Saturday, September 14, 2024

ಮೊಗವೀರ ಯುವ ಸಂಘಟನೆ ಹೆಮ್ಮಾಡಿ ಘಟಕ : ವನ ಮಹೋತ್ಸವ ಹಾಗೂ ಗಿಡ ವಿತರಣೆ 

ಹೆಮ್ಮಾಡಿ : ಮೊಗವೀರ ಯುವ ಸಂಘಟನೆ( ರಿ )ಉಡುಪಿ ಜಿಲ್ಲೆ ಹೆಮ್ಮಾಡಿ ಘಟಕದ ನೇತೃತ್ವದಲ್ಲಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್(ರಿ ), ಅಂಬಲಪಾಡಿ ಉಡುಪಿ, ಗೀತಾನಂದ ಫೌಂಡೇಶನ್ ಮಣೂರು ಕೋಟ, ಮೊಗವೀರ ಮಹಾಜನ ಸೇವಾ ಸಂಘ (ರಿ. ),ಬಗ್ವಾಡಿ ಹೋಬಳಿ ಕುಂದಾಪುರ ಶಾಖೆ, ಹೆಮ್ಮಾಡಿ ಮೀನುಗಾರರ ಪ್ರಾಥಮಿಕ  ಸಹಕಾರಿ ಸಂಘ(ನಿ )ಹೆಮ್ಮಾಡಿ, ಮಹಿಷಾಸುರ ಮರ್ದಿನಿ ಸ್ತ್ರೀಶಕ್ತಿ ಬಗ್ವಾಡಿ ಇವರ ಸಹಕಾರದೊಂದಿಗೆ ವನ ಮಹೋತ್ಸವ ಹಾಗೂ ಗಿಡ ವಿತರಣಾ ಕಾರ್ಯಕ್ರಮ ಬಗ್ವಾಡಿ ಶ್ರೀ ಮಹಿಷಾಸುರಮರ್ದಿನಿ ಸಭಾಂಗಣದಲ್ಲಿ ಜುಲೈ 19ರಂದು ಜರುಗಿತು.
ಮೊಗವೀರ ಯುವ ಸಂಘಟನೆ( ರಿ )ಉಡುಪಿ ಜಿಲ್ಲೆ ಇದರ ಅಧ್ಯಕ್ಷರಾದ ಜಯಂತ್ ಅಮೀನ್ ಕೋಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಗಿಡವನ್ನು ವಿತರಿಸಿದರು. ಗಿಡ ನೆಡುವುದು ಮಾತ್ರವಲ್ಲ ಅದನ್ನು ಪೋಷಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ಹೇಳಿದರು.
 ಹೆಮ್ಮಾಡಿ ಘಟಕದ ಅಧ್ಯಕ್ಷರಾದ ದಿನೇಶ್ ಕಾಂಚನ್ ಬಾಳಿಕೆರೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮೊಗವೀರ ಮಹಾಜನ ಸೇವಾ ಸಂಘ (ರಿ ),ಬಗ್ವಾಡಿ ಹೋಬಳಿ ಕುಂದಾಪುರ ಶಾಖೆಯ ಮಾಜಿ ಅಧ್ಯಕ್ಷ ಎಂ, ಎಂ,ಸುವರ್ಣ, ಘಟಕದ ಉಸ್ತುವಾರಿ ಹಾಗೂ ಜಿಲ್ಲಾ ಸಂಘಟನೆ ಉಪಾಧ್ಯಕ್ಷರಾದ ರವೀಶ್  ಕೊರವಡಿ, ಮಹಿಷಾಸುರಮರ್ದಿನಿ ಸ್ತ್ರೀಶಕ್ತಿ ಬಗ್ವಾಡಿ ಇದರ ಅಧ್ಯಕ್ಷರಾದ ಶ್ರೀಮತಿ ಶ್ಯಾಮಲಾ ಚಂದನ್ ಉಪಸ್ಥಿತರಿದ್ದರು.
 ಘಟಕದ ಗೌರವಾಧ್ಯಕ್ಷ ಲೋಹಿತಾಶ್ವ ಆರ್ ಕುಂದರ್ ಸ್ವಾಗತಿಸಿ,ಪ್ರಸ್ತಾಪಿಸಿದರು. ಕಾರ್ಯದರ್ಶಿ ಜಗದೀಶ ನೆಂಪು ವಂದಿಸಿದರು. ಸ್ತ್ರೀಶಕ್ತಿ ಸದಸ್ಯರಾದ ಶ್ರೀಮತಿ ಗಿರಿಜಾ ಪ್ರಾರ್ಥಿಸಿದರು. ಘಟಕದ ನಿಕಟ ಪೂರ್ವ ಕಾರ್ಯದರ್ಶಿ ಪ್ರವೀಣ್ ಮೊಗವೀರ ಗಂಗೊಳ್ಳಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲಾ ಸದಸ್ಯರಿಗೆ,ಆಹ್ವಾನಿತರಿಗೆ ಗಿಡವನ್ನು ವಿತರಿಸಲಾಯಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!