ್ನು ಕೆಲವೇ ಜನ ರೈತರು ಒಂದೆರಡು ಮಳೆ ಬಂದ ಮೇಲೆ ಬೋರ್ಡೋ ದ್ರಾವಣ ಸಿಂಪರಣೆ ಮಾಡುತ್ತಾರೆ. ಬೈಯೋಪಾಟ್ ಸಿಂಪರಣೆ ಮಾಡುವುದಾದರೆ ಮೇ 15ರ ನಂತರ ಸಿಂಪರಣೆ ಮಾಡಿದರೆ ನಡುವೆ ಒಂದು ಮಳೆ ಬಂದರೆ ಈ ಸಿಂಪರಣೆ ಏನು ಉಪಯೋಗವಿಲ್ಲ. ಹಾಗಾಗಿ ಬೈಯೋಪಾಟ್ ಏನೇ ಇದ್ದರು ಮೇ15ರ ಒಳಗಡೆ ಸಿಂಪರಣೆ ಮಾಡಬೇಕು. ಮೈಲುತುತ್ತು-ಸುಣ್ಣ-ಗಮ್ ಬೆರೆಸಿ ಸಿಂಪರಣೆ ಮಾಡುವುದಾದರೆ ಜೂನ್ 1-2 ಮಳೆ ಬಂದ ನಂತರ ಮಾಡಬೇಕು. ಬೈಯೋಪಾಟ್ ಕನಿಷ್ಟ 45 ದಿವಸ ರೋಗ ಬರದಂತೆ ತಡೆದರೆ ಮೈಲ್ತುತ್ತು ಸುಣ್ಣ ಗಮ್ ಬರೆ 30 ದಿವಸ ತನ್ನ ಕಾರ್ಯನಿರ್ವಹಿಸುತ್ತದೆ.

ರೈತರು ಮುಖ್ಯವಾಗಿ ತಿಳಿದುಕೊಳ್ಳಬೇಕಾದ ಅಂಶಗಳು?
ಹೊಸದಾಗಿ ಅಡಿಕೆ ತೋಟ ಮಾಡುವವರು ಯಾರಾದರೂ ಇದರೆ ಇದನ್ನು ಗಮನಿಸಲೇಬೇಕು. 100 ಮೀ ಅಂತರದಲ್ಲಿ ಬೇರೊಂದು ಅಡಿಕೆ ತೋಟ ಇಲ್ಲದಿದ್ದರೆ ನೀವು ಯಾವ ಜಾತಿ ಅಡಿಕೆ ಬೇಕಾದರು ತೋಟ ಮಾಡಿ ಗುಣಮಟ್ಟದ ಫಸಲು ಬೆಳೆಯಬಹುದು. ಅದೇ ಪಕ್ಕದಲ್ಲೇ ಇನ್ನೊಬ್ಬರ ಅಡಿಕೆ ತೋಟ ಇದ್ದರೆ ರೋಗಗಳು ಜಾಸ್ತಿ. ಅಷ್ಟೇ ಅಲ್ಲ ಪರಾಗ ಸ್ಪರ್ಶದಿಂದ ತಳಿ ಗುಣಗಳು ಬದಲಾಗುತ್ತದೆ. ರೈತನಿಗೆ ಗುಣಮಟ್ಟದ ಬೀಜದ ಆಯ್ಕೆ, ಉಪಚಾರದ ಜೊತೆಗೆ ಮಣ್ಣಿನ ಗುಣದ ಬಗ್ಗೆಯೂ ಮಾಹಿತಿ ಅತ್ಯಗತ್ಯ. ಅಡಿಕೆ ಜಾತಿ ಯಾವುದೇ ಆಗಲಿ. ಗಿಡದ ಅಂತರ ಕೂಡ 9×9ಇರಲೇಬೇಕು. ಕನಿಷ್ಟ 8×8 ಆದರೂ ಇರಲೇಬೇಕು.

-ದಿನಕರ ಶೆಟ್ಟಿ ಮುಂಬಾರು. (mo:9449944344)

Related Articles

Stay Connected

21,961FansLike
3,912FollowersFollow
21,600SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!